ಬೀದರ: ಜಿಲ್ಲಾ ಪೊಲೀಸ್ ನ ವಿಶೇಷ ಮಹಿಳಾ ಘಟಕವಾದ ‘ಅಕ್ಕ ಪಡೆ’ಯ ಪಿ.ಎಸ್.ಐ ಸುವರ್ಣಾ ಅವರ ನೇತೃತ್ವದಲ್ಲಿ ಮಹಿಳಾ ಸಬಲೀಕರಣ ಮತ್ತು ರಸ್ತೆ ಸುರಕ್ಷತೆ ಅರಿವು ಮುಡಿಸಲು ಜಿಲ್ಲಾದ್ಯಂತ ಬೈಕ್ ಜಾಥಾಕ್ಕೆ ಚಾಲನೆ ನೀಡಲಾಯಿತು.
ರೋಟರಿ ಕ್ಲಬ್ ರವರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಜಾಥಾವು ಮಾರ್ಚ್ 5ರಿಂದ ಆರಂಭಗೊಂಡಿದ್ದು, 8ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಲಿದೆ.
ಪೊಲೀಸ್ ಇಲಾಖೆಯ ಶ್ರೇಯೊಭಿವೃದ್ದಿಯಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕೊಡುಗೆ ಅಪಾರವಾದದ್ದು, ಸಮಾಜದ ದುರ್ಬಲ ವರ್ಗದವರ (ಮಹಿಳೆಯರು & ಮಕ್ಕಳು) ನ್ಯಾಯ ಮತ್ತು ಹಕ್ಕುಗಳನ್ನು ಕಾಪಾಡಲು ಬೀದರ ಜಿಲ್ಲಾ ಪೊಲೀಸ್ ಅದರಲ್ಲೂ ನಮ್ಮ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯವರು ಸದಾ ಶ್ರಮಿಸುತ್ತಿದ್ದಾರೆ. ಈ ಜಾಥಾಕ್ಕೆ ಸಹಕರಿಸಿದ ರೋಟರಿ ಕ್ಲಬ್ ನ ಪದಾಧಿಕಾರಿ ಬೀದರ್ ಜಿಲ್ಲಾ ಪೊಲೀಸರು ಅಭಿನಂದನೆ ತಿಳಿಸಿದ್ದಾರೆ.
ವರದಿ: ಅರವಿಂದ್ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296