ತುಮಕೂರು: ಕೆ.ಎಸ್.ಆರ್.ಟಿ.ಸಿ. ವಿಭಾಗದ ತುರುವೇಕೆರೆ ಘಟಕದ ಬಸ್ ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ.ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪರಿನಿಬ್ಬಾಣ ದಿನ ನಮನ ಕಾರ್ಯಕ್ರಮ ನಡೆಸಲಾಯಿತು.
ಬಸ್ ನಿಲ್ದಾಣದ ಮುಂಬಾಗಿಲಿನಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ಕಾಯಕ್ರಮದಲ್ಲಿ ಘಟಕದ ವ್ಯವಸ್ಥಾಪಕರಾದ ತಮ್ಮಯ್ಯ ಸಂಚಾರ ನಿರೀಕ್ಷಕರಾದ ಶ್ವೇತ, ಘಟಕದ ಎಸ್ಸಿ, ಎಸ್ಟಿ ಅಧ್ಯಕ್ಷರಾದ ಗಂಗಾಧರ್ ಬಿ.ವಿಭಾಗಮಟ್ಟದ ಪ್ರಧಾನಕಾರ್ಯದರ್ಶಿ ಡಿ.ಸಿ.ವನರಂಗಪ್ಪ,ಹಿರಿಯ ಉಪಾಧ್ಯಕ್ಷರಾದ ಜಗಣ್ಣ, ಜಂಟಿ ಕಾರ್ಯದರ್ಶಿಯಾದ ಚಂದ್ರಶೇಖರ್ ಹಾಗೂ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700