ಸದ್ಯಕ್ಕೆ ಅನ್ನಭಾಗ್ಯದಡಿ 10 ಕೆಜಿ ಪಡಿತರ ಅಕ್ಕಿ ಸಿಗೋದು ಡೌಟ್ ಎನ್ನಲಾಗ್ತಿದೆ. ಮುಂದಿನ ತಿಂಗಳು 10 ಕೆಜಿ ಸಿಗೋದು ಡೌಟ್ ಎನ್ನಲಾಗಿದೆ. ಈ ಬಗ್ಗೆ ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಸುಳಿವು ನೀಡಿದ್ದಾರೆ. ಅಕ್ಕಿ ದರದ ಬಗ್ಗೆ ಮಾತುಕತೆ ನಡೆಯುತ್ತಿದೆ. ತೆಲಂಗಾಣ & ಆಂಧ್ರಪ್ರದೇಶ ಅಕ್ಕಿ ಕೊಡಲು ಮುಂದೆ ಬಂದಿವೆ. ವಾರ ಇಲ್ಲವೇ 10 ದಿನಗಳ ಒಳಗೆ ಎಲ್ಲವೂ ಫೈನಲ್ ಆಗಲಿದೆ. ಹೀಗಾಗಿ ಇದೇ 25 & 26ರ ಒಳಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತದೆ ಎಂದರು.
ಕರ್ನಾಟಕದಲ್ಲಿ ಬಿಪಿಎಲ್, ಎಪಿಎಲ್ ಹೊಸ ಕಾರ್ಡ್ ನೋಂದಣಿ ಕೂಡ ಸದ್ಯಕ್ಕಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಎಚ್. ಮುನಿಯಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೊಸ ಕಾರ್ಡ್ ನೋಂದಣಿ ಬಗ್ಗೆ ಇನ್ನೂ ಆ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ. ಎಂದರು. ಇನ್ನು ರಾಜ್ಯದಲ್ಲಿ ಬಿಪಿಎಲ್ ಕಾರ್ಡಿಗೆ 2 ಲಕ್ಷದ 95 ಸಾವಿರ ಅರ್ಜಿ ಸಲ್ಲಿಕೆ ಆಗಿವೆ ಎಂದಯ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.


