nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮೊದಲು ನಿಲ್ಲಲಿ: ತಹಶೀಲ್ದಾರ್ ಮಮತಾ ಎಂ.

    March 9, 2026

    ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ

    March 9, 2026

    ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದ ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ

    March 9, 2026
    Facebook Twitter Instagram
    ಟ್ರೆಂಡಿಂಗ್
    • ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮೊದಲು ನಿಲ್ಲಲಿ: ತಹಶೀಲ್ದಾರ್ ಮಮತಾ ಎಂ.
    • ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ
    • ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದ ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ
    • ನಡೆಯಲಿಲ್ಲ ಪವಾಡ!: ಮಲ್ಲಿಕಾರ್ಜುನ ಮುತ್ಯಾಗೆ ಬಿಗ್ ಶಾಕ್ | ಜಾಮೀನು ಅರ್ಜಿ ವಜಾ
    • ಬರಗೂರು ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆ ಕೈಬಿಡಿ:  AIDSO ಆಗ್ರಹ
    • ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ; ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷದ ಕಂದಮ್ಮ!
    • ಆಟಿಕೆ ಗನ್ ತೋರಿಸಿ ‘ಪ್ರಾಂಕ್’ ಮಾಡಲು ಯತ್ನಿಸಿದ ಯುವಕನಿಗೆ ಸಂಕಷ್ಟ!
    • RSS ನಿಷೇಧ ವಿಚಾರ ಅನಗತ್ಯ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರೈತರ ಮೇಲೆ ಅರಣ್ಯಾಧಿಕಾರಿ ದುಗ್ಗಪ್ಪ ದರ್ಪ: ದೌರ್ಜನ್ಯ ತಡೆಯಲು ಜನ ಪ್ರತಿನಿಧಿಗಳು ವಿಫಲ
    ಗುಬ್ಬಿ March 7, 2022

    ರೈತರ ಮೇಲೆ ಅರಣ್ಯಾಧಿಕಾರಿ ದುಗ್ಗಪ್ಪ ದರ್ಪ: ದೌರ್ಜನ್ಯ ತಡೆಯಲು ಜನ ಪ್ರತಿನಿಧಿಗಳು ವಿಫಲ

    By adminMarch 7, 2022No Comments2 Mins Read
    aranya

    ಗುಬ್ಬಿ: ತಾಲೂಕಿನ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿರುವ ಗುಬ್ಬಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪನವರ ದರ್ಪ ತಾಲೂಕಿನಲ್ಲಿ ಹೆಚ್ಚಾಗಿದ್ದು, ಇವರ ದರ್ಪದ ಆಡಳಿತವನ್ನು ನಿಯಂತ್ರಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿರುವುದು ತಾಲೂಕಿನ ರೈತರ ದುರಾದೃಷ್ಟಕರವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಾಲೂಕಿನ ಕಸಬಾ ಹೋಬಳಿ ಅಮ್ಮನಘಟ್ಟ ಗ್ರಾಮದ ಸರ್ವೆ ನಂಬರ್ 164ರಲ್ಲಿ ಸುಮಾರು     2-34 ಗುಂಟೆ ಜಮೀನನ್ನು ಬಡ ರೈತ ದೊಡ್ಡ ತಿಮ್ಮಯ್ಯ ಹೊಂದಿದ್ದು,  ಸುಮಾರು 30 – 40 ವರ್ಷಗಳಿಂದ ಈ ಜಮೀನನ್ನು ನಂಬಿ ಸಂಸಾರವನ್ನು ನಡೆಸುತ್ತಿದ್ದಾರೆ. ಈ ನಡುವೆ ಏಕಾಏಕಿ ಅರಣ್ಯಾಧಿಕಾರಿ ದುರ್ಗಪ್ಪ ಯಾವುದೇ ಮುನ್ಸೂಚನೆ ನೀಡದೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯೊಡನೆ ಜಮೀನಿಗೆ ಧಾವಿಸಿ, ಅಲ್ಲಿ ಬೆಳೆದಿದ್ದ ಸುಮಾರು 50 ರಿಂದ 60 ಫಸಲು ಬಿಡುತ್ತಿರುವ ಅಡಿಕೆ ಮರ ಹಾಗೂ ಮೂವತ್ತು ವರ್ಷದಿಂದ ಕಾಪಾಡಿಕೊಂಡು ಬಂದಂತಹ 15 ತೆಂಗಿನ ಮರಗಳನ್ನು ಧರೆಗೆ ಉರುಳಿಸಿ ತನ್ನ ಅಹಂಕಾರವನ್ನು ಕುಟುಂಬದ ಮೇಲೆ ತೋರಿಸಿದ್ದು, ಬಡ ಕುಟುಂಬಗಳು ಇವರ ಆಡಳಿತದಿಂದ ಕಂಗಾಲಾಗಿದ್ದಾರೆ.


    Provided by
    Provided by

    ಈ ಕುರಿತು ಮಾಧ್ಯಮಗಳೊಂದಿಗೆ ತಮ್ಮ ಅಳಲನ್ನು ತೋಡಿಕೊಂಡ ದೊಡ್ಡ ತಿಮ್ಮಯ್ಯನವರ ಕುಟುಂಬ ನಾವು ಯಾವುದೇ ಒತ್ತುವರಿ ಮಾಡಿರುವುದಿಲ್ಲ. ಕಳೆದ ಎರಡು ತಿಂಗಳ ಹಿಂದೆ ಅರಣ್ಯ ಇಲಾಖೆಯ ಸಿಬ್ಬಂದಿ  ಸೇರಿ ಭೂಮಾಪನ ಅಳತೆ ನಡೆಸಿ ದುಗ್ಗಪ್ಪ ನವರ ಸಮ್ಮುಖದಲ್ಲೇ ಗಡಿ ಪ್ರದೇಶವನ್ನು ಗುರುತಿಸಿ ಕಲ್ಲನ್ನು ನೆಟ್ಟಿದ್ದು, ಕಲ್ಲಿನ ಮೇಲೆ ಅರಣ್ಯ ಇಲಾಖೆಯ ಸೀಮಿತ ಎಂದು ನಮೂದಿಸಿರುವುದು ಒಂದೆಡೆಯಾದರೆ ನಮ್ಮ ಜಮೀನನ್ನು ಹೊರತುಪಡಿಸಿ ಅರಣ್ಯ ಇಲಾಖೆಯ ಜಮೀನನ್ನು ಇಲ್ಲಿಯವರೆಗೂ ಒತ್ತುವರಿ ಮಾಡಿರುವುದಿಲ್ಲ ಎಂದು ರೈತ ಮಹಿಳೆ ಶಾರದಮ್ಮ ತಮ್ಮ ಅಳಲನ್ನು ತೋಡಿಕೊಂಡರು.

    ದೊಡ್ಡ ತಿಮ್ಮಯ್ಯನವರ ಮಗ ಆರ್.ಎಪ್. ಒ ದುಗ್ಗಪ್ಪ ನವರನ್ನು ಪರಿಪರಿಯಾಗಿ ಹೇಳಿದರೂ 30 ವರ್ಷಗಳಿಂದ ಬೆಳೆಸಿದ ಅಡಿಕೆ ತೆಂಗು ಮತ್ತು  ವೀಳ್ಯದೆಲೆ  ಅಂಬುಗಳನ್ನು ಮನುಷ್ಯತ್ವವಿಲ್ಲದೆ ಧರೆಗೆ ಉರುಳಿಸಿ ತಮ್ಮ ಅಧಿಕಾರವನ್ನು ನಮ್ಮ ಕುಟುಂಬದ ಮೇಲೆ ಸೇರಿಸಿಕೊಂಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ಕೇವಲ ಒಂದು ದಿನ ಅವಧಿ ನೀಡಿ ನಮ್ಮ ಜಮೀನನ್ನು ಸರ್ಕಾರದ ಸರ್ವೇ ಪ್ರಕಾರ ಅಳತೆ ಮಾಡಿಸಿ ಅರಣ್ಯ ಜಮೀನು ಆದರೆ ಬಿಟ್ಟುಕೊಡುತ್ತೇವೆ ಎಂದು ಅಂಗಲಾಚಿ ಬೇಡಿದರೂ ಸಹ ಈತನ ಮನಸ್ಸು ಕರಗದೆ ತನ್ನ ತಾಯಿ ಹೆಂಡತಿ ಹಾಗೂ ತಂಗಿಯರನ್ನು ಹೀನ ಮಾನವಾಗಿ ಹೀಯಾಳಿಸಿ ನಮಗೆ ಅನ್ಯಾಯವೆಸಗಿದ್ದಾರೆ. ಎಂದು ದೂರಿದ ಅವರು ನನಗೆ ನ್ಯಾಯ ರಕಿಸಿಕೊಡುವಲ್ಲಿ ತಾಲೂಕು ಆಡಳಿತಕ್ಕೆ ಮೊರೆ ಹೋಗುತ್ತೇನೆ. ಒಂದು ವೇಳೆ ನ್ಯಾಯ ಸಿಗದಿದ್ದರೆ ನಾನು ಮತ್ತು ನನ್ನ ಕುಟುಂಬ ವಿಷ ಕುಡಿದು ಸಾಯುತ್ತೇವೆ ಎಂದು ಕಣ್ಣೀರು ಹಾಕಿದ್ದಾರೆ.

    ಅರಣ್ಯವನ್ನು ಬೆಳೆಸಿ ಎಂದು ಸರ್ಕಾರವು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತಿದೆ. ಆದರೆ ಗುಬ್ಬಿ ತಾಲೂಕಿನ ಅರಣ್ಯಧಿಕಾರಿ ದುಗ್ಗಪ್ಪನ ದುರ್ವರ್ತನೆಯಿಂದ ಬೆಳೆದ ಮರಗಳನ್ನು ತಿಳಿಸುತ್ತಿರುವುದು ಎಷ್ಟು ಸಮಂಜಸ. ಈತನ ದೌರ್ಜನ್ಯಕ್ಕೆ ಈಗಾಗಲೇ ಸಾಕಷ್ಟು ರೈತರು ಬೇಸತ್ತಿದ್ದು ತಾಲೂಕಿನ ಹೋಬಳಿಯ ಹಂಗರಹಳ್ಳಿ ಗ್ರಾಮದ ರೈತರನ್ನು ಒಕ್ಕಲೆಬ್ಬಿಸಲು ಹೋಗಿ ಚೀಮಾರಿ ಹಾಕಿಸಿಕೊಂಡ ಘಟನೆ ನಡೆದಿದ್ದರೂ ಸಹ ಅರಣ್ಯ ಇಲಾಖೆಯ ಸ್ವತ್ತನ್ನು ಉಳಿಸುತ್ತೇನೆ ಎಂಬ ಭ್ರಮೆಯಿಂದ ಹೊರ ಬರುವುದು ಅಧಿಕಾರ ಕರ್ತವ್ಯವಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಅರಣ್ಯ ಒತ್ತುವರಿ ಮತ್ತು ಪಟ್ಟ ಜಮೀನು ಸೇರಿ ಮೂರು ಎಕರೆ ಮೀರಿದ ಅರಣ್ಯ ಒತ್ತುವರಿದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿದೆ. ಅರಣ್ಯ ಅಧಿಕಾರಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸದ ಹಿನ್ನೆಲೆ ಹಾಗೂ ಅರಣ್ಯ ಒತ್ತುವರಿದಾರರಲ್ಲಿ ಮೂಡಿರುವ ಆತಂಕದ ಬಗ್ಗೆ ಅರಿತ ಸರ್ಕಾರವು ಒತ್ತುವರಿದಾರರ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಅರಣ್ಯ ಒತ್ತುವರಿದಾರರನ್ನು ಮುಂದಿನ ಸೂಚನೆಯ ವರೆಗೂ ಒಕ್ಕಲೆಬ್ಬಿಸಿ ಬಾರದೆಂದು ಆದೇಶಿಸಿ 2016ರ ಜೂ.28 ರಂದು ಹಿಂದಿನ ಸುತ್ತೋಲೆಯಲ್ಲಿ ಉಲ್ಲೇಖಿಸಿದ ಎಲ್ಲ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದ್ದರು ಸರ್ಕಾರ ಕಟ್ಟುನಿಟ್ಟಿನ ಆದೇಶವನ್ನು ಉಲ್ಲಂಘಿಸಿ ತಾಲೂಕಿನ ರೈತರನ್ನು ಸಂಕಷ್ಟಕ್ಕೆ ಗುರಿ ಮಾಡಲು ಹೊರಟಿರುವ ದುಗ್ಗಪ್ಪನ ಅವರ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಾಗಿದೆ.

    ವರದಿ: ಡಿ.ಮಂಜುನಾಥ್,  ಗುಬ್ಬಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಬಜೆಟ್‌ ನಲ್ಲಿ ಜಿಲ್ಲೆಗೆ ನಿರಾಶೆ: ಶಾಸಕ ಎಸ್.ಆರ್. ಶ್ರೀನಿವಾಸ್ ಅಸಮಾಧಾನ

    March 8, 2026

    ಗುಬ್ಬಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನೇತೃತ್ವದಲ್ಲಿ ‘ಜನಸ್ಪಂದನ: ಸ್ಥಳದಲ್ಲೇ ಪಡಿತರ ಚೀಟಿ ವಿತರಣೆ

    March 8, 2026

    ಗಿರೀಶ್ ಹೆಚ್.ಎನ್. ಅವರಿಗೆ ರಾಜ್ಯಪಾಲರಿಂದ ಡಾಕ್ಟರೇಟ್ ಪದವಿ ಪ್ರಧಾನ

    February 26, 2026

    Leave A Reply Cancel Reply

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮೊದಲು ನಿಲ್ಲಲಿ: ತಹಶೀಲ್ದಾರ್ ಮಮತಾ ಎಂ.

    March 9, 2026

    ಚಿಕ್ಕನಾಯಕನಹಳ್ಳಿ: ತನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರ ಏಳಿಗೆಗಾಗಿ ಶ್ರಮಿಸಿ, ಅವರನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವುದೇ ಒಬ್ಬ ಮಹಿಳೆಯ ಜೀವನದ ದೊಡ್ಡ…

    ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ

    March 9, 2026

    ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದ ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ

    March 9, 2026

    ನಡೆಯಲಿಲ್ಲ ಪವಾಡ!: ಮಲ್ಲಿಕಾರ್ಜುನ ಮುತ್ಯಾಗೆ ಬಿಗ್ ಶಾಕ್ | ಜಾಮೀನು ಅರ್ಜಿ ವಜಾ

    March 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.