nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಣೆಕಟ್ಟುಗಳ ಸುರಕ್ಷತಾ ಮಾನದಂಡಗಳು ರಾಜಕೀಯ ಗಡಿಗಳಿಗೆ ಸೀಮಿತವಾಗಿರಬಾರದು: ಸಿಎಂ ಸಿದ್ದರಾಮಯ್ಯ

    February 13, 2026

    ಶಾಸಕ ಅನಿಲ್ ಚಿಕ್ಕಮಾದುರವರ 38ನೇ ಹುಟ್ಟುಹಬ್ಬ: ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು

    February 13, 2026

    ಲಿಂಗಮ್ಮನಹಳ್ಳಿಯಲ್ಲಿ 150ನೇ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ

    February 13, 2026
    Facebook Twitter Instagram
    ಟ್ರೆಂಡಿಂಗ್
    • ಅಣೆಕಟ್ಟುಗಳ ಸುರಕ್ಷತಾ ಮಾನದಂಡಗಳು ರಾಜಕೀಯ ಗಡಿಗಳಿಗೆ ಸೀಮಿತವಾಗಿರಬಾರದು: ಸಿಎಂ ಸಿದ್ದರಾಮಯ್ಯ
    • ಶಾಸಕ ಅನಿಲ್ ಚಿಕ್ಕಮಾದುರವರ 38ನೇ ಹುಟ್ಟುಹಬ್ಬ: ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು
    • ಲಿಂಗಮ್ಮನಹಳ್ಳಿಯಲ್ಲಿ 150ನೇ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ
    • ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆ ಬಯಲಾಗಿದ್ದು ಹೇಗೆ?
    • ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪಗೆ ಪಕ್ಷದಲ್ಲೇ ಪ್ರತಿಸ್ಪರ್ಧಿ | ವಿಧಾನ ಸಭಾ ಚುನಾವಣೆಗೆ ನಾನು ಸ್ಪರ್ಧಾಕಾಂಕ್ಷಿ ಎಂದ ದೊಡ್ಡಘಟ್ಟ ಚಂದ್ರೇಶ್
    • ಕ್ವಿಂಟಾಲ್‌ ಗೆ 4,886 ರೂ.: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ | ಶಾಸಕ ಕೆ.ಷಡಕ್ಷರಿ
    • ಬೆಂಗಳೂರು ರೇಸ್‌ ಕೋರ್ಸ್ ತುಮಕೂರಿನ ಕುಣಿಗಲ್‌ ಗೆ ಸ್ಥಳಾಂತರ: ಸಂಪುಟ ನಿರ್ಣಯ
    • ವಿದ್ಯುತ್ ಖಾಸಗೀಕರಣ, ಬೀಜ ಮಸೂದೆ ವಿರುದ್ಧ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜವಾಹರ ನವೋದಯ ವಿದ್ಯಾಲಯದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
    ತುಮಕೂರು September 13, 2024

    ಜವಾಹರ ನವೋದಯ ವಿದ್ಯಾಲಯದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

    By adminSeptember 13, 2024No Comments2 Mins Read
    apply

    ಜವಾಹರ ನವೋದಯ ವಿದ್ಯಾಲಯದ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ನವೋದಯ ವಿದ್ಯಾಲಯವು ತನ್ನದೇ ಆದ ಶೈಕ್ಷಣಿಕ ಉದ್ದೇಶಗಳನ್ನು ಹೊಂದಿದ್ದು, ವಿದ್ಯಾಲಯವು ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಮೀಸಲಾಗಿರುವ ಶಿಕ್ಷಣ ಸಂಸ್ಥೆಯಾಗಿದೆ.

    ಹಲವು ವರ್ಷಗಳಿಂದ 10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ವಿದ್ಯಾಲಯ ನೂರಕ್ಕೆ ನೂರು ಫಲಿತಾಂಶವನ್ನು ಪಡೆಯುತ್ತಿದೆ. ವಿದ್ಯಾಲಯದಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ಹಲವು ಕ್ಷೇತ್ರಗಳಲ್ಲಿ ಉನ್ನತ ಸಾಧನೆಯನ್ನು ಮಾಡಿರುತ್ತಾರೆ.


    Provided by
    Provided by

    ಮಕ್ಕಳನ್ನು ಜವಾಹರ ನವೋದಯ ವಿದ್ಯಾಲಯಕ್ಕೆ ಸೇರಿರುವ ಮುನ್ನ ವಿದ್ಯಾಲಯದ ಕುರಿತು ಮಾಹಿತಿಯನ್ನು ತಿಳಿಯಿರಿ. ಜವಾಹರ ನವೋದಯ ವಿದ್ಯಾಲಯದ ಕಿರು ಪರಿಚಯವನ್ನು ವಿದ್ಯಾರ್ಥಿಗಳು, ಪೋಷಕರ ಅನುಕೂಲಕ್ಕಾಗಿ ನೀಡಲಾಗಿದೆ. ಇದು ವಸತಿ ಶಾಲೆಯಾಗಿದ್ದು, ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

    ನವೋದಯ ವಿದ್ಯಾಲಯವು ತನ್ನದೇ ಆದ ಶೈಕ್ಷಣಿಕ ಉದ್ದೇಶಗಳನ್ನು ಹೊಂದಿದೆ. ಪ್ರತಿ ವರ್ಷ 6ನೇ ತರಗತಿಗೆ ಪ್ರವೇಶ ಪಡೆಯುವ 80 ವಿದ್ಯಾರ್ಥಿಗಳಲ್ಲಿ ಕನಿಷ್ಠ ಪ್ರತಿಶತ 75 ಮಕ್ಕಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿರುತ್ತಾರೆ.

    ಅಲ್ಲದೇ ನಿಯಮಾನುಸಾರ ಪ್ರತಿಶತ ಶೇ 22.5ರಷ್ಟು ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಾಗಿರುತ್ತಾರೆ. ಇದಲ್ಲದೆ ಕೇಂದ್ರ ಸರ್ಕಾರ ಸೂಚಿಸಿದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ಶೇಕಡ ಶೇ 27 ಮೀಸಲಾತಿ ಅನುಕೂಲವಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇ 33 ಪ್ರತಿಶತ ವಿದ್ಯಾರ್ಥಿನಿಯರು ಆಗಿರುತ್ತಾರೆ.

    ವಿದ್ಯಾಲಯದಲ್ಲಿ 6 ನೇ ತರಗತಿಯಿಂದ 12ನೇ ತರಗತಿಯವರೆಗೆ ಬೋಧಿಸಲಾಗುತ್ತಿದೆ. ಸಿಬಿಎಸ್‍ಇ ಪಠ್ಯಕ್ರಮಕ್ಕೆ ಅನುಗುಣವಾಗಿ ಪಾಠ ಬೋಧನೆ ಇದ್ದು, ಪಠ್ಯದ ಜೊತೆಗೆ ಪಠ್ಯಪೂರಕ ಚಟುವಟಿಕೆಗಳಿಗೆ ಅವಕಾಶವ್ತಿದೆ. ಪ್ರತಿ ವಿದ್ಯಾಲಯದಲ್ಲಿ ಎಲ್ಲಾ ಬೋಧನಾ ವಿಷಯದ ಶಿಕ್ಷಕರ ಜೊತೆಗೆ ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರೂ, ಕಲಾ ಶಿಕ್ಷಕರೂ ಇದ್ದು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗುತ್ತಿದೆ.

    ವಿದ್ಯಾಲಯವು ಪ್ರತಿವರ್ಷ ಆಯಾಯ ಜಿಲ್ಲೆಯ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ 6ನೇ ತರಗತಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಇದು ವಸತಿ ಶಾಲೆಯಾಗಿದ್ದು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್‌ಗಳಿರುತ್ತವೆ. ಮಕ್ಕಳ ಅರೋಗ್ಯವನ್ನು ನೋಡಿಕೊಳ್ಳಲು ಪ್ರತಿ ವಿದ್ಯಾಲಯದಲ್ಲಿ ಸ್ಟಾಫ್ ನರ್ಸ್‍ಗಳು ನೇಮಕವಾಗಿದ್ದಾರೆ. ಜೊತೆಗೆ ಮಕ್ಕಳ ಒತ್ತಡ ಮುಂತಾದ ಮಾನಸಿಕ ಸಮಸ್ಯೆಗಳನ್ನು ನಿವಾರಿಸಲು ಇಬ್ಬರು ಆಪ್ತ ಸಮಾಲೋಚಕರು ಇದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಿಕ ಹಾಗೂ ಊಟ ವಸತಿ, ಪಠ್ಯಪುಸ್ತಕ, ಸಮವಸ್ತ್ರ ಮತ್ತಿತರ ಎಲ್ಲಾ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ.

    ಪ್ರತಿವರ್ಷ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಶೇಕಡ 30 ರಷ್ಟು ವಿದ್ಯಾರ್ಥಿಗಳನ್ನು ಹಿಂದಿ ಮಾತೃಭಾಷೆ ಹೊಂದಿರುವ ರಾಜ್ಯದ ನಿರ್ದಿಷ್ಟ ವಿದ್ಯಾಲಯಕ್ಕೆ ವಿದ್ಯಾರ್ಥಿಗಳ ವಲಸೆ ಯೋಜನೆಯ ಅಡಿ ಕಳುಹಿಸಿ ಕೊಡಲಾಗುತ್ತಿದೆ. ಅದೇ ರೀತಿ ಈ ವಿದ್ಯಾರ್ಥಿಗಳ ವಲಸೆ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಬಹುಸಂಸ್ಕೃತಿಯ ಅರಿವು ಉಂಟಾಗುತ್ತದೆ.

    ನವೋದಯ ವಿದ್ಯಾಲಯವು ಹಲವು ವರ್ಷಗಳಿಂದ 10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆಯುತ್ತಿದೆ. ವಿದ್ಯಾಲಯವು ಪ್ರತಿವರ್ಷದಂತೆ ಈ ವರ್ಷವೂ (2025-26 ನೇ ಶೈಕ್ಷಣಿಕ ಸಾಲಿಗಾಗಿ) 6ನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಾಗಿ ಆನ್‍ ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆ ಬಯಲಾಗಿದ್ದು ಹೇಗೆ?

    February 13, 2026

    ಬೆಂಗಳೂರು ರೇಸ್‌ ಕೋರ್ಸ್ ತುಮಕೂರಿನ ಕುಣಿಗಲ್‌ ಗೆ ಸ್ಥಳಾಂತರ: ಸಂಪುಟ ನಿರ್ಣಯ

    February 13, 2026

    ವಿದ್ಯುತ್ ಖಾಸಗೀಕರಣ, ಬೀಜ ಮಸೂದೆ ವಿರುದ್ಧ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

    February 13, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಅಣೆಕಟ್ಟುಗಳ ಸುರಕ್ಷತಾ ಮಾನದಂಡಗಳು ರಾಜಕೀಯ ಗಡಿಗಳಿಗೆ ಸೀಮಿತವಾಗಿರಬಾರದು: ಸಿಎಂ ಸಿದ್ದರಾಮಯ್ಯ

    February 13, 2026

    ಬೆಂಗಳೂರು: ಅಣೆಕಟ್ಟುಗಳ ಸುರಕ್ಷತೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ನೀರು ಯಾವುದೇ ರಾಜಕೀಯ…

    ಶಾಸಕ ಅನಿಲ್ ಚಿಕ್ಕಮಾದುರವರ 38ನೇ ಹುಟ್ಟುಹಬ್ಬ: ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು

    February 13, 2026

    ಲಿಂಗಮ್ಮನಹಳ್ಳಿಯಲ್ಲಿ 150ನೇ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ

    February 13, 2026

    ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆ ಬಯಲಾಗಿದ್ದು ಹೇಗೆ?

    February 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.