ಆಸ್ಕರ್ ಪ್ರಶಸ್ತಿ ವಿಜೇತ ಕೆನಡಾದ ನಿರ್ದೇಶಕ ಪಾಲ್ ಹ್ಯಾಗಿಸ್ ಅವರು ದಕ್ಷಿಣ ಇಟಲಿಯಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.
ಕೆನಡಾ ಮೂಲದ ಹ್ಯಾಗಿಸ್(೬೯) ಅವರು ಓಸ್ಟುನಿಯಲ್ಲಿ ಮಂಗಳವಾರ ಪ್ರಾರಂಭವಾಗುವ ಚಲನಚಿತ್ರ್ಯೋತ್ಸವಕ್ಕಾಗಿ ಇಟಲಿಯಲ್ಲಿದ್ದಾರೆ. ಈ ವೇಳೆ ಯುವ ವಿದೇಶಿ ಮಹಿಳೆಯೊಬ್ಬಳು ಎರಡು ದಿನಗಳಿಂದ ನನಗೆ ಹ್ಯಾಗಿಸ್ ಅವರು ಲೈಂಗಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಆದರೆ ಹ್ಯಾಗಿಸ್ ಅವರ ಮೇಲೆ ದೂರು ಕೊಟ್ಟ ಮಹಿಳೆ ತನ್ನ ರಾಷ್ಟ್ರೀಯತೆ ಮತ್ತು ವಯಸ್ಸನ್ನು ಉಲ್ಲೇಖಿಸಿಲ್ಲ.
ಮಹಿಳೆ ದೂರಿನ ಆಧಾರದ ಮೇಲೆ ಇಟಲಿ ಪೊಲೀಸರು ಹ್ಯಾಗಿಸ್ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಹ್ಯಾಗಿಸ್ ಹಿರಿಯ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. ಅವರು ೨೦೦೬ ರಲ್ಲಿ ‘ಕ್ರ್ಯಾಶ್’ ಸಿನಿಮಾಗಾಗಿ ಅತ್ಯುತ್ತಮ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿಯನ್ನು ಗೆದ್ದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB