nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದರ್ | ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ

    July 5, 2025

    ಲವ್, ಸೆಕ್ಸ್ ದೋಖಾ: ಬಿಜೆಪಿ ಮುಖಂಡನ ಮಗ ಅರೆಸ್ಟ್

    July 5, 2025

    ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕುಗಳೂ ನನಗೆ ಮುಖ್ಯ: ಡಿ.ಕೆ.ಶಿವಕುಮಾರ್

    July 5, 2025
    Facebook Twitter Instagram
    ಟ್ರೆಂಡಿಂಗ್
    • ಬೀದರ್ | ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ
    • ಲವ್, ಸೆಕ್ಸ್ ದೋಖಾ: ಬಿಜೆಪಿ ಮುಖಂಡನ ಮಗ ಅರೆಸ್ಟ್
    • ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕುಗಳೂ ನನಗೆ ಮುಖ್ಯ: ಡಿ.ಕೆ.ಶಿವಕುಮಾರ್
    • ವೈ.ಎನ್.ಹೊಸಕೋಟೆ:  “ಓರಿಗಾಮಿಯಲ್ಲಿ ಗಣಿತ ಕಾರ್ಯಾಗಾರ”
    • ಯುವ ಜನತೆ ಕಾನೂನು ಸುರಕ್ಷತೆ ಪಾಲನೆ, ಸಾಮಾಜಿಕ ಜವಾಬ್ದಾರಿ ರೂಢಿಸಿಕೊಳ್ಳಬೇಕು: ಪ್ರಸನ್ನ ಕುಮಾರ್ ಸಲಹೆ
    • ಮೇಕೆದಾಟು ಯೋಜನೆ: ಕಾಂಗ್ರೆಸ್ ಗೆ ಮತ್ತೆ ಸವಾಲು ಹಾಕಿದ ಹೆಚ್.ಡಿ.ಕುಮಾರಸ್ವಾಮಿ
    • ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು
    • ಹಿಂದೂ ಮುಖಂಡನ ಮೊಬೈಲ್ ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅನ್ನದಲ್ಲೂ ಧೂಳು, ನೀರಲ್ಲೂ ಧೂಳು, ಪ್ರತಿ ಮನೆಯಲ್ಲೂ ರೋಗಿಗಳು: ಕ್ರಷರ್ ಸೃಷ್ಟಿಸಿದ ಪ್ರಾಣ ಭೀತಿ!
    ಕೊರಟಗೆರೆ June 29, 2022

    ಅನ್ನದಲ್ಲೂ ಧೂಳು, ನೀರಲ್ಲೂ ಧೂಳು, ಪ್ರತಿ ಮನೆಯಲ್ಲೂ ರೋಗಿಗಳು: ಕ್ರಷರ್ ಸೃಷ್ಟಿಸಿದ ಪ್ರಾಣ ಭೀತಿ!

    By adminJune 29, 2022No Comments4 Mins Read
    crusher

    ಕೊರಟಗೆರೆ: ತಿನ್ನುವ ಅನ್ನದಲ್ಲೂ ಧೂಳು, ಕುಡಿಯುವ ನೀರಿನಲ್ಲೂ  ಧೂಳು.. ಹೌದು ಕೊರಟಗೆರೆ ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ  ಬಿಕ್ಕೆಗುಟ್ಟೆ ಗ್ರಾಮದ ಬಳಿ ನಡೆಯುತ್ತಿರುವ ಕ್ರಷರ್‍ ಗಳ ಹಾವಳಿಯಿಂದ  ಜನರು ಮಣ್ಣನ್ನು ತಮ್ಮ ಆಹಾರವಾಗಿ ಮತ್ತು ಕುಡಿಯುವ ನೀರಾಗಿ  ಬಳಸುತ್ತಿದ್ದಾರೆ. ಜನರು ಮಾತ್ರವಲ್ಲದೇ ಅಮಾಯಕ  ಮೂಕ ಪ್ರಾಣಿಗಳು ಧೂಳು ಸೇವಿಸುವಂತಾಗಿದೆ. ಇದರಿಂದ ಜನರು ಪ್ರಾಣ ಭೀತಿಯಲ್ಲಿ ದಿನ  ನಿತ್ಯ ಜೀವನ ಕಳೆಯುವಂತಾಗಿದೆ.

    ಪ್ರತಿನಿತ್ಯ ಕ್ರಷರ್ ನಿಂದ ಸಿಡಿಸುವ ಸಿಡಿ ಮದ್ದುಗಳಿಂದಾಗಿ ಶಬ್ಧ ಮಾಲಿನ್ಯಉಂಟಾಗುವುದಷ್ಟೇ ಅಲ್ಲದೇ ಪಕ್ಕದಲ್ಲೇ ಇರುವ ಗ್ರಾಮಗಳಿಗೆ ಒಂದುನರಕವಾಗಿ ಪರಿಣಮಿಸಿದೆ. ಸದಾ ಧೂಳಿನಿಂದ ಕೂಡಿಕೊಂಡಿರುವ ಈ ಪ್ರದೇಶದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿ ಜನರು ಬೇರೆ ಪ್ರದೇಶಗಳಿಗೆ  ಹೋಗುವುದೊಂದೇ ಬಾಕಿ ಉಳಿದಿದೆ.


    Provided by

    ಬಿಕ್ಕೆಗುಟ್ಟೆ ಗ್ರಾಮದಲ್ಲಿನ ಜನರು ಒಂದಿಲ್ಲೊಂದು ಖಾಯಿಲೆಯಿಂದ ಮರಣ ಹೊಂದುತ್ತಿದ್ದಾರೆ. ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಲೇ, ಸತ್ತವರಿಗೆ ಮಣ್ಣು ಹಾಕುತ್ತಿದ್ದಾರೆ. ಇನ್ನೊಂದೆಡೆ ಮೂಕ ಪ್ರಾಣಿಗಳ ವೇದನೆಯನ್ನು ಕೇಳುವವರು ಯಾರು?  ಅವುಗಳಿಗೆ ಸರಿಯಾದ ಮೇವು ಸಿಗುತ್ತಿಲ್ಲ. ತಿನ್ನುವ ಹುಲ್ಲಿನ ಮೇಲೆ ಒಂದು ಅಡಿ  ಧೂಳು ಕುಳಿತುಕೊಂಡರೆ ಮುಗ್ಧ ಪ್ರಾಣಿಗಳು ಹೇಗೆ ತಾನೆ ತಿನ್ನಲು  ಸಾಧ್ಯ? ಎಂದು ಪ್ರಶ್ನಿಸುವಂತಾಗಿದೆ.

    ಈ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿಕೊಂಡರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಗ್ರಾಮಸ್ಥರು ಕ್ರಷರ್ ಬಳಿ ಹೋಗಿ ಕೆಲಸ ನಿಲ್ಲಿಸಲು ಹೇಳಿದರೆ. ಪೊಲೀಸ್ ಮುಖಾಂತರ ಬೆದರಿಕೆ ಬೇರೆ ಹಾಕಿಸುತ್ತಾರಂತೆ. ಅಂದರೆ ಪೊಲೀಸರು ಸಾರ್ವಜನಿಕರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೋ ಅಥವಾ ಕ್ರಶರ್ ಓನರ್  ಪರವಾಗಿ ಕೆಲಸ ಮಾಡುತ್ತಿದ್ದಾರೊ ತಿಳಿಯದಾಗಿದೆ.

    ಬಿಕ್ಕಳಿಕೆ ಬಂದರು ಕುಡಿಯಲು ಯೋಗ್ಯವಲ್ಲದ ನೀರು ಇಲ್ಲಿನದ್ದಾಗಿದೆ. ಪ್ರತಿದಿನ ಕುಡಿಯಲು ಬಳಸುವ ನೀರು ಕ್ರಷರ್‍ ಗಳ ಹಾವಳಿಯಿಂದ  ಧೂಳುಮಯವಾಗಿದೆ.

    ಧೂಳಿನಿಂದಾಗಿ ಮನೆಯೊಳಗೆ ಕುಳಿತು ಊಟ ಮಾಡಲು ಆಗುತ್ತಿಲ್ಲ.  ಹೊಲ ಗದ್ದೆಗಳಿಗೆ ಹೋಗಿ ಕೆಲ ಮಾಡಿ ಮನೆಗೆ ಬಂದು ಕುಳಿತರೆ ಸಾಕು  ಸಿಡಿಮದ್ದುಗಳಿಂದ ಬರುವ ಸಣ್ಣ ಸಣ್ಣ ಕಲ್ಲುಗಳು ಮನೆಯ ಹೆಂಚು, ತಗಡಿನ  ಮೇಲೆ ಬೀಳುತ್ತವೆ. ಇದರಿಂದಾಗಿ ಮನೆಯಲ್ಲಿ ನೆಮ್ಮದಿಯಾಗಿ ನಿದ್ದೆ  ಮಾಡುವುದಿರಲಿ, ಊಟ ಮಾಡುವುದಕ್ಕೂ ಭಯ ಪಡುವಂತಾಗಿದೆ.

    ಹಸುಗೂಸು  ಇರುವ ಮನೆಯಲ್ಲಿ ಮಕ್ಕಳು ಹಾಗೂ ಗರ್ಭೀಣಿಯರು ಸಾಕಷ್ಟು ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಪ್ರಭಾವಿಗಳಿಗೆ ಸೇರಿರುವ ಬಿಕ್ಕೆಗುಟ್ಟೆ ಜಲ್ಲಿ ಕ್ರಷರ್ ಗಳು  ಪ್ರಭಾವಿಗಳ ಒಡೆತನದಲ್ಲಿ ಕೆಲಸ ಮಾಡುತ್ತಿದ್ದು,  ಅವರನ್ನು ಎದುರಿಸಲು ಸಾಮಾನ್ಯ ಜನರು ಭಯ ಪಡುವಂತಾಗಿದೆ. ಅಧಿಕಾರಿ  ವರ್ಗವೂ ಅವರ ಜೊತೆ ಶಾಮೀಲಾಗಿರುವ ಶಂಕೆಯನ್ನು ಬಿಕ್ಕೆಗುಟ್ಟೆ  ಗ್ರಾಮದ ಜನರು ವ್ಯಕ್ತಪಡಿಸಿದ್ದಾರೆ.

    ಇನ್ನೂ ಅಲ್ಲಿ ಕೆಲಸ ಮಾಡುವವರು  ಸ್ಥಳೀಯ ಜನರಿಗೆ ಮುಂಚಿತವಾಗಿ ಮಾಹಿತಿ ಕೊಡದೆ ಕ್ರಷರ್ ಗಳಲ್ಲಿ  ಸಿಡಿಮದ್ದುಗಳನ್ನು ಸಿಡಿಸುತ್ತಿದ್ದು, ಇದರಿಂದಾಗಿ ಗರ್ಭಿಣಿಯರಾಗಿರುವ ಹೆಂಗಸರಿಗೆ ಗರ್ಭಪಾತವಾಗುತ್ತಿದೆ. ಇಲ್ಲದೇ  ಅಪೌಷ್ಟಿಕತೆ ಸೇರಿದಂತೆ ನಾನಾ ರೋಗ ರುಜಿನಗಳು ಬರುವ ಸಾಧ್ಯತೆ ಇದೆ.

    ಇನ್ನೂ ಯಾವ ಮಾಧ್ಯಮದವರು ಬಂದರೂ, ಯಾವ ಅಧಿಕಾರಿಗಳು ಬಂದರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ವರದಿ ಮಾಡಲು ಹೋದ ನಮ್ಮ ವಾಹಿನಿ ವರದಿಗಾರರ ಮೇಲೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

    ಪ್ರಭಾವಿಗಳ ಕಲ್ಲು ಗಣಿಗಾರಿಕೆಯಿಂದ ಸುತ್ತಮುತ್ತಲ ಬೆಳೆಗಳು ನಾಶವಾಗಿ, ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಇನ್ನೂ ಜೆಲ್ಲಿಯನ್ನು ತುಂಬಿಕೊಂಡು ಹೋಗುವ ರಸ್ತೆಗಳೆಲ್ಲಾ ಮಣ್ಣಿನಿಂದ ಕೂಡಿದ್ದು, ಇದರಿಂದಾಗಿ ಆ ಸುತ್ತಮುತ್ತಲಿನ ಜೀವಸಂಕುಲವೇ ನಾಶವಾಗುವ ಸಾಧ್ಯತೆ ಇದೆ.

    ಕ್ರಷರ್ ನಲ್ಲಿ ಸಿಡಿದ ಸಿಡಿಮದ್ದಿನ  ಶಬ್ದಕ್ಕೆ ಹಸುಗಳು ಬೆದರಿದ ಹಸುಗಳು ವ್ಯಕ್ತಿಯೊಬ್ಬರನ್ನು ಎಳೆದುಕೊಂಡು ಹೋಗಿದ್ದು, ಪರಿಣಾಮವಾಗಿ ಅವರು ಕಾಲು ಮುರಿತಕ್ಕೊಳಗಾಗಿ ಇಂದು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಹೊಟ್ಟೆಗೆ ಏನು ತಿನ್ನುತ್ತಾರೆ? ಅವರು ಸಾರ್ವಜನಿಕರ ಕೆಲಸಗಾರರೋ ಅಥವಾ ಪ್ರಭಾವಿಗಳ ದಾಸರೋ ಎಂದು ಬಿಕ್ಕೆಗುಟ್ಟೆ ಗ್ರಾಮದ ಜನ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿದರು.

    ಮೃತ ದೇಹವನ್ನು ಇಟ್ಟುಕೊಂಡು ಪ್ರತಿಭಟನೆಗೆ ಸಿದ್ಧರಾಗಿದ್ದ ಸ್ಥಳೀಯರು ಸರಕಾರಿ ರಜೆ ಇದ್ದುದರಿಂದ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಸ್ಥಳದಲ್ಲೇ ನಮ್ಮ ಪ್ರತಿನಿಧಿ ತಾಲ್ಲೂಕು ದಂಡಾಧಿಕಾರಿಗಳಿಗೆ ಕರೆ ಮಾಡಿ  ವಿಷಯ ಮುಟ್ಟಿಸಿದಾಗ ಸೋಮವಾರದಂದು ಸಂಪೂರ್ಣ ಮಾಹಿತಿ ಪಡೆದು  ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಅಲ್ಲಿದ್ದ ಕುಟುಂಬಸ್ಥರಿಗೆ ಹಾಗೂ  ನಮ್ಮ ಪ್ರತಿನಿಧಿಗೆ ಭರವಸೆ ನೀಡಿದ್ದಾರೆ.

    ನಹೀದಾ ಜಮ್ ಜಮ್, ತಾಲ್ಲೂಕು ದಂಡಾಧಿಕಾರಿ.

    ಈಗಾಗಲೇ ಆ ಗ್ರಾಮಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ವರದಿ ಸಲ್ಲಿಸಿದ್ದಾರೆ  . ನಾನು ಕೂಡ ನಾಳೆ ಆ ಗ್ರಾಮಕ್ಕೆ ತೆರಳುತ್ತಿದ್ದೇನೆ. ಜನರ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

    ನರಸಿಂಹ ರಾಜು, ಸ್ಥಳೀಯ.

    ನಮ್ಮ ಗ್ರಾಮದಲ್ಲಿ ಸುಮಾರು 80 ಕುಟುಂಬಗಳಿವೆ. ಎಲ್ಲಾ ಮನೆಯಲ್ಲೂ 4-5 ಜನ ವಾಸವಿದ್ದಾರೆ. ಆದ್ರೆ ಎಲ್ಲಾ ಮನೆಯಲ್ಲಿಯೂ ಕೂಡ ಒಬ್ಬ ರೋಗಿ ಕಡ್ಡಾಯವಾಗಿದ್ದರೆ. ಏಕೆಂದರೆ ಇಲ್ಲಿ ನಡೆಸುತ್ತಿರುವ ಕ್ರಷರ್‍ ಗಳಿಂದ ಬರುವ ಧೂಳಿನಿಂದ ಹಿರಿಯರು, ಮಕ್ಕಳು ಅನರೋಗ್ಯಕ್ಕೀಡಾಗುತ್ತಿದ್ದಾರೆ. ಅಷ್ಟೇ ಅಲ್ಲ  ತಿನ್ನುವ ಅನ್ನದಲ್ಲೂ ಧೂಳು, ಕುಡಿಯುವ ನೀರಿನದು ಧೂಳು ತುಂಬಿಕೊಳ್ಳುತ್ತದೆ. ವಾರಗಳಲ್ಲಿ ಸುರಿಸುವ ಮದ್ದಿನಿಂದ ಮನೆಗಳು  ಬಿರುಕು ಬಿಟ್ಟಿವೆ. ಇಷ್ಟೆಲ್ಲಾ ಆಗುತ್ತಿದ್ದರೂ ಯಾವ ಅಧಿಕಾರಿಗಳು ನಮ್ಮ ಊರಿನ  ಕಡೆ ಬರುತ್ತಿಲ್ಲ. ನಮ್ಮ ಸಮಸ್ಯೆ ಆಲಿಸುತ್ತಿಲ್ಲ ಎಂದು ತಿಳಿಸಿದರು.

    ನಾಗರಾಜು, ಸಾಮಾಜಿಕ ಹೋರಾಟಗಾರ.

    ಪ್ರಕೃತಿಯ ತಾಣವಾಗಿದ್ದ ಈ ಊರನ್ನು ಕ್ರಷರ್‍ಗಳ ಹಾವಳಿಯಿಂದ ಹಾಳು ಮಾಡಿದ್ದಾರೆ. ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳ ಹಾವಳಿ ಒಂದು ಕಡೆ ಆದರೆ, ಇನ್ನೊಂದು ಕಡೆ ಕ್ರಶರ್ ಸಿಡಿಮದ್ದಿನ ಹಾವಳಿ. ಅನೇಕ ವರ್ಷಗಳಿಂದ ಈ ಕ್ರಷರ್‍ಗಳ ವಿರುದ್ಧವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಆದರೆ ಯಾವ ಅಧಿಕಾರಿಯೂ ಸ್ಪಂದಿಸಿಲ್ಲ. ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ಇತ್ತೀಚೆಗೆ ನಡೆದ ಗ್ರಾಮ ವಾಸ್ತವ್ಯದಲ್ಲಿ ಕೂಡ ಮನವಿ  ಸಲ್ಲಿಸಿದ್ದೇವೆ. ಆದರೆ ಯಾವುದಕ್ಕೂ ಸ್ಪಂದಿಸದ ಅಧಿಕಾರಿಗಳ ಮುರ್ಖ  ವರ್ತನೆಗೆ ಬೇಸರವಾಗಿದೆ ಎಂದು ತಿಳಿಸಿದರು.

    ನವೀನ್ ಕುಮಾರ್, ಮಾನವ ಹಕ್ಕುಗಳ ಹೋರಾಟಗಾರ

    ಬಿಕ್ಕೆಗುಟ್ಟೆ ಊರಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಕ್ಕೂ ಸರಿಯಾದ ಮನೆಯಿಲ್ಲ. ಗುಡಿಸಲಿಲ್ಲ. ಕಲ್ಲಿನ ಕ್ವಾರೆಯಲ್ಲಿ ಸಿಡಿಸುವ ಸಿಡಿಮದ್ದಿನಿಂದ ಭಯಭೀತರಾಗಿರುವ ಗರ್ಭಿಣಿ ಮಹಿಳೆಯರು, ಇದುವರೆಗೂ ಅನೇಕ ಮೂಕ ಪ್ರಾಣಿಗಳು ಸಾವನ್ನಪ್ಪಿವೆ, ಇತ್ತೀಚೆಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.

    ಕ್ರಶರ್ ನಿಲ್ಲಿಸಿ ಎಂದು ಹೋಗುವ ಗ್ರಾಮಸ್ಥರಿಗೆ ಪೆÇಲೀಸರಿಂದ ಬೆದರಿಸಿ ಮತ್ತೆ ವಾಪಸ್ ಕಳಿಸುತ್ತಾರೆ. ಎಲ್ಲಿ ಹೋಯಿತು ನಮ್ಮ ಪ್ರಜಾಪ್ರಭುತ್ವ. ಎಲ್ಲಿ ಇದ್ದಾರೆ ನಿಷ್ಟಾವಂತ ಅಧಿಕಾರಿಗಳು. ಈ ಜನರ ಕಷ್ಟಕ್ಕೆ ಆಗುವ ಅಧಿಕಾರಿ ಯಾರು ಕಾದು ನೋಡಬೇಕಾಗಿದೆ ಎಂದು ತಿಳಿಸಿದರು.

    ವರದಿ : ಟೈಗರ್ ನಾಗ್

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

     

    admin
    • Website

    Related Posts

    ಸುಭಾಷ್ ಪದವಿ ಪೂರ್ವ ಕಾಲೇಜಿನಲ್ಲಿ ವೆಲ್ಕಮ್ ಡೇ  

    July 4, 2025

    ಸಾರ್ವಜನಿಕ ಸ್ಮಶಾನದ ಅಭಿವೃದ್ಧಿಗೆ ಮೀನಾಮೇಷ:  ಬೈಚಾಪುರ ಗ್ರಾ.ಪಂ.ನಲ್ಲಿ ಅಂತ್ಯ ಸಂಸ್ಕಾರಕ್ಕೂ ಸಿಗುತ್ತಿಲ್ಲ ಮುಕ್ತಿ!

    July 2, 2025

    30 ಲಕ್ಷ ವೆಚ್ಚದ ಡಯಾಲಿಸಿಸ್ ಯಂತ್ರ ಲೋಕಾರ್ಪಣೆಗೊಳಿಸಿದ ಜಪಾನಂದ ಸ್ವಾಮೀಜಿ

    June 28, 2025
    Our Picks

    ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು

    July 5, 2025

    ಪತಿಯಿಂದಲೇ ಮಹಿಳಾ ಕೌನ್ಸಿಲರ್‌ ಬರ್ಬರ ಹತ್ಯೆ!

    July 4, 2025

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025

    ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್‌ ಐ) ಯೋಜನೆಗೆ ಸಚಿವ ಸಂಪುಟದ ಅನುಮೋದನೆ

    July 3, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೀದರ್ | ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ

    July 5, 2025

    ಬೀದರ್ : ಜಿಲ್ಲೆಯ ಘೋಡಂಪಳ್ಳಿ ಗ್ರಾಮದಲ್ಲಿ ಇರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ…

    ಲವ್, ಸೆಕ್ಸ್ ದೋಖಾ: ಬಿಜೆಪಿ ಮುಖಂಡನ ಮಗ ಅರೆಸ್ಟ್

    July 5, 2025

    ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕುಗಳೂ ನನಗೆ ಮುಖ್ಯ: ಡಿ.ಕೆ.ಶಿವಕುಮಾರ್

    July 5, 2025

    ವೈ.ಎನ್.ಹೊಸಕೋಟೆ:  “ಓರಿಗಾಮಿಯಲ್ಲಿ ಗಣಿತ ಕಾರ್ಯಾಗಾರ”

    July 5, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.