ಆನೆ ದಂತಗಳನ್ನು ಮಾರಲು ಯತ್ನಿಸುತ್ತಿದ್ದ ಆರೋಪದಡಿ ಶ್ರೀಶೈಲ ಎಂಬಾತನನ್ನು ಆರ್. ಎಂ. ಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಜೆ. ಸಿ. ನಗರ ನಿವಾಸಿ ಶ್ರೀಶೈಲ, ಉದ್ಯಮಿಯೊಬ್ಬರ ಮನೆಯಲ್ಲಿ ಉದ್ಯಾನ ನಿರ್ವಹಣೆ ಕೆಲಸ ಮಾಡುತ್ತಿದ್ದ. ಸ್ನೇಹಿತ ಸಮೀವುದ್ದೀನ್ ನೀಡಿದ್ದ ದಂತವನ್ನು ವರ್ಷದಿಂದ ಮನೆಯಲ್ಲಿಟ್ಟುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.
‘ಆರೋಪಿ ಯಶವಂತಪುರ ಕೈಗಾರಿಕೆ ಪ್ರದೇಶದ ಉಲ್ಲಾಸ್ ರಸ್ತೆಯಲ್ಲಿ ಆ. 10ರಂದು ನಿಂತಿದ್ದು, ಚೀಲದಲ್ಲಿ ಆನೆ ದಂತಗಳಿದ್ದವು. ಸ್ಥಳೀಯರೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು. ಈತನಿಂದ 7. 42 ಕೆ. ಜಿ ತೂಕದ 5 ದಂತಗಳನ್ನು ಜಪ್ತಿ ಮಾಡಲಾಗಿದೆ’ ಎಂದರು. ‘ಆನೆ ದಂತಗಳನ್ನು ನೀಡಿದ್ದ ಪ್ರಮುಖ ಆರೋಪಿ ಸಮೀವುದ್ದೀನ್ ವಾಪಸು ಒಯ್ದಿರಲಿಲ್ಲ. ದಂತಗಳನ್ನು ಎಲ್ಲಿಂದ ತರಲಾಗಿತ್ತು ಎಂಬುದು ಸಮೀವುದ್ದೀನ್ ಬಂಧನದ ಬಳಿಕವೇ ತಿಳಿಯಲಿದೆ’ ಎಂದು ಪೊಲೀಸರು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


