ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿ, ಅಕ್ಕಿರಾಮಪುರದ ಇತಿಹಾಸ ಪ್ರಸಿದ್ಧ ಶ್ರೀ ಅನಂತನಾಥ ಸ್ವಾಮಿ ದೇವರ ಧರ್ಮ ಸಂಸ್ಥೆ ವತಿಯಿಂದ ನಡೆದ ಶ್ರೀ ಅನಂತನಾಥ ಹಾಗೂ ಬ್ರಹ್ಮ ಯಕ್ಷರ ವಾರ್ಷಿಕ ಪೂಜೆ ಮಹೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನ ಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಲಕ್ಷ್ಮಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಕ್ಷೇತ್ರ ಆರತಿಪುರ ಜೈನಮಠದ ಸ್ವಸ್ತಿ ಶ್ರೀ ಸಿದ್ದಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಶುಭ ಆಶೀರ್ವಾದದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ಆಗ್ರೋದಕ ಉತ್ಸವ ಧ್ವಜಾರೋಹಣ ,ನಿತ್ಯ ಪೂಜೆ, ಕಳಸ ಮಹಾಭಿಷೇಕ ಪೂಜೆ, ಪಂಚಾಮೃತ ಅಭಿಷೇಕ ಹಾಗೂ ಷೋಡಷೋಪಚಾರ ಪೂಜೆ, ಮಹಾ ಮಂಗಳಾರತಿ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶ್ರೀ ಅನಂತ ನಾಥ ತೀರ್ಥಂಕರ , ಕ್ಷೇತ್ರಪಾಲ , ಬ್ರಹ್ಮ ದೇವರಿಗೆ, ಜಿನ ಶಾಸನ ದೇವಿಯರಿಗೆ ಪೂಜೆ, ಮಹಾ ಮಂಗಳಾರತಿಗಳು ನಡೆದವು. ಪುರೋಹಿತರದ ಬಸ್ತಿ ಪಾರ್ಶ್ವನಾಥ ಹಾಗೂ ಬಸ್ತಿ ಮಹಾವೀರ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಎಂ.ಎನ್ .ದಿಲೀಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಸದಿಯ ಕಾರ್ಯದರ್ಶಿ ಪಿ.ನಾಗೇಂದ್ರ ಕುಮಾರ್, ಖಜಾಂಚಿ ವಿ.ಎನ್. ಮನ್ಮಥ ಕುಮಾರ್, ಬೆಳಗುಲಿ ವಿಜಯಕುಮಾರ್, ಉದ್ಯಮಿ ಜಿ.ಪಿ.ಉಮೇಶ್ ಕುಮಾರ್, ಸಹಕಾರಿ ಯೂನಿಯನ್ ಅಧ್ಯಕ್ಷ ವಿ.ಪಿ.ಕಾಂತರಾಜ್, ಜಿ.ಸಿ.ಬ್ರಹ್ಮದೇವ್, ನಿಡಿಗಲ್ ಜೈನಬಸದಿಯ ಅಧ್ಯಕ್ಷ ರಂಗಸಮುದ್ರ ಜಯಣ್ಣ, ಅರಸಪುರ ಸಂತೋಷ ಕುಮಾರ್ ಸೇರಿದಂತೆ ಅಕ್ಕಿರಾಮಪುರ, ಆರಸಪುರ, ರಂಗಸಮುದ್ರ, ಕುರುಡಿ, ಗೌರಿಬಿದನೂರು ಬೆಂಗಳೂರು ಹಾಗೂ ತುಮಕೂರು ಭಾಗಗಳಿಂದ ಹೆಚ್ಚಿನ ಶ್ರಾವಕ– ಶ್ರಾವಕಿಯರು, ವಿವಿಧ ಜೈನ ಸಂಘ–ಸಂಸ್ಥೆಗಳ ಮುಖಂಡರು , ಮಹಿಳಾ ಘಟಕಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವಿ.ಎನ್ .ಮನ್ಮಥ ಕುಮಾರ್ ಹಾಗೂ ಕುಮುದಾ ನಾಗಭೂಷಣ್ ಕಳಸ -ಅಭಿಷೇಕ ಗಳ ಹರಾಜು ಪ್ರಕ್ರಿಯೆ ನಡೆಸಿದರು. ಕುಮುದಾ ನಾಗಭೂಷಣ್ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರದಿ: ಜೆ ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx