ಪ್ರಸಕ್ತ ವರ್ಷದ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮಾನ್ಯತೆ ಪಡೆಯುವ ಮತ್ತು ನವೀಕರಣಕ್ಕೆ ಆನ್ ಲೈನ್ ಮೂಲಕ 3,260 ಅರ್ಜಿಗಳು ಸಲ್ಲಿಕೆಯಾಗಿದ್ದು, 823 ಅರ್ಜಿಗಳನ್ನು ಮಾತ್ರ ಪುರಸ್ಕರಿಸಿ ಮಾನ್ಯತೆ ನವೀಕರಿಸಲಾಗಿದೆ.
ಹಾಗಾಗಿ ಮಾನ್ಯತೆ ಪಡೆಯಲು ಅ. 25ರೊಳಗೆ ಪುನಾಃ ಅರ್ಜಿಯನ್ನು ಸಲ್ಲಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಹಾಗೆಯೇ 2021-22 ಹಾಗೂ 2022-23ನೆ ಸಾಲಿನಲ್ಲಿ ಮಾನ್ಯತೆ ಪಡೆಯಲು ಅರ್ಜಿ ಸಲ್ಲಿಸಿದ್ದು, ಅರ್ಜಿಗಳು ತಿರಸ್ಕೃತವಾಗಿದ್ದರೆ ಪುನಃ ಅರ್ಜಿಗಳನ್ನು ಸಲ್ಲಿಸಬೇಕು.


