nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’

    July 10, 2026

    ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ

    July 10, 2026

    ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ

    July 10, 2026
    Facebook Twitter Instagram
    ಟ್ರೆಂಡಿಂಗ್
    • ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’
    • ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ
    • ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ
    • ಮಕ್ಕಳಲ್ಲಿ ಶಿಕ್ಷಣದ ಪ್ರೀತಿ ಹುಟ್ಟಿಸುವ ಕಲಿಕೆ ಬದುಕಿನ ಆದ್ಯತೆಯಾಗಲಿ: ವೇಣುಗೋಪಾಲ್
    • ತಿಪಟೂರು: ಲಯನ್ಸ್ ಕ್ಲಬ್ ನ 8ನೇ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ
    • ಕಳ್ಳಿ ಗಿಡದ ಹಣ್ಣು ತಿನ್ನುವುದು ಹೇಗೆ? ಇಲ್ಲಿದೆ ಸುಲಭ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು!
    • ಪಾವಗಡ: ಮಹಿಳೆ ಮೇಲೆ ಹಲ್ಲೆ ನಡೆಸಿ ಆಭರಣ ಕದ್ದಿದ್ದ ಆರೋಪಿ ಸೆರೆ
    • ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಿ: ಡಾ.ಚಂದ್ರಶೇಖರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಖಾತೆದಾರರ ಹಣ ಲೂಟಿ: ಅಂಚೆ ಅಧಿಕಾರಿಗಳು, ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ
    ಜಿಲ್ಲಾ ಸುದ್ದಿ November 25, 2025

    ಖಾತೆದಾರರ ಹಣ ಲೂಟಿ: ಅಂಚೆ ಅಧಿಕಾರಿಗಳು, ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ

    By adminNovember 25, 2025No Comments2 Mins Read
    nagaraju

    ಸರಗೂರು:  ಪಟ್ಟಣದ ಒಂದನೇ ಮುಖ್ಯ ರಸ್ತೆಯ ಎಸ್‌ ಬಿಐ ಬ್ಯಾಂಕ್  ಪಕ್ಕದಲ್ಲಿರುವ ಅಂಚೆ ಕಚೇರಿ ಮುಂಭಾಗದಲ್ಲಿ ಖಾತೆದಾರರು ಹಾಗೂ ಪ್ರಗತಿಪರ ಸಂಘಟನೆಗಳು ಅಂಚೆ ಇಲಾಖೆ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.

    ಆರ್ಯ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ಮಾತನಾಡಿ, ಖಾತೆದಾರರ ಹಣವನ್ನು ಲೂಟಿ ಮಾಡಿರುವ ವ್ಯಕ್ತಿ ಯಾವುದೇ ಕ್ರಮ ಕೈಗೊಳ್ಳದೇ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇಲಾಖೆ ತನಿಖಾಧಿಕಾರಿಗಳು, ಆರು ತಿಂಗಳು ಕಳೆದರೂ ಇವರ ಮೇಲೆ ದೂರು ದಾಖಲಿಸಿಲ್ಲ, ಇವರು ಅಂಚೆ ಇಲಾಖೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ದೂರಿದರು.

    ಖಾತೆದಾರಿಗೆ ಹಣವನ್ನು ವರ್ಗಾವಣೆ ಮಾಡಿಲ್ಲ ಎಂದಾದರೆ ಪಟ್ಟಣವನ್ನು ಬಂದ್ ಮಾಡಿಸಿ ನಂತರ ಅಂಚೆ ಕಚೇರಿಗೆ ಬೀಗ ಜಡಿದು ಮುತ್ತಿಗೆ ಹಾಕುವ ಮೂಲಕ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು.  ಖಾತೆದಾರರು ಎಲ್ಲಾ ವಯಸ್ಸಾದವರಿಗೆ ಏನಾದರೂ ಸಮಸ್ಯೆಯಾದರೆ ಅಂಚೆ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಕಿಡಿಕಾರಿದ್ದರು.

    ವಯಸ್ಸಾರು ತಮ್ಮ ಜೀವನಕ್ಕೆ ಇಟ್ಟುಕೊಂಡಿದ್ದ ಹಣವನ್ನು ಅಂಚೆ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿ ದೀಪಕ್ ರವರು ನಕಲಿ ಸಹಿ ಮಾಡಿಕೊಂಡು ವರ್ಗಾವಣೆ ಮಾಡಿಕೊಂಡಿದ್ದರಿಂದ ಅಂಚೆ ಇಲಾಖೆ ಮೇಲೆ ನಂಬಿಕೆ ಇಲ್ಲದಂತೆಯಾಗಿದೆ ಎಂದು ಖಾತೆದಾರರ ಪರವಾಗಿ ಅಳಲು ತೋಡಿಕೊಂಡರು.

    ಆದಿಕರ್ನಾಟಕ ಮಹಾಸಭಾ ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ,  ಅಂಚೆ ಕಚೇರಿಯ ಉಳಿತಾಯ ಖಾತೆಯಿಂದ ಹಣ ಹಿಂಪಾವತಿಯ ಮೇಲೆ ಖಾತೆದಾರರ ನಕಲಿ ಸಹಿ ಮಾಡಿ ಹಣ ಪಡೆದಿದ್ದಾರೆ,  ಖಾತೆದಾರರು ಹಾಗೂ ಪ್ರಗತಿಪರ ಸಂಘಟನೆಗಳು ಮುಖಂಡರು ನಮಗೆ ಇನ್ನೂ ಒಂದು ತಿಂಗಳು ಒಳಗೆ ನಮ್ಮ ಹಣವನ್ನು ಖಾತೆಗೆ ಜಮಾ ಮಾಡಿಲ್ಲ ಎಂದಾದರೆ,  ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ನಂತರ ಜಿಲ್ಲಾ ಅಂಚೆ ಇಲಾಖೆ ಅಧಿಕಾರಿಗಳಾದ ಶ್ರೀನಿವಾಸ.ಚೇತನ್ ರವರು ಪ್ರತಿಭಟನೆ ನಡೆಯುತ್ತಿದ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸರಗೂರಿನಲ್ಲಿ ನಡೆದ ಘಟನೆದಿಂದ ನಾವು ಎಲ್ಲಾ ಗ್ರಾಹಕರ ಮುಂದೆ ತನಿಖೆ ನಡೆಸಿದ್ದೇವೆ. ನಾವುಗಳು ಎರಡು ತಿಂಗಳ ಕಾಲ ಖಾತೆದಾರರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಅದರಂತೆ ಕಚೇರಿಯಲ್ಲಿ 32 ಸಾವಿರ ಖಾತೆದಾರರು ಇದ್ದಾರೆ. ಅದರಲ್ಲಿ 75 ಖಾತೆದಾರರ ಹಣವನ್ನು ಲೂಟಿ ಮಾಡಿರುವ ಕಂಡು ಬಂದಿದೆ. ಅದನ್ನು ಕೇಂದ್ರ ಇಲಾಖೆ ಗಮನಕ್ಕೆ ತರಲಾಗಿದೆ.ಸಿಬಿಐ ಇಲಾಖೆ ದೂರು ನೀಡಿದ್ದೇವೆ.ಅವರು ಬಂದು ತನಿಖೆ ಮುಂದಾಗುತ್ತಾರೆ. ಈಗಾಗಲೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

    ಸರಗೂರಿನಲ್ಲಿ ನಡೆದ ಘಟನೆಯ ಬಗ್ಗೆ ನಾಳೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಭೆ ಮಾಡುತ್ತಿದ್ದಾರೆ. ಇದರ ಬಗ್ಗೆ ಮಾತನಾಡಿ ನಿಮ್ಮ ಹಣವನ್ನು ಖಾತೆಗೆ ಜಮಾ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಪ್ರತಿಭಟನಾಕಾರು ನಿಮ್ಮ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಖಾತೆಗೆ ಜಮಾ ಮಾಡುವವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಪಟ್ಟು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

    ಈ ಸಂದರ್ಭದಲ್ಲಿ ಚನ್ನಿಪುರ ಮಲ್ಲೇಶ್, ಗ್ರಾಮೀಣ ಮಹೇಶ್, ಲಂಕೆ ಲಕ್ಷಣ್, ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ, ಪ್ರತಿಭಟನೆಯಲ್ಲಿ ಖಾತೆದಾರರಾದ ಮುಳ್ಳೂರು ಲೋಕೇಶ್, ಎಸ್.ಆರ್.ಮಹೇಶ್, ನಿವೃತ್ತ ಶಿಕ್ಷಕ ಶಾಂಭವಮೂರ್ತಿ, ಮಹದೇವಪ್ಪ, ಪೋಸ್ಟ್ ದಾಸೇಗೌಡ,ನಿತಿನ್, ಶಾಂತಣ್ಣ, ಸರಗೂರು ಲೋಕೇಶ್, ಸುಂದರಮ್ಮ, ರಾಜೇಶ್, ಸಿ. ನಾಗರಾಜ್, ಸಿ. ಚೌಡಶೆಟ್ಟಿ,  ವೆಂಕಟೇಶ್, ಅನಂತ ಶಯನ, ಸುಧಾ, ಜಯಮ್ಮ, ಸರೋಜಮ್ಮ, ಜಿ.ಬಿ.ಶಶಿಕಲಾ, ಜಗದೀಶ್,  ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಹಣ ಕಳೆದು ಕೊಂಡ ನೊಂದ ಗ್ರಾಹಕರುಗಳು ಭಾಗವಹಿಸಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


    Provided by
    Provided by
    admin
    • Website

    Related Posts

    ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ

    July 10, 2026

    ದೈವಾರಾಧನೆ ಜೊತೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿ: ಎಂಜಿನಿಯರ್ ತಿಮ್ಮರಾಯಪ್ಪ

    July 10, 2026

    ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ ಪತಿ ಬಂಧನ

    July 9, 2026

    Leave A Reply Cancel Reply

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’

    July 10, 2026

    ಬೆಂಗಳೂರು: ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಹಾಗೂ ಕೆಲಸದ ಒತ್ತಡ ಇಳಿಸಲು ಒತ್ತಾಯಿಸಿ ಲಕ್ಷಾಂತರ ಅಂಗನವಾಡಿ (ಐಸಿಡಿಎಸ್) ಮತ್ತು ಬಿಸಿಯೂಟ…

    ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ

    July 10, 2026

    ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ

    July 10, 2026

    ಮಕ್ಕಳಲ್ಲಿ ಶಿಕ್ಷಣದ ಪ್ರೀತಿ ಹುಟ್ಟಿಸುವ ಕಲಿಕೆ ಬದುಕಿನ ಆದ್ಯತೆಯಾಗಲಿ: ವೇಣುಗೋಪಾಲ್

    July 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.