ತುಮಕೂರು: ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಬಹು ದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ಹಾಗೂ ನೀರಿನ ಬಳಕೆ ಶುಲ್ಕವನ್ನು ವಸೂಲಿ ಮಾಡಲು ಪಾಲಿಕೆ ವ್ಯಾಪ್ತಿಯ ಡೇ–ನಲ್ಮ್ ಅಭಿಯಾನದಡಿ ರಚಿತವಾಗಿರುವ ಆಸಕ್ತ ಮಹಿಳಾ ಸ್ವ–ಸಹಾಯ ಸಂಘಗಳು/ಸ್ತ್ರೀಶಕ್ತಿ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸ್ತಿ ತೆರಿಗೆ ಹಾಗೂ ನೀರಿನ ಬಳಕೆ ಶುಲ್ಕವನ್ನು ವಸೂಲಿ ಕಾರ್ಯವನ್ನು ನಿರ್ವಹಿಸುವ ಮಹಿಳಾ ಸ್ವ–ಸಹಾಯ ಸಂಘಗಳು/ಸ್ತ್ರೀಶಕ್ತಿ ಸಂಘಗಳಿಗೆ ವಸೂಲಾದ ಆಸ್ತಿ ತೆರಿಗೆ ಹಾಗೂ ನೀರಿನ ಶುಲ್ಕದ ಮೊತ್ತದಲ್ಲಿನ ಶೇ.5ರಷ್ಟನ್ನು ಪ್ರೋತ್ಸಾಹಧನ ರೂಪದಲ್ಲಿ ನೀಡಲಾಗುವುದು.
ಆಸಕ್ತ ಸಂಘಗಳು ಭರ್ತಿ ಮಾಡಿದ ಅರ್ಜಿಯನ್ನು ಡಿಸೆಂಬರ್ 10ರೊಳಗಾಗಿ ಆಯುಕ್ತರು, ಮಹಾನಗರಪಾಲಿಕೆ, ತುಮಕೂರು ಇವರಿಗೆ ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx