ಕೋರ್ಟ್ ಆವರಣದಲ್ಲೇ ನಿಲ್ಲಿಸಿದ್ದ ಹಿಟಾಚಿ ಕದ್ದಿದ್ದ ಖದೀಮರು ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಜಿಗಣಿಯಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕಾಮಗಾರಿಗೆಂದು ಹಿಟಾಚಿ ತರಿಸಲಾಗಿತ್ತು. ಕಾಮಗಾರಿ ಬಳಿಕ ಕೋರ್ಟ್ ಆವರಣದಲ್ಲೇ ಹಿಟಾಚಿ ನಿಲ್ಲಿಸಲಾಗಿತ್ತು.
ಜು.17ರ ರಾತ್ರಿ 1 ಗಂಟೆ ಸುಮಾರಿಗೆ ನಾಲ್ವರು ಕಳ್ಳರು ಲಾರಿ ಸಮೇತ ಕೋರ್ಟ್ ಬಳಿ ಬಂದಿದ್ದರು. ಸೆಕ್ಯೂರಿಟಿ ಬಳಿ ಆವರಣದಲ್ಲಿರುವ ಹಿಟಾಚಿ ನಮ್ಮದೆ, ಕೆಲಸ ಮುಗಿದಿದೆ ತೆಗೆದುಕೊಂಡು ಹೋಗ್ತೀವಿ ಅಂತ ಕಥೆ ಕಟ್ಟಿದ್ದರು. ಇದನ್ನು ನಂಬಿದ ಸೆಕ್ಯೂರಿಟಿ ಆರೋಪಿಗಳನ್ನು ಒಳಗೆ ಬಿಟ್ಟಿದ್ದಾರೆ.
ಬಳಿಕ ಕಳ್ಳರು ಲಾರಿಯಲ್ಲಿ ಹಿಟಾಚಿ ಹೇರಿಕೊಂಡು ಪರಾರಿಯಾಗಿದ್ದಾರೆ. ಹಿಟಾಚಿ ಕದಿಯುವ ಖತರ್ನಾಕ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಜಿಗಣಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗೆ ಹುಡುಕಾಟ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


