ಬೆಂಗಳೂರು: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ರೌಡಿಶೀಟರ್ ಸೇರಿದಂತೆ ಐವರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುಟ್ಟೆಪಾಳ್ಯದ ನಿವಾಸಿಗಳಾದ ಅರವಿಂದ್, ರಾಜ, ಶ್ರೀನಿವಾಸ್, ಗಣೇಶ್ ಸೇರಿ ಒಬ್ಬ ಬಾಲಕನನ್ನು ಬಂಧಿಸಲಾಗಿದೆ. ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು. ಭಾನುವಾರ ರಾತ್ರಿ ಹೊಂಬೇಗೌಡ ನಗರದ ಬಾರ್ ಸಮೀಪ ಗಣೇಶ್ ಎಂಬುವವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು.


