ತಿಪಟೂರು: ಆರ್ಯವೈಶ್ಯ ಸಮಾಜಕ್ಕೆ ಮುಂದುವರೆದ ಜನಾಂಗ ಎಂದು ಸರ್ಕಾರದ ಯಾವುದೇ ನೆರವು ಸಿಗುತ್ತಿಲ್ಲ, ನಮ್ಮ ಸಮಾಜದ ಕಡುಬಡವರಿಗೂ ಒಂದು ಮನೆ ಸಿಗುತ್ತಿಲ್ಲ, ಜಾತಿ ಆಧಾರಿತವಾದ ಈ ಕಾರ್ಯಕ್ರಮದಿಂದ ನಮ್ಮ ಸಮಾಜದ ಬಡವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರ್ಯವೈಶ್ಯ ಸಮಾಜದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ತಿಳಿಸಿದರು.
ನಮ್ಮ ಸಮಾಜದ ಬಡವರಿಗೆ ನಮ್ಮ ಸಮಾಜದ ಮೂಲಕವೇ ನೆರವು ನೀಡುತ್ತಿದೆ. ಇದರ ಭಾಗವಾಗಿ ತಿಪಟೂರಿನಲ್ಲಿ ತುಮಕೂರು ಜಿಲ್ಲಾ ಆರ್ಯವೈಶ್ಯ ಸಮಾಜದ ನಡೆಯುತ್ತಿದೆ. ಸಮಾಜದ ಕುಂದುಕೊರತೆ ತಿಳಿದು ಸಮಾಜದ ಈ ಕಾರ್ಯಕ್ರಮವನ್ನ ಮನೆ ಮನೆಗೆ ತಲುಪಿಸುತ್ತಿದ್ದೇನೆ ಎಂದರು.
ನಮ್ಮ ಸಮಾಜದಿಂದ ಕಳೆದ ಆರು ವರ್ಷಗಳಲ್ಲಿ ಸಾವು 400 ಲ್ಯಾಪ್ ಟಾಪ್ ವಿತರಿಸಿದ್ದು, ಲ್ಯಾಪ್ ಟಾಪ್ ಗಳನ್ನು ಇತರೆ ಸಮಾಜಕ್ಕೆ ನೀಡಿದ್ದೇವೆ. ಆರ್ಯ ವೈಶ್ಯರಿಗಷ್ಟೇ ಅಲ್ಲ ಎಲ್ಲಾ ಸಮಾಜದವರಿಗೂ ನೀಡುತ್ತಾ ಬಂದಿದ್ದೇವೆ ಎಂದರು.
ದಾಬಸ್ಪೇಟೆ ಹತ್ತಿರ ಸುಮಾರು ಎಂಟು ಎಕ್ಕರೆ ಭೂಮಿಯನ್ನು 70 ಕೋಟಿ ವೆಚ್ಚದಲ್ಲಿ ಎಲ್ ಕೆ ಜಿಯಿಂದ ಉನ್ನತ ಪದವಿವರೆಗೂ ವಿದ್ಯಾಭ್ಯಾಸಕ್ಕೆ ರೆಸಿಡೆನ್ಸಿಯಲ್ ಶಾಲೆ ವಾಸವಿ ಬ್ಯಾಂಕ್ ಕೂಡ ಪ್ರಾರಂಭಿಸುತ್ತಿದ್ದೇವೆ ಎಂದರು.
ಈ ಸಭೆಯಲ್ಲಿ ಶಾಸಕ ಕೆ.ಷಡಕ್ಷರಿ ಮತ್ತುಆರ್ಯವೈಶ್ಯ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ತಾಲೂಕ್ ಅಧ್ಯಕ್ಷ ಬಾಗೇಪಲ್ಲಿ ನಟರಾಜ್ ಗೌರವ ಅಧ್ಯಕ್ಷ ಜಿ.ಎಸ್.ವಿಶ್ವನಾಥ್, ಉಪಾಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಬಾಬು ಅನೇಕ ಸಮಾಜದ ಗಣ್ಯರು ಭಾಗವಹಿಸಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC