ಕರ್ತವ್ಯಲೋಪ, ದುರ್ನಡತೆಗೆ ತೋರಿದ ಹಿನ್ನೆಲೆ ಕಗ್ಗಲಿಪುರ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಕುಮಾರ್ ಸಸ್ಪೆಂಡ್ ಆಗಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ DGP ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ. ವಿಜಯ್ ಕುಮಾರ್ ಅಧಿಕಾರ ದುರ್ಬಳಕೆ ಮಾಡಿ ಉದ್ಧಟತನ ತೋರುತ್ತಿದ್ದರು.
ಇವರ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿತ್ತು, ದೂರು ಹಿನ್ನೆಲೆ ವಿಚಾರಣೆಗೆ ಆದೇಶಿಸಲಾಗಿತ್ತು. ವಿಚಾರಣೆಯಲ್ಲಿ ಕರ್ತವ್ಯಲೋಪ, ಅಶಿಸ್ತು ಸಾಬೀತಾಗಿದ್ದು, ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.


