ಎಲ್ಲರಿಗೂ ತಿಳಿದಿರುವಂತೆ ರೇಷನ್ ಕಾರ್ಡ್ ಎನ್ನುವುದು ನಮ್ಮ ವಾಸ ಸ್ಥಳದ ಬಗ್ಗೆ ನೀಡಲಾಗುವ ಪ್ರಮುಖ ದಾಖಲೆಯಾಗಿದೆ. ಮನೆಯಲ್ಲಿ ಇರುವ ಪ್ರತಿಯೊಬ್ಬ ಸದಸ್ಯರ ಹೆಸರನ್ನು ಕೂಡ ರೇಷನ್ ಕಾರ್ಡ್ ನಲ್ಲಿ ಸೇರಿಸಿ ಸರ್ಕಾರದ ಎಲ್ಲಾ ರೀತಿಯ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ರೇಷನ್ ಕಾರ್ಡ್ ಅಂದ ತಕ್ಷಣ ಬಿಪಿಎಲ್ ಕಾರ್ಡ್ ಮಾತ್ರ ನೆನಪಿಗೆ ಬರುತ್ತೆ, ಆದರೆ ಬಡತನ ರೇಖೆಗಿಂತ ಮೇಲೆ ಇರುವವರಿಗೆ ಎಪಿಎಲ್ ಕಾರ್ಡ್ ಹಾಗೂ ಬಡತನ ರೇಖೆಗಿಂತ ಇನ್ನೂ ಕೆಳಗಿನವರೆಗೆ ಅಂತ್ಯೋದಯ ರೇಷನ್ ಕಾರ್ಡ್ ಕೂಡ ವಿತರಣೆ ಮಾಡಲಾಗುತ್ತದೆ.
ರಾಜ್ಯ ಸರ್ಕಾರ ರೇಷನ್ ಕಾರ್ಡ್ ಗೆ ಸಂಬಂಧಪಟ್ಟಂತೆ ಬಹಳ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತಿದೆ ಈಗಾಗಲೇ ಕಳೆದ ಆರು ತಿಂಗಳುಗಳಿಂದ ಯಾರು ರೇಷನ್ ಪಡೆದುಕೊಂಡಿಲ್ಲವೋ ಅಂತವರ ರೇಷನ್ ಕಾರ್ಡ್ ಅಮಾನತ್ತು ಗೊಳಿಸಿದೆ.
ಒಂದಷ್ಟು ರೇಷನ್ ಕಾರ್ಡ್ ಗಳು ರದ್ದಾಗಿದ್ದರೆ, ಇನ್ನೊಂದಿಷ್ಟು ರೇಷನ್ ಕಾರ್ಡ್ ಗಳು ಅಮಾನತ್ತು ಗೊಂಡಿದೆ. ಒಟ್ಟಿಗೆ 3.26 ಲಕ್ಷ ರೇಷನ್ ಕಾರ್ಡ್ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ನೀವಿನ್ನು ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಮನೆಯ ಎಲ್ಲಾ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಿಲ್ಲ ಎಂದಾದರೆ ಅಥವಾ ರೇಷನ್ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಮಾಡಿಕೊಳ್ಳಬೇಕು. ಎಂದಾದರೆ ಯಾವುದೇ ನ್ಯಾಯಬೆಲೆ ಅಂಗಡಿಗೆ ಅಥವಾ ಸೇವ ಕೇಂದ್ರಕ್ಕೆ ಹೋಗುವ ಅಗತ್ಯ ಇಲ್ಲ. ಮನೆಯಲ್ಲಿ ಕುಳಿತು ಆನ್ಲೈನ್ ನಲ್ಲಿ ಹೆಸರು ಸೇರ್ಪಡೆ ಮಾಡಬಹುದು.
NFSH.gov.in ಈ ವೆಬ್ ಸೈಟ್ ಗೆ ಹೋಗಿ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಪಡೆಯಬಹುದು ನಿಮ್ಮ ರಾಜ್ಯ, ಜಿಲ್ಲೆ ಊರು ಮೊದಲಾದ ಮಾಹಿತಿಗಳನ್ನು ನೀಡಿ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿದರೆ ರೇಷನ್ ಕಾರ್ಡ್ ಸದಸ್ಯರ ಹೆಸರು ಮೊದಲಾದ ವಿವರಗಳು ಕಾಣಿಸುತ್ತದೆ.
ಇನೊ ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರುಗಳನ್ನು ಸೇರಿಸಲು https://ahara.kar.nic.in/ ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಇಲ್ಲಿ ರೇಷನ್ ಕಾರ್ಡ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದ್ರೆ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಮಾಹಿತಿ ಪಡೆಯಬಹುದು ಮತ್ತು ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ.
ಹೊಸದಾಗಿ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರಿಗೆ ಸರ್ಕಾರ ಈಗಾಗಲೇ ಅವಕಾಶ ನೀಡಿದೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಈ ಪ್ರಕ್ರಿಯೆ ಬಹಳ ನಿಧಾನಗತಿಯಲ್ಲಿ ನಡೆಯುತ್ತಿದೆ. ವೈದ್ಯಕೀಯ ಎಮರ್ಜೆನ್ಸಿ ಇರುವ ಕುಟುಂಬದವರು ಅರ್ಜಿ ಸಲ್ಲಿಸಿದರೆ ಬೇಗ ರೇಷನ್ ಕಾರ್ಡ್ ದೊರೆಯುತ್ತದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA