ವಿಜಯನಗರ: ಜೀವಂತವಾಗಿರುವ ತಾಯಿ-ಮಗನನ್ನು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿ, ಇಬ್ಬರನ್ನೂ ಪಡಿತರ ಚೀಟಿ ಹೆಸರಿನಿಂದ ಆಹಾರ ಇಲಾಖೆಯು ಡಿಲೀಟ್ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಆಹಾರ ಇಲಾಖೆಯಲ್ಲಿ ಬೆಳಕಿಗೆ ಬಂದಿದೆ.
ಅಂಜೀನಮ್ಮ ಮತ್ತು ಅವರ ಪುತ್ರ ಅಜಯ್ ಎಂಬವರು ಬದುಕಿದ್ದಾರೆ. ಹೀಗಿರುವಾಗಲೇ 2019ರಲ್ಲೇ ಸಾವನ್ನಪ್ಪಿದ್ದಾರೆ ಎಂದು ಬಿಪಿಎಲ್ ಕಾರ್ಡ್‌ನಿಂದ ಹೆಸರು ಡಿಲೀಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಕಳೆದ ಐದು ವರ್ಷದಿಂದ ಪಡಿತರದಿಂದ ಬಡ ಕುಟುಂಬವೊಂದು ವಂಚಿತವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆಹಾರ ಇಲಾಖೆಯ ಎಡವಟ್ಟಿನಿಂದ ತಾಯಿ ಮಗ ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ ಎನ್ನಲಾಗಿದೆ. ಇತ್ತ ನ್ಯಾಯಕ್ಕಾಗಿ ಅಂಜಿನಮ್ಮ ಕುಟುಂಬ ನಿತ್ಯ ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗೆ ಅಲೆಯುತ್ತಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಪರಿಶೀಲಿಸದೇ ಅಂಜೀನಮ್ಮ ಹೆಸರು ತೆಗೆದಿರುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


