ದೇಶದಲ್ಲಿ ಇತ್ತೀಚೆಗೆ ರೈಲು ಅಪಘಾತಗಳು ಆತಂಕ ಮೂಡಿಸುತ್ತಿವೆ. ವಿಜಯನಗರದಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದು ಸಂಭವಿಸಿದ ದುರಂತವನ್ನು ಮರೆಯುವ ಮುನ್ನವೇ ಇತ್ತೀಚೆಗೆ ಮತ್ತೊಂದು ರೈಲು ಅಪಘಾತ ಸಂಭವಿಸಿದೆ.
ಸುಹೈಲ್ ದೇವ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಉತ್ತರ ಪ್ರದೇಶದ ಪ್ರಯಾಗರಾಜ್ ರೈಲು ನಿಲ್ದಾಣದ ಬಳಿ ಹಳಿತಪ್ಪಿದೆ. ನಿನ್ನೆ ರಾತ್ರಿ ನಡೆದ ಈ ಅವಘಡದಲ್ಲಿ ಎಂಜಿನ್ ಸೇರಿದಂತೆ ಇನ್ನೂ ಎರಡು ಬೋಗಿಗಳು ಹಳಿ ತಪ್ಪಿವೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಪಘಾತಕ್ಕೆ ಕಾರಣ ತನಿಖೆ ನಡೆಸಲಾಗುತ್ತಿದೆ.


