ತುರುವೇಕೆರೆ: ಕಾಂಗ್ರೆಸ್ ಪಕ್ಷದಲ್ಲಿ ಈಗಿರುವ ಕಾಂಗ್ರೆಸ್ ಎಸ್ ಸಿ– ಎಸ್ಟಿ ಕಾರ್ಯಕರ್ತರು ಮೊದಲು ನಮ್ಮ ಪಕ್ಷದಲ್ಲೇ ತಿಂದು ಉಂಡು ಹೋಗಿರೋದು ಅದನ್ನ ಮರೆತು ನಮ್ಮ ಹಾಲಿ ಶಾಸಕರ ಬಗ್ಗೆ ಹಗುರವಾಗಿ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ ಅದನ್ನು ನಾವು ಸಹ ಖಂಡಿಸುತ್ತೇವೆ ಎಂದು ಜೆಡಿಎಸ್ ನ ದಲಿತ ಮುಖಂಡರಾದ ಬೀಚನಹಳ್ಳಿ ರಾಮಣ್ಣ ಅವರು ಕಿಡಿಕಾರಿದರು.
ಇತ್ತೀಚೆಗೆ ತುರುವೇಕೆರೆ ಪಟ್ಟಣದ ಕಾಂಗ್ರೆಸ್ ಪಕ್ಷದ ಬೆಮೆಲ್ ಕಾಂತರಾಜು ಅವರ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ವಿರುದ್ಧ ನಡೆಸಿದ ವಾಗ್ದಾಳಿಗೆ ಇಂದು ಪಟ್ಟಣದ ಪ್ರವಾಸಿ ಮಂದಿರ ಪತ್ರಿಕಾಗೋಷ್ಠಿಯಲ್ಲಿ ರಾಮಣ್ಣ ತಿರುಗೇಟು ನೀಡಿದರು.
ಮೊಟ್ಟಮೊದಲ ಬಾರಿಗೆ ಎಸ್ ಸಿ ಎಸ್ ಟಿ ಕಾಲೋನಿಗಳಿಗೆ ಸಿಮೆಂಟ್ ರಸ್ತೆ, ಅಂಬೇಡ್ಕರ್ ಭವನಗಳ ನಿರ್ಮಾಣ ಮಾಡಿದ್ದೇ ಇದೆ ಎಂ.ಟಿ.ಕೃಷ್ಣಪ್ಪನವರು ಶಾಸಕರಾಗಿದ್ದಾಗ ಅದನ್ನ ನೆನಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ದಲಿತ ಮುಖಂಡರಾದ ಮುನಿಯೂರು ರಂಗಸ್ವಾಮಿ ಮಾತನಾಡಿ, ಬೆಮೆಲ್ ಕಾಂತರಾಜು ತುರುವೇಕೆರೆ ಕ್ಷೇತ್ರದಲ್ಲಿ 30,000 ಮತಗಳನ್ನು ಪಡೆದುಕೊಂಡು, ನಾನು ನೆಲಮಂಗಲವನ್ನು ಚಿನ್ನದ ಮಂಗಲ ಮಾಡುತ್ತೇನೆಂದು ಹೇಳುತ್ತಿದ್ದಾರಲ್ಲ ಇದು ನಾಚಿಕೆಗೇಡಿನ ಸಂಗತಿ, ಹಾಗೆಯೇ ಅದೇ ಪಕ್ಷದಲ್ಲಿ ಇರುವ ದಲಿತ ಮುಖಂಡರಾದ ಗುರುದತ್ ರವರು ಕೃಷ್ಣಪ್ಪನವರ ಬಳಿಯೇ ಇದ್ದುಕೊಂಡು ಅವರು ಕೂಡ ಬೋರ್ವೆಲ್ ಫಲಾನುಭವಿಗಳಾಗಿದ್ದಾರೆ. ಇದರ ಜೊತೆಗೆ ಇನ್ನೊಬ್ಬ ಹಿರಿಯ ದಲಿತ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಹನುಮಂತಯ್ಯ ನವರು ಕೂಡ ಬೋರ್ವೆಲ್ ಫಲಾನುಭವಿ ಇನ್ನು ಅಲ್ಲಿರುವ ಬಹುತೇಕ ದಲಿತ ಮುಖಂಡರುಗಳು ಜೆಡಿಎಸ್ ನ ಫಲಾನುಭವಿಗಳು ಎಂದು ತಿರುಗೇಟು ನೀಡಿದರು.
ಪಕ್ಷ ಫಲ ಪಡೆದುಕೊಂ ಈಗ ಪಲಾಯನ ಮಾಡಿ ಹಾಲಿ ಶಾಸಕರನ್ನು ರಾಜೀನಾಮೆ ಕೊಡುವಂತೆ ಅಂತ ಹೇಳಲು ನಿಮಗೆ ಯಾವುದೇ ನೈತಿಕತೆ ಇಲ್ಲ, ತುರುವೇಕೆರೆ ತಾಲೂಕಿನಲ್ಲಿ ಪ್ರತಿಯೊಂದು ಹಳ್ಳಿಗೆ ಹೋಗಿ ನೋಡಿ ಎಲ್ಲಾ ರಸ್ತೆಗಳು ಸಿಮೆಂಟ್ ರಸ್ತೆಯಾಗಿವೆ, ಅದು ಕೂಡ ಈ ಹಿಂದೆ ಇದ್ದಂತಹ ಶಾಸಕರಾಗಿದ್ದ ಹಾಲಿ ಶಾಸಕರಾಗಿರುವ ಇದೇ ಎಂ.ಟಿ. ಕೃಷ್ಣಪ್ಪನವರ ಕಾಲದಲ್ಲೇ ಆಗಿದ್ದು ಎಂದು ನೆನಪಿಟ್ಟುಕೊಳ್ಳಿ ಎಂದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ