ತುಮಕೂರು: ತೋಟದಲ್ಲಿ ಆಡವಾಡುತ್ತಿದ್ದ ವೇಳೆ ಬಾವಿಗೆ ಬಿದ್ದ ತಮ್ಮನನ್ನು 8 ವರ್ಷದ ಬಾಲಕಿ ಬಾವಿಗೆ ಹಾರಿ ರಕ್ಷಿಸಿದ ಘಟನೆ ತುಮಕೂರು ತಾಲ್ಲೂಕು ಕುಚ್ಚಂಗಿಯಲ್ಲಿ ನಡೆದಿದೆ.
ತುಮಕೂರು ತಾಲ್ಲೂಕು ಕುಚ್ಚಂಗಿಯ ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದ ಉತ್ತರ ಪ್ರದೇಶ ಮೂಲದ ಜೀತೇಂದ್ರ- ರಾಜಕುಮಾರಿ ದಂಪತಿಯ ಮಕ್ಕಳಾದ 8 ವರ್ಷದ ಶಾಲೂ, 7 ವರ್ಷದ ಹಿಮಾಂಶೂ, 3 ವರ್ಷದ ರಾಶಿ, 2 ವರ್ಷದ ಕಪಿಲ್ ತೋಟದ ಬಾವಿಯ ಬಳಿಯಲ್ಲಿ ಆಟವಾಡುತ್ತಿದ್ದರು.
ಈ ವೇಳೆ ಬಾಲ್ ತೆಗೆಯಲು ಹೋಗಿದ್ದ ಹಿಮಾಂಶೂ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ. ತಮ್ಮ ಬಾವಿಗೆ ಬಿದ್ದಿರುವುದನ್ನು ಕಂಡ ಶಾಲೂ ತಕ್ಷಣವೇ ಮನೆಯಲ್ಲಿದ್ದ ಲೈಫ್ ಜಾಕೀಟ್ ಧರಿಸಿ ಬಾವಿ ಹಾರಿದ್ದಾಳೆ, ಇದೇ ವೇಳೆ ಅಕ್ಕ ಪಕ್ಕದ ಜನರು ಶಾಲೂ ಸಹಾಯಕ್ಕೆ ಬಂದಿದ್ದು, ಇಬ್ಬರನ್ನೂ ಬಾವಿಯಿಂದ ಮೇಲಕ್ಕೆತ್ತಿದ್ದಾರೆ.
ಬಾವಿಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹಿಮಾಂಶುವನ್ನು ಕೊನೆಗೂ ಶಾಲೂ ರಕ್ಷಿಸಿದ್ದಾಳೆ. ಈಕೆ ಕಳೆದ ಮೂರ್ನಾಲ್ಕು ತಿಂಗಳಿಂದ ಈಜು ಕಲಿಯುತ್ತಿದ್ದಳು. ಬಾಡಿಗೆ ಮನೆ ಮಾಲೀಕ ಧನಂಜಯ್ಯ ಅವರ ಬಳಿ ಈಜು ಕಲಿಯುತ್ತಿದ್ದಳು. ಹೀಗಾಗಿ ಲೈಫ್ ಜಾಕೀಟ್ ಧರಿಸಿ ಈಜುವುದನ್ನು ಕಲಿತಿದ್ದಳು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA