ಬೆಂಗಳೂರು: ದಕ್ಷಿಣಾ ಆಫ್ರಿಕಾದಿಂದ ಆಗಮಿಸಿರುವ ವ್ಯಕ್ತಿಯೊಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಆನೇಕಲ್ ತಾಲೂಕಿನ ಬಳ್ಳೂರು ಅಪಾರ್ಟ್‍ಮೆಂಟ್ ನಿವಾಸಿಯೊಬ್ಬರಿಗೆ ಓಮಿಕ್ರಾನ್ ವಕ್ಕರಿಸಿರುವುದು ದೃಢಪಟ್ಟಿದೆ.
ಸೋಂಕಿತ ವ್ಯಕ್ತಿ ಕಳೆದ 23ರಂದು ದಕ್ಷಿಣಾ ಆಫ್ರಿಕಾದಿಂದ ವಾಪಾಸ್ಸಾಗಿದ್ದ ಆತನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿತ್ತು. ವಿಮಾನ ನಿಲ್ದಾಣದಿಂದ ಆತ ನೇರವಾಗಿ ಬಳ್ಳೂರು ಅಪಾರ್ಟ್‍ಮೆಂಟ್‍ಗೆ ಆಗಮಿಸಿದ್ದ. ಅದರೆ, ಆತನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಆತನನ್ನು ಆರೋಗ್ಯ ಇಲಾಖೆ ಅಧಿಕಾರಿಗಳು 24ನೇ ತಾರೀಖು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಿದ್ದರು.ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಜೊತೆ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಎಲ್ಲರ ಸ್ವಾಬ್ ಪರೀಕ್ಷೆ ನಡೆಸಲಾಗಿದೆ.
ಅದೃಷ್ಟವಶಾತ್ ಆತನೊಂದಿಗೆ ಸಂಪರ್ಕ ಹೊಂದಿದವರ ಎಲ್ಲ ವರದಿ ನೆಗಿಟಿವ್ ಬಂದಿರುವುದರಿಂದ ಜನ ನಿಟ್ಟುಸಿರುಬಿಡುವಂತಾಗಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಬಳ್ಳೂರು ಅಪಾರ್ಟ್‍ಮೆಂಟ್ ಬಳಿ ಬೀಡುಬಿಟ್ಟಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy