ಬೆಂಗಳೂರು: ಮೊಬೈಲ್ ನಲ್ಲಿ ಜೋರಾಗಿ ಮಾತನಾಡಿದಳೆಂಬ ಕಾರಣಕ್ಕೆ ತಂಗಿಯೇ ಅಕ್ಕನನ್ನು ಕೊಲೆ ಮಾಡಿರುವ ಘಟನೆ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಗುಡಿಯಾ ದೇವಿ( 29) ಕೊಲೆಯಾದವರು.
ತಂಗಿ ಗೀತಾಕುಮಾರಿ ಹಾಗೂ ಗೆಳೆಯ ರಾಜೇಶ್ ಕುಮಾರ್(29) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ 8.15 ರ ಸುಮಾರಿಗೆ ಗುಡಿಯಾದೇವಿ ಮೊಬೈಲ್ ನಲ್ಲಿ ಜೋರಾಗಿ ಮಾತನಾಡುತ್ತಿದ್ದಕ್ಕೆ ತಂಗಿ ಗೀತಾ ಆಕ್ಷೇಪಿಸಿದ್ದರು. ಇದಕ್ಕೆ ಇಬ್ಬರ ನಡುವೆ ಜೋರು ಜಗಳ ನಡೆದಿತ್ತು. ಮನೆಯಲ್ಲಿಯೇ ಇದ್ದ ರಾಜೇಶ್, ಜಗಳ ಬಿಡಿಸಲು ಮುಂದಾಗಿದ್ದರು.
ಆದರೆ, ಮಾತು ಕೇಳದ ಗುಡಿಯಾ ಮೇಲೆ ಹಲ್ಲೆನಡೆಸಿದ್ದ.ಕುಸಿದು ಬಿದ್ದ ಗುಡಿಯಾ ಅವರ ಕತ್ತನ್ನು ದೊಣ್ಣೆಯಿಂದ ಅದುಮಿಕೊಂಡಿದ್ದ. ಪರಿಣಾಮ ಉಸಿರುಗಟ್ಟಿ ಗುಡಿಯಾ ಮೃತಪಟ್ಟಿದ್ದರು ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296