ಹೆಚ್.ಡಿ.ಕೋಟೆ: ಸರಗೂರು ಮೈಸೂರು ಮಾನಂದವಾಡಿಯ ಮುಖ್ಯರಸ್ತೆಯಾಗಿರುವ ಅಂತರಸಂತೆ ಗ್ರಾಮದಲ್ಲಿ ಪೊಲೀಸ್ ಠಾಣೆಯಾದರೆ, ಇದು ಸಾರ್ವಜನಿಕರಿಗೆ ಹೆಚ್ಚಿನ ರೀತಿಯ ಅನುಕೂಲವಾಗಲಿದೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.
ತಾಲ್ಲೂಕಿನ ಅಂತರಸಂತೆ ಗ್ರಾಮದ ನೂತನ ಪೊಲೀಸ್ ಠಾಣೆಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಅಂತರಸಂತೆ ಭಾಗದಲ್ಲಿದ್ದ ಉಪ ಪೊಲೀಸ್ ಠಾಣೆಯನ್ನು ಬದಲಾಯಿಸಿ, ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂಬುದು ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು.
ಆದರೆ ಈ ಬೇಡಿಕೆ ಈಗ ಈಡೇರುತಿದೆ. ಒಂದು ಪೊಲೀಸ್ ಠಾಣೆಗೂ ಉಪ ಠಾಣೆಗೂ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ, ಬದಲಿಗೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸುತ್ತೇವೆ, ಉಪಠಾಣೆಯಲ್ಲಿ ಎಫ್ ಐ ಆರ್ ಹಾಕುವುದಿಲ್ಲ. ಆದರೆ ಸಮಸ್ಯೆಗಳಿಗೆ ಎರಡು ಕಡೆ ಸ್ಪಂದಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಪೊಲೀಸ್ ಠಾಣೆಯನ್ನು ಮಾಡಲು ಸರ್ಕಾರದ ಸಾಕಷ್ಟು ನಿಯಮಗಳಿವೆ. ಹಳೆ ಠಾಣೆಯಲ್ಲಿ 750 ಕೇಸ್ ಆಗಿರಬೇಕು ಮತ್ತು ಜನಸಂಖ್ಯೆ ಮುಖ್ಯವಾಗಿರುತ್ತದೆ.
ಆದ್ದರಿಂದ ಇದು ಮುಖ್ಯ ರಸ್ತೆಯೂ ಸಹ ಹೌದು ಎಂದು ಪರಿಗಣಿಸಿ ಇಲ್ಲಿನ ಉಪಠಾಣೆಯನ್ನು ಬೀಚನಹಳ್ಳಿಗೆ ವರ್ಗಾಹಿಸಿ ಅಲ್ಲಿನ ಪೊಲೀಸ್ ಠಾಣೆಯನ್ನು ಅಂತರಸಂತೆಗೆ ವರ್ಗಾಹಿಸಲಾಗಿದೆ. ಇದರಿಂದ ಎರಡು ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.
ಸದ್ಯ ಈ ಠಾಣೆಯಲ್ಲಿ 20 ಪೇದೆ, 10 ಮುಖ್ಯ ಪೇದೆ, 4 ಎಎಸ್ ಐ ಗಳು ಹಾಗೂ 1 ಪಿಎಸ್ ಐ ಕೆಲಸ ನಿರ್ವಹಿಸಲಿದ್ದಾರೆ.ಅಲ್ಲದೇ ಹೆಚ್.ಡಿ.ಕೋಟೆ ಭಾಗಕ್ಕೆ ಸಂಬಂಧಿಸಿದಂತೆ ಹಂಪಾಪುರ ಅಥವಾ ಗದ್ದಿಗೆ ಸಮೀಪ ಇನ್ನೊಂದು ಪೊಲೀಸ್ ಠಾಣೆ ತೆರೆಯುವ ಬಗ್ಗೆ ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ಇನ್ನೂ ವ್ಯಾಪ್ತಿಯಲ್ಲಿ ನಡೆಯುವ ಜಾತ್ರೆಗಳಿಗೆ ಮಾರ್ಗದರ್ಶನಗಳನ್ನು ಬಿಡುಗಡೆ ಮಾಡಲಾಗಿದೆ. ಕೇವಲ ಸಾಂಪ್ರದಾಯಕ ಆಚರಣೆಗೆ ಅವಕಾಶ ಮಾಡಲಾಗಿದೆ. ನಮ್ಮ ಸಿಬ್ಬಂದಿ ಈ ಬಗ್ಗೆ ಕ್ರಮವಹಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಡಿವೈಎಸ್ ಪಿ ಪಿ.ರವಿಪ್ರಸಾದ್, ವೃತ್ತ ನಿರೀಕ್ಷರಾದ ಬಸವರಾಜು, ಆನಂದ್, ಪಿಎಸ್ ಪಿಗಳಾದ ಜಯಪ್ರಕಾಶ್, ಶ್ರವಣ್‍ದಾಸ್‍ರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲೀಂಪಾಷ, ಸದಸ್ಯರಾದ ಸೋಮೇಶ್, ದೊರೆಸ್ವಾಮಿ, ಮಾರುತಿ, ಮುಖಂಡರಾದ ಕುಮಾರ್, ಸುಬ್ರಮಣ್ಯ, ಬುದ್ಧಪ್ರಕಾಶ್, ನವೀನ್‍ರಾಜ್, ಪ್ರದೀಪ, ಅಪ್ಸರ್ ಖಾನ್ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮುಂತಾದವರು ಹಾಜರಿದ್ದರು.
ವರದಿ: ಚಂದ್ರ, ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy