ತುಮಕೂರು: ನಗರದಲ್ಲಿ ದಲಿತ ಜನಾಂದೋಲನ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಅವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಸಲಾಯಿತು.
ಟೌನ್ ಹಾಲ್ ಮಹಾನಗರ ಪಾಲಿಕೆ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಗುಂಚಿ ವೃತ್ತದವರೆಗೂ ಹೆಜ್ಜೆ ಹಾಕಿದ ವಿವಿಧ ಜಾನಪದ ಕಲಾತಂಡಗಳಿಗೆ ಚಾಲನೆ ನೀಡಿ ಮಾತನಾಡಿದ ತುಮಕೂರು ನಗರ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ದೇಶದಲ್ಲಿ ಬಡವರು ಶೋಷಿತರು ಸಮಾನವಾಗಿ ಬದುಕಬೇಕಾದರೆ ಸಮಾನವಾದ ಜೀವನ ನಡೆಸಬೇಕಾದರೆ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳು ಮತ್ತು ನೀತಿ ವಾಕ್ಯಗಳನ್ನು ಪಾಲನೆ ಮಾಡಿ ಸಂವಿಧಾನದ ಅಡಿಯಲ್ಲಿ ಐಕ್ಯತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದರು.
ಏಪ್ರಿಲ್ 14ರ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಆಯೋಜನೆ ಮಾಡಿದ್ದ ಕಾರಣದಿಂದಾಗಿ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲು ಆಗಲಿಲ್ಲ, ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ತತ್ವದರ್ಶನಗಳನ್ನ ಜಗತ್ತಿಗೆ ಸಾರಲು ದಲಿತ ಜನಾಂದೋಲನ ಸಮಿತಿಯ ಜಿಲ್ಲಾಧ್ಯಕ್ಷರಾದ ಟಿ.ಸಿ.ರಾಮಯ್ಯ ಸೇರಿದಂತೆ ಅವರ ಸಂಗಡಿಗರು ಬಹಳ ವಿಜ್ರಂಭಣೆಯಿಂದ ಅರ್ಥಪೂರ್ಣವಾಗಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಿಸುವುದು ಶ್ಲಾಘನೀಯವೆಂದು ಪ್ರಶಂಸಿದರು.
ದಲಿತ ಜನಾಂದೋಲನಾ ಸಮಿತಿಯ ಜಿಲ್ಲಾಧ್ಯಕ್ಷ ಟಿಸಿ ರಾಮಯ್ಯ ಮಾತನಾಡಿ, ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಪವಿತ್ರವಾದ ಸ್ವಾತಂತ್ರ್ಯದ ಜೊತೆಗೆ ಸೂಕ್ತ ಸಂವಿಧಾನ ಒದಗಿಸಿದ್ದು ಈತ ಮಹಾಜ್ಞಾನಿಯನ್ನು ವರ್ಷದ 324 ದಿನವೂ ನೆನೆಯುವುದು ನಮ್ಮಗಳ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಟಿ.ಸಿ.ರಾಮಯ್ಯ, ಸಿದ್ದೇಶ್, ನೇಗಲಾಲ, ಯೋಗೀಶ್ ಎಂ., ಎಚ್. ರಂಗನಾಥ್ ಮದಕರಿ, ಹೆತ್ತೇನಳ್ಳಿ ನರಸಿಂಹಮೂರ್ತಿ, ಅಮರ್, ಮಾರುತಿ, ರಾಮಮೂರ್ತಿ, ಮೋಹನ್, ದೇವರಾಜ್, ರವಿ, ರಮೇಶ, ರಾಜಣ್ಣ ಗೂಳೂರು, ರಘು, ಆನಂದ್, ಶಿವಣ್ಣ ಅಕ್ಷರ ದಾಸೋಹ, ಸುರೇಶ, ಅರ್ಜುನ ಹಾಗೂ ದಲಿತ ಆಂದೋಲನ ಸಮಿತಿ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಕೀಲರಾದ ಚಿನ್ಮಯಿ ಹಾಗೂ ಸಾಮಾಜಿಕ ಹೋರಾಟಗಾರರಾದ ಹಂದ್ರಾಳ್ ನಾಗಭೂಷಣ್ ಹಾಗೂ ತುಮಕೂರಿನ ದಲಿತ ಸಂಘಟನೆಯ ಎಲ್ಲಾ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA