nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದರ್ | ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ

    July 5, 2025

    ಲವ್, ಸೆಕ್ಸ್ ದೋಖಾ: ಬಿಜೆಪಿ ಮುಖಂಡನ ಮಗ ಅರೆಸ್ಟ್

    July 5, 2025

    ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕುಗಳೂ ನನಗೆ ಮುಖ್ಯ: ಡಿ.ಕೆ.ಶಿವಕುಮಾರ್

    July 5, 2025
    Facebook Twitter Instagram
    ಟ್ರೆಂಡಿಂಗ್
    • ಬೀದರ್ | ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ
    • ಲವ್, ಸೆಕ್ಸ್ ದೋಖಾ: ಬಿಜೆಪಿ ಮುಖಂಡನ ಮಗ ಅರೆಸ್ಟ್
    • ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕುಗಳೂ ನನಗೆ ಮುಖ್ಯ: ಡಿ.ಕೆ.ಶಿವಕುಮಾರ್
    • ವೈ.ಎನ್.ಹೊಸಕೋಟೆ:  “ಓರಿಗಾಮಿಯಲ್ಲಿ ಗಣಿತ ಕಾರ್ಯಾಗಾರ”
    • ಯುವ ಜನತೆ ಕಾನೂನು ಸುರಕ್ಷತೆ ಪಾಲನೆ, ಸಾಮಾಜಿಕ ಜವಾಬ್ದಾರಿ ರೂಢಿಸಿಕೊಳ್ಳಬೇಕು: ಪ್ರಸನ್ನ ಕುಮಾರ್ ಸಲಹೆ
    • ಮೇಕೆದಾಟು ಯೋಜನೆ: ಕಾಂಗ್ರೆಸ್ ಗೆ ಮತ್ತೆ ಸವಾಲು ಹಾಕಿದ ಹೆಚ್.ಡಿ.ಕುಮಾರಸ್ವಾಮಿ
    • ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು
    • ಹಿಂದೂ ಮುಖಂಡನ ಮೊಬೈಲ್ ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಆಗ ತಂಡದಲ್ಲಿ ಸ್ಥಾನವೇ ಇರಲಿಲ್ಲ.. ಈಗ ಕ್ಯಾಪ್ಟನ್
    ರಾಷ್ಟ್ರೀಯ ಸುದ್ದಿ December 11, 2021

    ಆಗ ತಂಡದಲ್ಲಿ ಸ್ಥಾನವೇ ಇರಲಿಲ್ಲ.. ಈಗ ಕ್ಯಾಪ್ಟನ್

    By adminDecember 11, 2021No Comments2 Mins Read
    rohith

    ಹಿಟ್ ಮ್ಯಾಚ್ ರೋಹಿತ್ ಶರ್ಮಾ ಟೀಂ ಇಂಡಿಯಾ ರಣಬೇಟೆಗಾರ. ಒಂದು ಬಾರಿ ಕ್ರೀಸ್ ಗೆ ಕಚ್ಚಿ ನಂತ್ರೆ ಅಲ್ಲಿ ಎದುರಾಳಿ ಬೌಲರ್ ಗಳ ಮಾರಣಹೋಮ ಗ್ಯಾರಂಟಿ. ಯಾವುದೇ ಕನಿಕರ ಇಲ್ಲದೇ ದಡಂ ದಶಗುಣಂ ಎಂಬಂತೆ ಬೌಲರ್ ಗಳ ಮೇಲೆ ಸವಾರಿ ಮಾಡುತ್ತಾರೆ. ಮೈದಾನ ಅಷ್ಟ ದಿಕ್ಕುಗಳಿಗೂ ಚೆಂಡಿನ ಪರಿಚಯ ಮಾಡಿಸುತ್ತಾರೆ.

    ಈಗ ಡಬಲ್ ಸೆಂಚೂರಿ ಸ್ಟಾರ್ ಆಗಿ ಮಿಂಚುತ್ತಿರುವ ರೋಹಿತ್, ಒಂದು ಕಾಲದಲ್ಲಿ ತಂಡದಲ್ಲಿ ಸ್ಥಾನ ಪಡೆಯೋದೇ ಡೌಟ್ ಆಗಿತ್ತು. ಅದರಲ್ಲೂ 2011ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದೇ ಇದ್ದಾಗ ಟ್ವಿಟ್ಟರ್ ಮೂಖೇನ ತಮ್ಮ ಅಂಸತೃಪ್ತಿಯನ್ನು ಹೊರಹಾಕಿದ್ದರು.  ಇದೀಗ ಆ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


    Provided by

    ಹೌದು..! ಈಗಾಗಲೇ ಟಿ20 ನಾಯಕನಾಗಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದಿರುವ ರೋಹಿತ್,  ಈಗ ಟೀಂ ಇಂಡಿಯಾದ ಏಕದಿನ ತಂಡ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಿರೋದು  ಟೆಸ್ಟ್ ನಾಯಕತ್ವ ಮಾತ್ರ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು, “ಎಲ್ಲಾ ಫಾರ್ಮ್ಯಾಟ್‌ಗಳಿಗೆ ಒಬ್ಬನೇ ನಾಯಕನನ್ನು ಹೊಂದಿದ್ದರೆ ಚೆನ್ನಾಗಿರುತ್ತದೆ ಅಂತ ಹೇಳಿಕೆ ನೀಡಿದ್ದು, ರೋಹಿತ್ ಶೀಘ್ರದಲ್ಲೇ ಟೆಸ್ಟ್ ನಾಯಕನಾಗುವ ಸಾಧ್ಯತೆಯಿದೆ. ಆ ಮೂಲಕ ಟೀಂ ಇಂಡಿಯಾದಲ್ಲಿ ರೋಹಿತ್ ಯುಗ ಆರಂಭವಾಗಲಿದೆ.

    ಆದರೆ, ರೋಹಿತ್ ಶರ್ಮಾ 2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಗೆ ಪ್ರಕಟವಾದ ತಂಡದಲ್ಲಿ ಸ್ಥಾನಪಡೆದಿರಲಿಲ್ಲ. ಆಗ ಫಾರ್ಮ್‌ನಲ್ಲಿ ಇಲ್ಲದ ಕಾರಣ ರೋಹಿತ್ ಅವರನ್ನು ಪರಿಗಣಿಸಿರಲಿಲ್ಲ. ಇದರಿಂದ ರೋಹಿತ್ ಟ್ವಿಟರ್ ನಲ್ಲಿ ”2011ರ ವಿಶ್ವಕಪ್‌ ಸಂಬಂಧಿಸಿದಂತೆ ಟೀಂ ಇಂಡಿಯಾ ಆಯ್ಕೆಯಾಗದಿರುವುದು ತುಂಬಾ ಬೇಸರ ತಂದಿದೆ. ಆ ಕ್ಷಣ ಕ್ರಿಕೆಟ್ ಬಿಟ್ಟುಬಿಡಲು ನಿರ್ಧರಿಸಿದ್ದೆ. ಆದರೆ ಆಟದ ಮೇಲಿನ ಪ್ರೀತಿ ನನ್ನನ್ನು ನಿಲ್ಲಿಸಿತು.

    ನಿಜ ಹೇಳಬೇಕೆಂದರೆ .. ಆ ಸಮಯದಲ್ಲಿ ಯಾವುದೇ ಕೋನದಿಂದ ನೋಡಿದ್ರೂ ಅದು ದೊಡ್ಡ ನ್ಯೂನತೆಯಂತೆ ಕಾಣುತ್ತಿದೆ.” ಎಂದು ಬರೆದುಕೊಂಡಿದ್ದರು. ಆ ವಿಶ್ವಕಪ್ ನಡೆದು ಇದೀಗ ಸರಿಯಾಗಿ ಹತ್ತು ವರ್ಷ.  ಈಗ ರೋಹಿತ್ ಶರ್ಮಾ ಪ್ರಸ್ತುತ ವೈಟ್ ಬಾಲ್ ಕ್ರಿಕೆಟ್ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಮುಂದಿನ ಎರಡು ವರ್ಷಗಳಲ್ಲಿ ಎರಡು ಪ್ರಮುಖ ಐಸಿಸಿ ಟೂರ್ನಿಗಳನ್ನು ಆಡಲಿದೆ. ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಪ್ ಗೆಲ್ಲುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

    ವರದಿ: ಆಂಟೋನಿ ಬೇಗೂರು

     

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    admin
    • Website

    Related Posts

    ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು

    July 5, 2025

    ಪತಿಯಿಂದಲೇ ಮಹಿಳಾ ಕೌನ್ಸಿಲರ್‌ ಬರ್ಬರ ಹತ್ಯೆ!

    July 4, 2025

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025
    Our Picks

    ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು

    July 5, 2025

    ಪತಿಯಿಂದಲೇ ಮಹಿಳಾ ಕೌನ್ಸಿಲರ್‌ ಬರ್ಬರ ಹತ್ಯೆ!

    July 4, 2025

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025

    ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್‌ ಐ) ಯೋಜನೆಗೆ ಸಚಿವ ಸಂಪುಟದ ಅನುಮೋದನೆ

    July 3, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೀದರ್ | ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ

    July 5, 2025

    ಬೀದರ್ : ಜಿಲ್ಲೆಯ ಘೋಡಂಪಳ್ಳಿ ಗ್ರಾಮದಲ್ಲಿ ಇರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ…

    ಲವ್, ಸೆಕ್ಸ್ ದೋಖಾ: ಬಿಜೆಪಿ ಮುಖಂಡನ ಮಗ ಅರೆಸ್ಟ್

    July 5, 2025

    ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕುಗಳೂ ನನಗೆ ಮುಖ್ಯ: ಡಿ.ಕೆ.ಶಿವಕುಮಾರ್

    July 5, 2025

    ವೈ.ಎನ್.ಹೊಸಕೋಟೆ:  “ಓರಿಗಾಮಿಯಲ್ಲಿ ಗಣಿತ ಕಾರ್ಯಾಗಾರ”

    July 5, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.