ಬೆಂಗಳೂರು: ಆಟೊ ಅಡ್ಡಗಟ್ಟಿ ಚಾಲಕ ಹಾಗೂ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನಿಲ್ ಮತ್ತು ರಘು ಬಂಧಿತರು. ಇವರಿಬ್ಬರು ಕ್ಯಾಬ್ ಚಾಲಕರು. ‘ಆಟೊ ಚಾಲಕ ನಂಜುಂಡ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಯುವತಿ ಸೇರಿ ನಾಲ್ವರು ಪ್ರಯಾಣಿಕರು ಆ್ಯಪ್ ಮೂಲಕ ಆಟೊ ಕಾಯ್ದಿರಿಸಿದ್ದರು. ಅವರನ್ನು ಹತ್ತಿಸಿಕೊಂಡಿದ್ದ ನಂಜುಂಡ, ಹೊರಮಾವು ಕಡೆ ಹೊರಟಿದ್ದಾಗ ಇವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.


