ವಿಜಯಪುರ: ಮೂರು ದಶಕಗಳಿಂದ ವಾಸವಿದ್ದರೂ ವಾಸಕ್ಕೆ ಮನೆಯಿಲ್ಲದೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಅಲೆಮಾರಿಗಳು ಪರದಾಡುತ್ತಿದ್ದಾರೆ. ಇದನ್ನು ಕಂಡು ಸ್ಥಳೀಯ ಶಾಸಕ ಕರುಣಾಕರ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಅಲೆಮಾರಿಗಳು ಮೂರು ದಶಕಗಳಿಂದ ಇಲ್ಲಿ ವಾಸವಿದ್ದು, ನೆರವಿಗಾಗಿ ಈ ವರೆಗೆ ಮನವಿ ಸಲ್ಲಿಸಿದರೂ ಪ್ರಯೋಜನ ವಾಗಿಲ್ಲ. ಬುಡ್ಗ ಜಂಗಮ ಬುಡಕಟ್ಟಿನ ಅಲೆಮಾರಿಗಳು ವಾಸಕ್ಕೆ ಮನೆ ಕೊಡುವಂತೆ ವಿನಂತಿಸುತ್ತಾ ಬಂದಿದ್ದಾರೆ. ಈಗಾಗಲೇ ಕೆಲ ಕಡೆ ಸ್ಥಳ ನೋಡಲಾಗಿದೆ. ಅದಷ್ಟು ಬೇಗ ಎಲ್ಲ ಅಲೆಮಾರಿಗಳಿಗೆ ಮನೆ ನೀಡುವುದಾಗಿ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಭರವಸೆ ನೀಡಿದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700