ಮಧುಗಿರಿ: ಬರದ ನಾಡಾದ ಮಧುಗಿರಿಯಲ್ಲಿ ಇಲ್ಲಿಯವರೆಗೂ ಅಧಿಕಾರ ನಡೆಸಿದ ಶಾಸಕರು ಕೋಟ್ಯಂತರ ಅನುದಾನ ತಂದು ನೂರಾರು ಚೆಕ್ ಡ್ಯಾಮ್ ಹಾಗೂ ಕೆರೆಗಳ ಅಭಿವೃದ್ಧಿ ಮಾಡಿ ರೈತರಿಗೆ ನೆರವಾಗುತ್ತಿದ್ದಾರೆ. ಆದರೆ ಇಲ್ಲೊಬ್ಬ ಕಿಡಿಗೇಡಿ ಜೆಸಿಬಿ ಬಳಸಿ ರಸ್ತೆ ಹಾಗೂ ಕೆರೆಯ ಕೋಡಿ ಒಡೆದು ಹಾಕಿ ಕೆರೆಯ ನೀರನ್ನು ಪೋಲು ಮಾಡಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ತಾಲೂಕಿನ ದೊಡ್ಡೇರಿ ಹೋಬಳಿಯ ಸಿದ್ದರಾಗಲು ಬಳಿಯ ಕೆರೆಯು ನೂರಾರು ಎಕರೆ ಭೂಮಿಗೆ ನೀರು ನಿರುಣಿಸುತ್ತಿದ್ದು, ಅರಣ್ಯದ ಮಧ್ಯೆ ಇರುವ ಕಾರಣ ಸಾವಿರಾರು ಜೀವರಾಶಿಗಳಿಗೆ ನೀರಿನ ಆಸರೆಯಾಗಿತ್ತು. ಈ ಕೆರೆಯು ಕಳೆದ ವರ್ಷ ಸುರಿದ ಮಳೆಗೆ ತುಂಬಿತ್ತು, ಆದರೆ ಇದೀಗ ಈ ಕೆರೆಯ ಹಿಂಭಾಗದ ಜಮೀನಿನವರು ಕೆರೆಕೋಡಿಯನ್ನು ಒಡೆದು ಹಾಕಿ ನೀರು ಪೋಲಾಗುವಂತೆ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಕೃತ್ಯ ನಡೆಸಿದವರನ್ನು ತಕ್ಷಣವೇ ಪೊಲೀಸರು ಬಂಧಿಸಬೇಕು ಎಂದು ಇಲ್ಲಿನ ರೈತರು ಆಗ್ರಹಿಸಿದ್ದು, ಈ ಸಮಸ್ಯೆಯ ಪರಿಹಾರಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy