ಹಿಟ್ ಮ್ಯಾಚ್ ರೋಹಿತ್ ಶರ್ಮಾ ಟೀಂ ಇಂಡಿಯಾ ರಣಬೇಟೆಗಾರ. ಒಂದು ಬಾರಿ ಕ್ರೀಸ್ ಗೆ ಕಚ್ಚಿ ನಂತ್ರೆ ಅಲ್ಲಿ ಎದುರಾಳಿ ಬೌಲರ್ ಗಳ ಮಾರಣಹೋಮ ಗ್ಯಾರಂಟಿ. ಯಾವುದೇ ಕನಿಕರ ಇಲ್ಲದೇ ದಡಂ ದಶಗುಣಂ ಎಂಬಂತೆ ಬೌಲರ್ ಗಳ ಮೇಲೆ ಸವಾರಿ ಮಾಡುತ್ತಾರೆ. ಮೈದಾನ ಅಷ್ಟ ದಿಕ್ಕುಗಳಿಗೂ ಚೆಂಡಿನ ಪರಿಚಯ ಮಾಡಿಸುತ್ತಾರೆ.
ಈಗ ಡಬಲ್ ಸೆಂಚೂರಿ ಸ್ಟಾರ್ ಆಗಿ ಮಿಂಚುತ್ತಿರುವ ರೋಹಿತ್, ಒಂದು ಕಾಲದಲ್ಲಿ ತಂಡದಲ್ಲಿ ಸ್ಥಾನ ಪಡೆಯೋದೇ ಡೌಟ್ ಆಗಿತ್ತು. ಅದರಲ್ಲೂ 2011ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದೇ ಇದ್ದಾಗ ಟ್ವಿಟ್ಟರ್ ಮೂಖೇನ ತಮ್ಮ ಅಂಸತೃಪ್ತಿಯನ್ನು ಹೊರಹಾಕಿದ್ದರು. ಇದೀಗ ಆ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು..! ಈಗಾಗಲೇ ಟಿ20 ನಾಯಕನಾಗಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದಿರುವ ರೋಹಿತ್, ಈಗ ಟೀಂ ಇಂಡಿಯಾದ ಏಕದಿನ ತಂಡ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಿರೋದು ಟೆಸ್ಟ್ ನಾಯಕತ್ವ ಮಾತ್ರ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು, “ಎಲ್ಲಾ ಫಾರ್ಮ್ಯಾಟ್‌ಗಳಿಗೆ ಒಬ್ಬನೇ ನಾಯಕನನ್ನು ಹೊಂದಿದ್ದರೆ ಚೆನ್ನಾಗಿರುತ್ತದೆ ಅಂತ ಹೇಳಿಕೆ ನೀಡಿದ್ದು, ರೋಹಿತ್ ಶೀಘ್ರದಲ್ಲೇ ಟೆಸ್ಟ್ ನಾಯಕನಾಗುವ ಸಾಧ್ಯತೆಯಿದೆ. ಆ ಮೂಲಕ ಟೀಂ ಇಂಡಿಯಾದಲ್ಲಿ ರೋಹಿತ್ ಯುಗ ಆರಂಭವಾಗಲಿದೆ.
ಆದರೆ, ರೋಹಿತ್ ಶರ್ಮಾ 2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಗೆ ಪ್ರಕಟವಾದ ತಂಡದಲ್ಲಿ ಸ್ಥಾನಪಡೆದಿರಲಿಲ್ಲ. ಆಗ ಫಾರ್ಮ್‌ನಲ್ಲಿ ಇಲ್ಲದ ಕಾರಣ ರೋಹಿತ್ ಅವರನ್ನು ಪರಿಗಣಿಸಿರಲಿಲ್ಲ. ಇದರಿಂದ ರೋಹಿತ್ ಟ್ವಿಟರ್ ನಲ್ಲಿ ”2011ರ ವಿಶ್ವಕಪ್ ಸಂಬಂಧಿಸಿದಂತೆ ಟೀಂ ಇಂಡಿಯಾ ಆಯ್ಕೆಯಾಗದಿರುವುದು ತುಂಬಾ ಬೇಸರ ತಂದಿದೆ. ಆ ಕ್ಷಣ ಕ್ರಿಕೆಟ್ ಬಿಟ್ಟುಬಿಡಲು ನಿರ್ಧರಿಸಿದ್ದೆ. ಆದರೆ ಆಟದ ಮೇಲಿನ ಪ್ರೀತಿ ನನ್ನನ್ನು ನಿಲ್ಲಿಸಿತು.
ನಿಜ ಹೇಳಬೇಕೆಂದರೆ .. ಆ ಸಮಯದಲ್ಲಿ ಯಾವುದೇ ಕೋನದಿಂದ ನೋಡಿದ್ರೂ ಅದು ದೊಡ್ಡ ನ್ಯೂನತೆಯಂತೆ ಕಾಣುತ್ತಿದೆ.” ಎಂದು ಬರೆದುಕೊಂಡಿದ್ದರು. ಆ ವಿಶ್ವಕಪ್ ನಡೆದು ಇದೀಗ ಸರಿಯಾಗಿ ಹತ್ತು ವರ್ಷ. ಈಗ ರೋಹಿತ್ ಶರ್ಮಾ ಪ್ರಸ್ತುತ ವೈಟ್ ಬಾಲ್ ಕ್ರಿಕೆಟ್ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಮುಂದಿನ ಎರಡು ವರ್ಷಗಳಲ್ಲಿ ಎರಡು ಪ್ರಮುಖ ಐಸಿಸಿ ಟೂರ್ನಿಗಳನ್ನು ಆಡಲಿದೆ. ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಪ್ ಗೆಲ್ಲುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಆಂಟೋನಿ ಬೇಗೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700