- ವೆಂಕಟೇಶ ಜೆ.ಎಸ್ ( ವಿಕ್ಕಿ )
ಕ್ರೀಡಾ ಸುದ್ಧಿ: ಪ್ರತಿವರ್ಷದ ಡಿಸೆಂಬರ್’ನಲ್ಲಿ ನಡೆಯುವ ಪ್ರತಿಷ್ಠಿತ ದ್ವಿಪಕ್ಷೀಯ ಆಶಸ್ ಸರಣಿಯ ಮೊದಲ ಪಂದ್ಯದ ಎರಡನೇ ದಿನವೂ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ.
‘ಬ್ರಿಸ್ಬೇನ್’ನಲ್ಲಿ ಡಿಸೆಂಬರ್ 8 ರಂದು ಪ್ರಾರಂಭವಾದ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ಪ್ಯಾಟ್ ಕಮಿನ್ಸ್’ರವರ ಕರಾರುವಾಕ್ಕಾದ ಬೌಲಿಂಗ್ ದಾಳಿಗೆ ತರಗೆಲೆಗಳಂತೆ ಉದುರಿದ ಇಂಗ್ಲೆಂಡ್ ಬ್ಯಾಟ್ಸ್ಮ್ಯಾನ್’ಗಳು ತಂಡದ ಅಲ್ಪ ಮೊತ್ತದ ಪತನಕ್ಕೆ ಕಾರಣವಾದರು.
ಹಮೀದ್, ಪೋಪ್, ಬಟ್ಲರ್ ಮತ್ತು ಕ್ರಿಸ್ ವೋಕ್ಸ್ ಹೊರೆತು ಪಡಿಸಿ , ಇನ್ಯಾವ ಬ್ಯಾಟ್ಸ್ ಮ್ಯಾನ್’ಗಳು ಕೂಡ ಎರಡಂಕಿಗಡಿ ಮುಟ್ಟಲಿಲ್ಲ. ಇದರೊಂದಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಇಂಗ್ಲೆಂಡ್ 147 ಕ್ಕೆ ಆಲೌಟ್ ಆಯಿತು.
ಅಲ್ಪ ಮೊತ್ತದ ಟ್ರೈಯಲ್ ಬೆನ್ನತ್ತಿದ ಆಸ್ಟ್ರೇಲಿಯಾ ವಾರ್ನರ್ ( 94), ಲ್ಯಾಬಶೇನ್ (74)ಮತ್ತು ಟ್ರೆವಿಸ್ ಹೆಡ್ ರವರ(112*) ಶತಕದ ನೆರವಿನಿಂದ ಎರಡನೇ ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸ್’ನಲ್ಲಿ 7 ವಿಕೆಟ್ ಕಳೆದು ಕೊಂಡು 343 ರನ್ ಗಳಿಸಿ 196 ರನ್ ಲೀಡ್’ನಲ್ಲಿದೆ. ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ಸ್ಕ್ರೀಸ್’ನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 147/10
ಹಮೀದ್ 25(75)
ಪೋಪ್ 35(79)
ಬಟ್ಲರ್ 39(58)
ವೋಕ್ಸ್ 21(24)
ಪ್ಯಾಟ್ ಕಮಿನ್ಸ್ 38ಕ್ಕೆ 5
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್
343/7
ವಾರ್ನರ್ 94(176)
ಲ್ಯಾಬ್ ಶೇನ್ 74(117)
ಹೆಡ್ 112*(95)
ರಾಬಿನ್ಸನ್ 48 ಕ್ಕೆ 3