ಬೆಂಗಳೂರು: ಮೈಸೂರಿನಲ್ಲಿ ಈಗಾಗಲೇ ಮೊದಲ ಅಪ್ಪು ಆಯಂಬುಲೆನ್ಸ್ ಸೇವೆ ಆರಂಭಗೊಂಡಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಅಪ್ಪು ಆಂಬುಲೆನ್ಸ್ ಸೇವೆ ಆರಂಭಗೊಳ್ಳಬೇಕು. ನನ್ನ ಕನಸಿನ ಯೋಜನೆಗೆ ಹಲವರು ಕೈ ಜೋಡಿಸಿದ್ದಾರೆ.
ಮುಂದೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಅಪ್ಪು ಆಂಬುಲೆನ್ಸ್ ಸೇವೆಯನ್ನು ಆರಂಭಿಸೋದಕ್ಕೆ ನಿರ್ಧರಿಸಲಾಗಿದೆ ಎಂದು ನಟ ಪ್ರಕಾಶ್ ರಾಜ್ ಘೋಷಣೆ ಮಾಡಿದರು.
ಅರಮನೆ ಮೈದಾನದಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಪುನೀತ್ ರಾಜ್ ಕುಮಾರ್ ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅಪ್ಪು ಇಂದು ಇಲ್ಲಿದ್ದರೇ ಕಾಂತಾರ ಎಂದು ಹೇಳುತ್ತಿದ್ದರು.
ಅಪ್ಪು ಆಂಬುಲೆನ್ಸ್ ಸೇವೆ ಆರಂಭಿಸಬೇಕು. ಪುನೀತ್ ರಾಜ್ ಕುಮಾರ್ ಕನಸು ಕೂಡ ಇದಾಗಿತ್ತು. ಈ ಮೂಲಕ ರಾಜ್ಯದ ಪ್ರತಿಯೊಬ್ಬರಿಗೂ ಆಂಬುಲೆನ್ಸ್ ಸೇವೆ ಸಿಗಬೇಕು ಅಂತ ಹೇಳುತ್ತಿದ್ದರು.
ಈ ಮಾತು ಅವರ ನಿಧನಾನಂತ್ರ ಹೇಳಿದಾಗ ನಟ ಸೂರ್ಯ, ನಟ ಚಿರಂಜೀವಿ ಹಾಗೂ ಶಿವರಾಜ್ ಕುಮಾರ್ ಪತ್ನಿ ಗೀತಾ ಒಂದೊಂದು ಆಂಬುಲೆನ್ಸ್ ಕೊಟ್ಟಿದ್ದಾರೆ. ಮುಂದೆ ಜಿಲ್ಲೆಗಳಲ್ಲಿ ಈ ಆಂಬುಲೆನ್ಸ್ ಸೇವೆ ಆರಂಭಗೊಳ್ಳಲಿದ್ದಾವೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz