ಪ್ರಿಯತಮನೇ ಯುವತಿ ಮೇಲೆ ರಾಡ್ ನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಮೈಕೋಲೇಔಟ್ನಲ್ಲಿ ನಡೆದಿದೆ. ಟೆಕ್ಕಿ ಸ್ನೇಹ ಚಟರ್ಜಿ(26) ಹಲ್ಲೆಗೊಳಗಾದ ಯುವತಿ.
ಟೆಕ್ಕಿಗಳಾಗಿದ್ದ ಆರೋಪಿ ಪ್ರಿಯತಮ ರವಿಕುಮಾರ್(28) ಹಾಗೂ ಸ್ನೇಹ ಇಬ್ಬರು ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹೌದು, ಅದೇ ಕಂಪನಿಯಲ್ಲಿ ಸ್ನೇಹ ಇಂಟರ್ನ್ಶಿಪ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಪರಿಚಯವಾಗಿ ಪರಸ್ಪರ ಪ್ರೀತಿಸಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಬೇರೆ ಕಂಪನಿಗೆ ಸೇರಿಕೊಂಡಿದ್ದ ಟೆಕ್ಕಿ ಸ್ನೇಹ, ರವಿಕುಮಾರ್ ಜೊತೆ ಅಂತರ ಕಾಯ್ದುಗೊಂಡಿದ್ದರು. ಈ ಹಿನ್ನಲೆ ರವಿಕುಮಾರ್ ಫೋನ್ ಕರೆಯನ್ನ ಸ್ನೇಹ ಸ್ವೀಕರಿಸದ ಕಾರಣ, ಅನುಮಾನಗೊಂಡು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.
ಹೌದು, ಮೈಕೋಲೇಔಟ್ ನ ತನ್ನ ಪಿಜಿ ಬಳಿ ಆ. 2ರ ಬುಧವಾರ ಮುಂಜಾನೆ 3. 30ಕ್ಕೆ ಕರೆಸಿಕೊಂಡು ರಾಡ್ನಿಂದ ಸ್ನೇಹಳ ತಲೆಗೆ ಹೊಡೆದಿದ್ದಾನೆ. ಗಾಯಾಳು ಸ್ನೇಹಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿ ರವಿಕುಮಾರ್ನನ್ನು ಬಂಧಿಸಿ ಮೈಕೋಲೇಔಟ್ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 81233 82149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


