ತುಮಕೂರು: ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ (ರಿ) ವತಿಯಿಂದ ಇಂದು ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಕಾರ್ಯಕಾರಿಣಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ , ಏಪ್ರಿಲ್ 14 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 131ನೇ ಜಯಂತಿ ಹಾಗೂ ಡಾ.ಬಾಬು ಜಗಜೀವನ್ ರಾಮ್ ರವರ 114ನೇ ಜಯಂತಿ ಅಂಗವಾಗಿ ಭಾರತ ಸಂವಿಧಾನ ಪೀಠಿಕೆಯನ್ನು ಮನೆಮನೆಗೂ ತಲುಪಿಸಿ ಅಂಬೇಡ್ಕರ್ ಹಬ್ಬ ಆಚರಿಸುವ ಮೂಲಕ ಪ್ರಬುದ್ಧ ಭಾರತದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿ ಭಾರತವನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು.
ಮನೆ ಮನೆಗೆ ಸಂವಿಧಾನ ಪೀಠಿಕೆಯ ಒಂದು ಸಾವಿರ ಪ್ರತಿಯನ್ನು ನೀಡಿ ಸಂವಿಧಾನದ ಅರಿವನ್ನು ಸಾಮಾನ್ಯ ಜನರಿಗೆ ತಿಳಿಸುವ ಮೂಲಕ ಅಂಬೇಡ್ಕರ್ ಚಿಂತನೆಯನ್ನು ಈ ಅಭಿಯಾನದ ಮೂಲಕ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತಕರಕ್ಷಣಾ ಸಮಿತಿಯಿಂದ ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಂದು ಬೆಳಗ್ಗೆ ನಗರದ ಎಳ್ಳರಬಂಡೆಗೆ ಸಮಯ ಬೆಳಗ್ಗೆ 8 ಕ್ಕೆ ,ಭಾರತಿ ನಗರ 8.30ಕ್ಕೆ, ಡಿ.ಎಂ ಪಾಳ್ಯ ಅನುಷ್ಕಾ ಸರ್ಕಲ್ 9ಕ್ಕೆ, ಎಸ್.ಎನ್ ಪಾಳ್ಯ 9-30ಕ್ಕೆ, ಅರಳೀಮರದ ಪಾಳ್ಯ 10 ಕ್ಕೆ, ದಿಬ್ಬೂರ್ ದೇವರಾಜ್ ಅರಸು ಬಡಾವಣೆ ಬೆಳಗ್ಗೆ10.30 ಕ್ಕೆ, ಸಂಪಾದನೆ ಬೆಳಗ್ಗೆ 11ಕ್ಕೆ ಅಭಿಯಾನ ನಡೆಸಲಾಗುವುದು ಎಂದರು.
ಬಳಿಕ ನಗರದ ಹೃದಯ ಭಾಗದಲ್ಲಿರುವ ಮಾರಿಯಮ್ಮ ನಗರ ವಸತಿ ಸಮುಚ್ಛಯದಲ್ಲಿ ಜೈ ಭೀಮ್ ಯುವಕರ ಸಂಘದಿಂದ ಬೆಳಗ್ಗೆ 11:30 ಗಂಟೆಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹಾಗೂ ಬಾಬು ಜಗಜೀವನ್ರಾಂ ರವರ ಹಬ್ಬವನ್ನು ಆಚರಿಸಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಸಲಾಗುವುದು. ಇದಕ್ಕೆ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಸ್ಲಂ ಶಾಖಾ ಸಮಿತಿ ಪದಾಧಿಕಾರಿಗಳು ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳು ನಡೆಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸ್ಲಂ ಸಮಿತಿ ಪದಾಧಿಕಾರಿಗಳಾದ ಶಂಕ್ರಯ್ಯ, ಕಣ್ಣನ್ ,ಅರುಣ್, ತಿರುಮಲಯ್ಯ, ತೇಜಸ್ ಕುಮಾರ್, ಚಕ್ರಪಾಣಿ, ರಂಗನಾಥ್,ಶಾರದಮ್ಮ, ಹನುಮಕ್ಕ, ಲಕ್ಷ್ಮೀಪತಿ, ಲತಾ, ಜಾಬೀರ್ಖಾನ್, ಮೋಹನ್, ಕೃಷ್ಣ, ಧನಂಜಯ್, ಸುಧಾ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಮಾರುತಿ ಪ್ರಸಾದ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5