ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಕೃಷ್ಣ ನಾಯ್ಡು (88) ಮತ್ತು ಸರೋಜಮ್ಮ (72) ಆತ್ಮಹತ್ಯೆ ಮಾಡಿಕೊಂಡ ವೃದ್ದ ದಂಪತಿ.
ರಾತ್ರಿ ವೃದ್ಧದಂಪತಿ ಬಟ್ಟೆಗಳಿಂದ ಮನೆಯಲ್ಲಿರೋ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿ ಮಗ ಅಶೋಕ್ ಮುಂಜಾನೆ 5.30 ಸುಮಾರಿಗೆ ಹೋಗಿ ಬಾಗಿಲು ಬಡಿದಾಗ ಬಾಗಿಲು ತಂದೆ ತಾಯಿ ತೆಗೆದಿಲ್ಲ. ಅನುಮಾನ ಬಂದು ಬಾಗಿಲು ಮುರಿದು ಒಳಗಡೆ ನೋಡಿದಾಗ ತಂದೆ- ತಾಯಿ ಇಬ್ಬರೂ ನೇಣು ಹಾಕಿಕೊಂಡಿರೋ ವಿಚಾರ ಬೆಳಕಿಗೆ ಬಂದಿದೆ.
ಸದ್ಯ ಘಟನೆ ಬಗ್ಗೆ ದಂಪತಿ ಮಗ ಅಶೋಕ್ ಅವರಿಂದ ಪೊಲೀಸರು ಹೇಳಿಕೆ ಪಡೆದಿದ್ದು, ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆಸ್ತಿ ವಿಚಾರಕ್ಕೆ ವೃದ್ಧದಂಪತಿ ಹಾಗೂ ಮಗನ ನಡುವೆ ಏನಾದರೂ ವೈಷಮ್ಯ ಮನಸ್ತಾಪವಿತ್ತಾ..? ಎಂಬ ಮಾಹಿತಿ ತಿಳಿದು ಬಂದಿಲ್ಲ.


