ಕೇರಳದ ವಯನಾಡಿನ ಮಾನಂತವಾಡಿಯಲ್ಲಿ ವ್ಯಕ್ತಿಯೋರ್ವನನ್ನು ತುಳಿದು ಕೊಂದ ಆನೆ ಮತ್ತೆ ಕರ್ನಾಟಕದ ಅರಣ್ಯದಲ್ಲಿ ಪತ್ತೆಯಾಗಿದೆಎಂದು ಅರಣ್ಯ ಇಲಾಖೆ ಹೇಳಿದೆ. ಕೇರಳ ಅರಣ್ಯ ಇಲಾಖೆ ರೇಡಿಯೋ ಕಾಲರ್ ಮೂಲಕ ಆನೆಯ ಚಲನವಲನದ ಮೇಲೆ ನಿಗಾ ಇಡುತ್ತಿದೆ. ಆನೆಗಳು ಜನವಸತಿ ಪ್ರದೇಶಗಳಿಗೆ ನುಗ್ಗದಂತೆ ರಾತ್ರಿ ಗಸ್ತು ಕೂಡ ಬಲಪಡಿಸಲಾಗಿದೆ. ಇನ್ನು ಆನೆಯ ಮೇಲೆ ಸಂಪೂರ್ಣ ನಿಗಾ ಇಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್ ನ ಪ್ರಮುಖ ವನ್ಯಜೀವಿ ತಜ್ಞ ನವಾಬ್ ಅಲಿ ಖಾನ್ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯಿಂದ ನಾಲ್ಕು ಸದಸ್ಯರ ತಂಡವು ಮಿಷನ್ ತಂಡಕ್ಕೆ ಸಹಾಯ ಮಾಡಲು ವಯನಾಡ್ಗೆ ತಲುಪಿದೆ. ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶಗಳಲ್ಲಿ ವಿವಿಧ ರಾಜ್ಯಗಳ ಅರಣ್ಯ ಇಲಾಖೆಗಳು ನವಾಬ್ ಅಲಿ ಖಾನ್ ಅವರ ಸೇವೆಯನ್ನು ಪಡೆದುಕೊಳ್ಳುತ್ತವೆ.
ಇದೇ ವೇಳೆ ಪುಲ್ಪಲ್ಲಿಯಲ್ಲಿ ಹಸುಗಳ ಮೇಲೆ ಹುಲಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಅರಣ್ಯದಲ್ಲಿ ಪ್ರಾಣಿಗಳನ್ನು ಮೇಯಲು ಬಿಡಬಾರದು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಈ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಯಾವುದೇ ಬೋನಿನಲ್ಲೂ ಹುಲಿ ಸಿಕ್ಕಿ ಬಿದ್ದಿಲ್ಲ.


