ಹೆಚ್ ಡಿ ಕೋಟೆ: ಆಂಬ್ಯುಲೆನ್ಸ್ ಸೇವೆ ಇಲ್ಲದೆ ಬೊಮ್ಮಲಾಪುರ ಹಾಡಿಯ ಬಾಣಂತಿ ರಂಜಿತಾ ಅವರು ಹೆರಿಗೆಗಾಗಿ ಒಂದು ಕಿ.ಮೀ ದೂರದ ತನಕ ನಡೆದಿರುವ ಘಟನೆ, ಪತ್ರಿಕೆಯಲ್ಲಿ ವರದಿಯಾದ ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ” ಟಿ. ರವಿಕುಮಾರ್ ಮತ್ತು ತಂಡದವರು, ಇಂದು ರಂಜಿತಾ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬಳಿಕ ಮಾತನಾಡಿದ ಅವರು ಬೊಮ್ಮಲಾಪುರ ಹಾಡಿಯ ರಸ್ತೆಗೆ 300 ಮೀಟರ್ ನಷ್ಟು ಜಲ್ಲಿ- ಕಲ್ಲುಗಳನ್ನು ಹಾಕಿರುವುದರಿಂದ ಆಂಬ್ಯುಲೆನ್ಸ್ ಮನೆಯ ತನಕ ಬರಲು ಸಾಧ್ಯವಾಗಿರಲಿಲ್ಲ ಎಂದರು.
ನಡೆದುಕೊಂಡು ಬಂದಂತಹ ರಂಜಿತಾ ಅವರನ್ನು ಗ್ರಾಮದ ಜನತೆ ಹಾಗೂ ಆಶಾಕಾರ್ಯಕರ್ತೆಯರ ಸಹಕಾರದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಯಿತು ಎಂದು ಹೇಳಿದರು.
ತಾಯಿ ಮತ್ತು ಮಗುವಿನ ಆರೋಗ್ಯವನ್ನು ವಿಚಾರಿಸಿ, ತಾಯಿಗೆ ರಕ್ತ ಕಡಿಮೆಯಾಗಿರುವುದರಿಂದ ರಕ್ತ ಪರೀಕ್ಷೆ ಮಾಡುವಂತೆ ಸ್ಥಳೀಯ ವೈದ್ಯಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಆಶಾಕಾರ್ಯಕರ್ತೆಯರು ಹಾಗೂ ಇನ್ನಿತರರು ಇದ್ದರು.
ವರದಿ: ಚಂದ್ರ ಹಾದನೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700