ಕರ್ನಾಟಕ ರಾಜಕೀಯ ರಾಜ್ಯ ವಿಶೇಷ ಚೇತನ ಸಮುದಾಯವು ರಾಜಕೀಯವಾಗಿ ಒಳಗೊಳ್ಳುವಿಕೆ ಮತ್ತು ಅವರ ಗೌರವ ಹೆಚ್ಚಿಸಲು ಕೇಂದ್ರ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ಅವರ ಪ್ರತಿನಿಧಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ.
ಯಾವುದೇ ರಾಜಕೀಯ ಪಕ್ಷಗಳ ಸದಸ್ಯರು ಅಥವಾ ಅವರ ಅಭ್ಯರ್ಥಿಗಳು ಭಾಷಣ, ಪ್ರಚಾರದಲ್ಲಿ ದಿವ್ಯಾಂಗರಿಗೆ ಧಕ್ಕೆ ತರುವಂತಹ ಭಾಷೆ ಬಳಸುವಂತಿಲ್ಲ. ಉದಾಹರಣೆಗೆ ಮೂಕ(ಗುಂಗಾ), ರಿಟಾರ್ಡೆಡ್ (ಪಾಗಲ್, ಸಿರ್ಫಿರಾ), ಕುರುಡು (ಅಂಧ, ಕನಾ), ಕಿವುಡ (ಬೆಹ್ರಾ) ಕುಂಟ (ಲಂಗ್ಲಾ, ಲೂಲಾ, ಅಪಹಿಜ್) ಮುಂತಾದ ಪದಗಳ ಬಳಕೆ ಮಾಡುವಂತಿಲ್ಲ.
ರಾಜಕೀಯ ಪಕ್ಷಗಳು ಮತ್ತು ಅವರ ಪ್ರತಿನಿಧಿಗಳು ತಮ್ಮ ಬರಹಗಳು, ಲೇಖನಗಳು ಸೇರಿದಂತೆ ಪ್ರಚಾರದ ಸಂದರ್ಭಗಳಲ್ಲಿ ಅಥವಾ ರಾಜಕೀಯ ಪ್ರಚಾರದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ, ಭಾಷಣದ ಸಮಯದಲ್ಲಿ ದಿವ್ಯಾಂಗರ ಅಂಗವೈಕಲ್ಯ ಅಥವಾ ಅಂಗವಿಕಲತೆಯನ್ನು ಆಡಿಕೊಳ್ಳುವ, ಅವಹೇಳನಕಾರಿ, ಅವಮಾನಕರ ಪದಗಳನ್ನು ಬಳಸಬಾರದು.
ರಾಜಕೀಯ ಪಕ್ಷಗಳು ಮತ್ತು ಪಕ್ಷದ ಪ್ರತಿನಿಧಿಗಳು ದಿವ್ಯಾಂಗರ ಅಂಗವಿಕಲತೆ, ಭಾಷೆ, ಪರಿಭಾಷೆ, ಸಂದರ್ಭ, ಅಪಹಾಸ್ಯ, ಅವಹೇಳನಕಾರಿ ಉಲ್ಲೇಖಗಳು ಮತ್ತು ಅವರನ್ನು ಅವಮಾನಿಸುವ ಯಾವುದೇ ರೀತಿಯ ಬಳಕೆಯು 2016 ರ ದಿವ್ಯಾಂಗರ ಹಕ್ಕುಗಳ ಕಾಯಿದೆಯ ಸೆಕ್ಷನ್ 92ರಡಿ ನಿಬಂಧನೆಗಳಿಗೆ ಒಳಪಡುತ್ತಾರೆ.
ರಾಜಕೀಯ ಪಕ್ಷಗಳು ದಿವ್ಯಾಂಗರ ಕುರಿತು ತಮ್ಮ ಪಕ್ಷಗಳ ಮಟ್ಟದಲ್ಲಿ ಪರಿಶೀಲಿಸಿ ಅಂಗೀಕರಿಸಲ್ಪಟ್ಟ ನಂತರ ಭಾಷಣ ಅಥವಾ ವಿಷಯವನ್ನು ಪ್ರಚುರಪಡಿಸುವುದು ಒಳ್ಳೆಯದು. ಚುನಾವಣಾ ಆಯೋಗದ ಈ ನಿರ್ಧಾರವನ್ನು ಭಾರತೀಯ ಅಂಗವಿಕಲರ ಸಬಲೀಕರಣ ಸಂಘ ಇದರ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಸ್ವಾಗತಿಸಿದ್ದಾರೆ.
ವರದಿ: ಆಂಟೋನಿ ಬೇಗೂರು


