ಬೆಂಗಳೂರು: ದುಬಾರಿ ಮೌಲ್ಯದ ಮೊಬೈಲ್ ಕಳವು ಮಾಡಿಸಿ ಬಳಿಕ ಹೊರ ರಾಜ್ಯಗಳಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಖದೀಮರ ತಂಡದ ನಾಯಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧನಕ್ಕಳಪಡಿಸಿದ್ದಾರೆ.
ಆರೋಪಿಗಳನ್ನು ಮೊಹಮ್ಮದ್ ಮಹ್ಮದ್ ಪಾಷಾ ಅಲಿಯಾಸ್ ಆರೀಫ್ ಪಾಷಾ ಹಾಗೂ ಈತನ ಸಹಚರರಾದ ಮೊಹಮದ್ ಉಮರ್, ಐಯಾನ್ ಅಲಿಯಾಸ್ ಅಲೀಂ ಪಾಷ ಮತ್ತು ಮೊಹಮದ್ ಸಲೀಂ ಎಂದು ಗುರ್ತಿಸಲಾಗಿದೆ. ಆರೋಪಿಗಳಿಂದ ರೂ. 2 ಕೋಟಿ ಮೌಲ್ಯದ 1037 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.


