ಕಡಿಮೆ ಬೆಲೆಯ ಉತ್ಪನ್ನಗಳನ್ನು ಖರೀದಿಸುವ ಜನರನ್ನು ಗುರಿಯಾಗಿಸಿ, ಕಡಿಮೆ ಬೆಲೆಯ, ಬ್ರ್ಯಾಂಡ್ ಹೊರತಾದ ಉಡುಪುಗಳು ಹಾಗೂ ಲೈಫ್ ಸ್ಟೈಲ್ ಉತ್ಪನ್ನಗಳಿಗಾಗಿ ಅಮೆಜಾನ್ ಹೊಸ ತಾಣ ‘ಅಮೆಜಾನ್ ಬಜಾರ್’ನ್ನು ಆರಂಭಿಸುತ್ತಿದೆ ಎಂದು ತಿಳಿದು ಬಂದಿದೆ.
ಅಮೆಜಾನ್ ಬಜಾರ್ ಪ್ರಸ್ತುತ ಮಾರಾಟಗಾರರನ್ನು ಆನ್ ಬೋರ್ಡಿಂಗ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಇವರಿಗೆ ಉಡುಪುಗಳು, ಕೈಗಡಿಯಾರಗಳು, ಚಪ್ಪಲಿ, ಆಭರಣಗಳು ಸೇರಿದಂತೆ 600 ರೂ.ಗಿಂತ ಕಡಿಮೆ ಬೆಲೆಯ ಬ್ರ್ಯಾಂಡ್ ಅಲ್ಲದ ಉತ್ಪನ್ನಗಳನ್ನು ಪಟ್ಟಿ ಮಾಡುವಂತೆ ತಿಳಿಸಿದೆ ಎಂದು ವರದಿ ಮಾಡಿದೆ.
ಈ ಮೂಲಕ ಕಡಿಮೆ ಬೆಲೆಯ ಉತ್ಪನ್ನಗಳನ್ನು ಖರೀದಿಸುವ ಭಾರತೀಯ ಗ್ರಾಹಕರ ವಿಭಾಗವನ್ನು ಕೈವಶ ಮಾಡಿಕೊಳ್ಳಲು ಅಮೆಜಾನ್ ಹೊರಟಿದೆ. ಈಗಾಗಲೇ ಸಾಮೂಹಿಕ-ಮಾರುಕಟ್ಟೆ ಉತ್ಪನ್ನಗಳಿಗೆ ಬೇಡಿಕೆ ನಿಧಾನವಾಗಿದ್ದು, ಇದೀಗ ಬೇರೆ ದಾರಿಯಲ್ಲಿ ಆದಾಯ ಗಳಿಸಲು ಅಮೆಜಾನ್ ಹೊರಟಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


