ಚಿಕ್ಕಮಗಳೂರು: ಮದ್ಯದ ಅಂಗಡಿ ನುಗ್ಗಿ ಮದ್ಯ ಹಾಗೂ ಲಕ್ಷಾಂತರ ಹಣ ದೋಚಿದ್ದ ಮೂವರು ಅಂತರ್ ಜಿಲ್ಲಾ ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಲ್ಲಿ ಒಬ್ಬ ಕುರಿಕಳ್ಳ, ಮತ್ತೊಬ್ಬ ದೇವಸ್ಥಾನದ ಹುಂಡಿ ಕಳ್ಳ, ಇನ್ನೊಬ್ಬ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸದಸ್ಯನಾಗಿದ್ದಾನೆ. ಹಾಸನ, ಚಿಕ್ಕಮಗಳೂರು ಜಿಲ್ಲೆಯ ಈ ಮೂವರು ಎಣ್ಣೆ ಕಳ್ಳರು, ವಿವಿಧ ಜಿಲ್ಲೆ ಸುತ್ತಿ ಎಣ್ಣೆ ಅಂಗಡಿಗಳನ್ನು ದೋಚುವುದೇ ಇವರ ಕೆಲಸ, ನಗರ ಪ್ರದೇಶಗಳಿಂದ ದೂರ ಇರುವ ಎಣ್ಣೆ ಅಂಗಡಿಗಳೇ ಇವರ ಟಾರ್ಗೆಟ್‌ಯಾಗಿತ್ತು ಎಂದು ಹೇಳಲಾಗಿದೆ.
ದಾವಣಗೆರೆ ತುಮಕೂರು ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದಾರೆ. ಇವರಲ್ಲಿ ಇಬ್ಬರು ಡ್ರೈವರ್ ಗಳು ಮತ್ತೊಬ್ಬ ಮಾನವ ಹಕ್ಕುಗಳ ಆಯೋಗದ ಸದಸ್ಯ, ಕಳೆದ ಮೇ 5 ರಂದು ಮರ್ಲೆ ಗ್ರಾಮದ ಎಂಎಸ್ ಐಎಲ್ ಮದ್ಯದ ಅಂಗಡಿಗೆ ಕನ್ನ ಹಾಕಿದ್ದ ಇವರ ಬೆನ್ನಿಗೆ ಬಿದ್ದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಕುಮಾರ್ ನೇತೃತ್ವದ ತಂಡ ಮೂವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಸ್ಟ್ರಿಎಣ್ಣೆಗಳು ಬಿಯರ್ ಬಾಟಲ್ ಸೇರಿದಂತೆ ಲೋಕಲ್ ಎಣ್ಣೆಗಳನ್ನು ಕಳವು ಮಾಡಿ ೭ ಲಕ್ಷ ೪೧ ಸಾವಿರದ ೧೬೦ ರೂಪಾಯಿ ಹಣವನ್ನು ಎಗರಿಸಿದ್ದ ಖದೀಮರು ಕುಡಿದು ಹಣ ಎಲ್ಲಾ ಖಾಲಿ ಮಾಡಿದ್ದರು. ಉಳಿದ ೧೦ ಬಿಯರ್, ೫ ಕ್ವಾಟರ್ ವಿಸ್ಕಿ, ೨೦ ಬಾಟಲಿ ಜೊತೆಗೆ ೫೨,೨೦೦ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಕುರಿಕಳ್ಳ ಜಗದೀಶ್ ಹೊಳೆನರಸೀಪುರದವನಾದರೆ ದೇವಸ್ಥಾನದ ಹುಂಡಿ ಕಳ್ಳ ದರ್ಶನ್ ಹಾಗೂ ನಕಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸದಸ್ಯ ರಘುಕುಮಾರ್ ಜಿಲ್ಲೆಯವರಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


