nammatumakuru

    Subscribe to Updates

    Get the latest creative news from FooBar about art, design and business.

    What's Hot

    ದುಃಖದ ನಡುವೆಯೂ ಅಪೂರ್ವ ಸಾಧನೆ: ತಾಯಿಯನ್ನು ಕಳೆದುಕೊಂಡರೂ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 600 ಅಂಕ ಗಳಿಸಿದ ದಿಶಾ!

    April 10, 2026

    ತುಮಕೂರು: ಯೂರಿಯಾ ರಸಗೊಬ್ಬರ ಖರೀದಿಗೆ ‘ಫ್ರೂಟ್ ಐಡಿ’ (FID) ಕಡ್ಡಾಯ

    April 10, 2026

    ಬೆಂಗಳೂರು–ಮೈಸೂರು ನಡುವೆ ಶೀಘ್ರವೇ 130 ಕಿ.ಮೀ. ವೇಗದಲ್ಲಿ ರೈಲು ಸಂಚಾರ: ಪ್ರಯಾಣದ ಅವಧಿ ಇಳಿಕೆ: ಸಚಿವ ವಿ. ಸೋಮಣ್ಣ

    April 10, 2026
    Facebook Twitter Instagram
    ಟ್ರೆಂಡಿಂಗ್
    • ದುಃಖದ ನಡುವೆಯೂ ಅಪೂರ್ವ ಸಾಧನೆ: ತಾಯಿಯನ್ನು ಕಳೆದುಕೊಂಡರೂ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 600 ಅಂಕ ಗಳಿಸಿದ ದಿಶಾ!
    • ತುಮಕೂರು: ಯೂರಿಯಾ ರಸಗೊಬ್ಬರ ಖರೀದಿಗೆ ‘ಫ್ರೂಟ್ ಐಡಿ’ (FID) ಕಡ್ಡಾಯ
    • ಬೆಂಗಳೂರು–ಮೈಸೂರು ನಡುವೆ ಶೀಘ್ರವೇ 130 ಕಿ.ಮೀ. ವೇಗದಲ್ಲಿ ರೈಲು ಸಂಚಾರ: ಪ್ರಯಾಣದ ಅವಧಿ ಇಳಿಕೆ: ಸಚಿವ ವಿ. ಸೋಮಣ್ಣ
    • ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ
    • ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ: ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು
    • ತುಮಕೂರು: ಹಣದ ವಿಚಾರಕ್ಕೆ ತಂದೆಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ
    • ಶಿರಾದ ಹೊನ್ನೇನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ; ಕೊಳವೆಬಾವಿ ಕೊರೆಯುವ ವಾಹನ ತಡೆದು ಆಕ್ರೋಶ
    • ಪಾವಗಡ: ರಾಮಕೃಷ್ಣ ಸೇವಾಶ್ರಮದಿಂದ ಮೇವು ವಿತರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಬಲೀಕರಣದ ಮಾದರಿ: ಆಶುತೋಷ್ ಅದೋನಿ
    ತುಮಕೂರು March 25, 2025

    ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಬಲೀಕರಣದ ಮಾದರಿ: ಆಶುತೋಷ್ ಅದೋನಿ

    By adminMarch 25, 2025No Comments2 Mins Read
    ahalya bai

    ತುಮಕೂರು: ಹದಿನೆಂಟನೆಯ ಶತಮಾನದಲ್ಲೇ ಕಲ್ಯಾಣರಾಜ್ಯದ ಪರಿಕಲ್ಪನೆಯನ್ನು ನನಸಾಗಿಸಿದ ದಿಟ್ಟ ಆಡಳಿತಗಾರ್ತಿ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಬಲೀಕರಣದ ಅತ್ಯುತ್ತಮ ಮಾದರಿ ಎಂದು ಲೇಖಕ, ವಿದ್ವಾಂಸ ಆಶುತೋಷ್ ಅದೋನಿ ಅಭಿಪ್ರಾಯಪಟ್ಟರು.

    ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಕನ್ನಡ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ‘ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನ ಮತ್ತು ಸಾಧನೆಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


    Provided by
    Provided by

    ಅಹಲ್ಯಾಬಾಯಿ ಕಾಲದಲ್ಲಿ ಮಾಳ್ವ ಪ್ರದೇಶವು ಭಾರತದ ಅತ್ಯಂತ ಶ್ರೀಮಂತ ರಾಜ್ಯವೆಂದು ಗುರುತಿಸಿಕೊಂಡಿತ್ತು. ತನ್ನ ಪತಿ ಹಾಗೂ ಮಗನನ್ನು ಅಕಾಲದಲ್ಲಿ ಕಳೆದುಕೊಂಡ ಆಕೆ ಅನೇಕ ತೊಂದರೆಗಳನ್ನು ಮೆಟ್ಟಿನಿಂತು ದಕ್ಷ ಆಡಳಿತ ನೀಡಿದಳು. ಏಕಾಂಗಿ ಹೋರಾಟ ಮಾಡಿ ಸುಖೀರಾಜ್ಯವನ್ನು ಸ್ಥಾಪಿಸಿದಳು ಎಂದು ವಿವರಿಸಿದರು.

    ಅಹಲ್ಯಾಬಾಯಿಯ ಮಾವ ಮಲ್ಹಾರ ರಾವ್ ಆಕೆಯನ್ನು ಗಂಡುಮಕ್ಕಳಿಗೆ ಸರಿಸಮನಾಗಿ ಬೆಳೆಸಿ ರಾಜಕಾರ್ಯಗಳ ಅನುಭವ ನೀಡಿದರು. ಯುದ್ಧವಿದ್ಯೆ, ವಾಕ್ ಚಾತುರ್ಯ, ದೂರದೃಷ್ಟಿ ಎಲ್ಲವನ್ನೂ ಕರಗತ ಮಾಡಿಕೊಳ್ಳುವಂತೆ ಪ್ರೇರಣೆ ನೀಡಿದರು. ಮಹಿಳಾ ಸಬಲೀಕರಣದ ಬಗ್ಗೆ ನಾವು ಈಗ ಮಾತಾಡುತ್ತಿದ್ದೇವೆ. ಇದನ್ನು ಮುನ್ನೂರು ವರ್ಷಗಳ ಹಿಂದೆಯೇ ಭಾರತದ ಪ್ರಾಂತ್ಯವೊಂದು ಮಾಡಿತೋರಿಸಿತ್ತು ಎಂದು ವಿಶ್ಲೇಷಿಸಿದರು.

    ಸಚ್ಚಾರಿತ್ರ್ಯವಿಲ್ಲದೆ ಯಾವುದೇ ರಾಷ್ಟ್ರ ಎದ್ದುನಿಲ್ಲದು. ಯಾರೇ ಆಡಳಿತಗಾರರು ಶ್ರೇಷ್ಠರು ಎನಿಸಿಕೊಳ್ಳಲಾರರು. ಆದರೆ ಅಹಲ್ಯಾಬಾಯಿ ನೈತಿಕವಾಗಿ ಅದ್ಭುತ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಅವರ ವೈಯಕ್ತಿಕ ಬದುಕು ಪಾರದರ್ಶಕವಾಗಿತ್ತು. ಚಾರಿತ್ರö್ಯಕ್ಕೂ ರಾಜಕೀಯಕ್ಕೂ ಸಂಬಂಧವಿದೆ ಎಂಬುದನ್ನು ಆಕೆ ತೋರಿಸಿಕೊಟ್ಟರು ಎಂದರು.

    ಅಹಲ್ಯಾಬಾಯಿಗೆ ಸಾಮಾಜಿಕ ಜವಾಬ್ದಾರಿಯ ಸ್ಪಷ್ಟ ಕಲ್ಪನೆಯಿತ್ತು. ನೀರಿನ ರಕ್ಷಣೆ, ಪ್ರಕೃತಿಯ ಪರಿಪಾಲನೆ, ಪರಿಸರ ಸಂರಕ್ಷಣೆ, ಉದ್ಯೋಗ ವೃದ್ಧಿ ಮುಂತಾದ ಆಧುನಿಕ ಅಗತ್ಯಗಳನ್ನು ಆಕೆ ಮನಗಂಡಿದ್ದಳು. ಇಂದಿನ ಯುವ ಜನತೆ ಅವರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಎಂತಹ ಸಮಸ್ಯೆಗಳು ಇದ್ದರೂ ಸಹ ಖಿನ್ನತೆಗೆ ಒಳಪಡದೆ ಧೈರ್ಯವಾಗಿ ಜೀವನವನ್ನು ಸಾಗಿಸಬೇಕು ಎಂಬುದನ್ನು ಅಹಲ್ಯಾಬಾಯಿಯ ಬದುಕನ್ನು ನೋಡಿ ಕಲಿಯಬೇಕು ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ. ಮಾತನಾಡಿ, ಕಟ್ಟುಪಾಡುಗಳ ಮಧ್ಯೆಯೂ ಮನಸ್ಸು ಮಾಡಿದರೆ ಮಹಿಳೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಹೋಳ್ಕರ್ ಉತ್ತಮ ಮಾದರಿಯಾಗಿ ನಿಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟರು.

    ಮುನ್ನೂರು ವರ್ಷಗಳ ಹಿಂದೆ ಭಾರತದ ಪರಿಸ್ಥಿತಿ ಹೇಗಿತ್ತೆಂದು ಊಹಿಸಬಹುದು. ಅಷ್ಟು ಅಡೆತಡೆಗಳ ನಡುವೆ ಆಕೆ ಹೊಂದಿದ್ದ ಕಲ್ಯಾಣರಾಜ್ಯದ ಕಲ್ಪನೆ ಶ್ರೇಷ್ಠವಾದದ್ದು. ಅಹಲ್ಯಾಬಾಯಿ ಬಗ್ಗೆ ಹೆಚ್ಚಿನ ಓದು, ಅಧ್ಯಯನ, ಸಂಶೋಧನೆ ನಡೆಯಬೇಕು ಎಂದರು.

    ಸಿಂಡಿಕೇಟ್ ಸದಸ್ಯ ಡಾ.ಕೆ.ರಾಜೀವಲೋಚನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಸಿಬಂತಿ ಪದ್ಮನಾಭ ಕೆ.ವಿ. ಸ್ವಾಗತಿಸಿದರು. ಡಾ. ಜಿ. ಗಿರಿಜಮ್ಮ ವಂದಿಸಿದರು. ಅಖಿಲಾಂಡೇಶ್ವರಿ ನಿರೂಪಿಸಿದರು. ಬೆಂಗಳೂರಿನ ಕಲಾಸಂಪದ ಸಂಸ್ಥೆಯ ವಿದುಷಿ ವೀಣಾ ಸಿ. ಶೇಷಾದ್ರಿಯವರ ತಂಡವು ‘ಚಿನ್ಮಾತೆ ಅಹಲ್ಯಾ– ತ್ರಿಶತಿ ಅತುಲ್ಯ’ ಎಂಬ ನೃತ್ಯರೂಪಕವನ್ನು ಪ್ರಸ್ತುತಪಡಿಸಿತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ತುಮಕೂರು: ಯೂರಿಯಾ ರಸಗೊಬ್ಬರ ಖರೀದಿಗೆ ‘ಫ್ರೂಟ್ ಐಡಿ’ (FID) ಕಡ್ಡಾಯ

    April 10, 2026

    ತುಮಕೂರು: ಹಣದ ವಿಚಾರಕ್ಕೆ ತಂದೆಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ

    April 9, 2026

    ಕುಣಿಗಲ್: ದಲಿತ ಮುಖಂಡರುಗಳೊಂದಿಗೆ ಕುಂದುಕೊರತೆ ಸಭೆ

    April 9, 2026

    Comments are closed.

    Our Picks

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ದುಃಖದ ನಡುವೆಯೂ ಅಪೂರ್ವ ಸಾಧನೆ: ತಾಯಿಯನ್ನು ಕಳೆದುಕೊಂಡರೂ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 600 ಅಂಕ ಗಳಿಸಿದ ದಿಶಾ!

    April 10, 2026

    ಮಂಗಳೂರು: ಜೀವನದಲ್ಲಿ ಎದುರಾದ ಅತಿದೊಡ್ಡ ದುರಂತವನ್ನೇ ಮೆಟ್ಟಿ ನಿಂತು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ…

    ತುಮಕೂರು: ಯೂರಿಯಾ ರಸಗೊಬ್ಬರ ಖರೀದಿಗೆ ‘ಫ್ರೂಟ್ ಐಡಿ’ (FID) ಕಡ್ಡಾಯ

    April 10, 2026

    ಬೆಂಗಳೂರು–ಮೈಸೂರು ನಡುವೆ ಶೀಘ್ರವೇ 130 ಕಿ.ಮೀ. ವೇಗದಲ್ಲಿ ರೈಲು ಸಂಚಾರ: ಪ್ರಯಾಣದ ಅವಧಿ ಇಳಿಕೆ: ಸಚಿವ ವಿ. ಸೋಮಣ್ಣ

    April 10, 2026

    ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ

    April 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.