ತುಮಕೂರು: ಗ್ಯಾಸ್ ಕಟ್ಟರ್ ಬಳಸಿ ಜ್ಯುವೆಲರಿ ಅಂಗಡಿ ಕಳ್ಳತನಕ್ಕೆ ಯತ್ನಿಸಿರೋ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕೆ.ಜಿ.ಟೆಂಪಲ್ ನಲ್ಲಿ ನಡೆದಿದೆ.
ಲಕ್ಷ್ಮೀ ಜ್ಯುವೆಲರಿ ಶಾಪ್ ನಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿರುವ ಚೋರರು ಜ್ಯುವೆಲರಿ ಅಂಗಡಿಯ ಬಾಗಿಲು ಮುರಿದಿದ್ದಾರೆ. ಸ್ಥಳೀಯರನ್ನು ಕಂಡು ಖದೀಮರು ಬೈಕ್ ಹಾಗೂ ಗ್ಯಾಸ್ ಕಟ್ಟರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಇದೇ ರೀತಿ ಕಳ್ಳತನ ನಡೆದಿತ್ತು. ಕೆ.ಜಿ ಟೆಂಪಲ್ ಭವಾನಿ ಜ್ಯುವೆಲರಿ ಶಾಪ್ ನಲ್ಲಿ ಕಳ್ಳತನ ನಡೆದಿತ್ತು. 6 ಕೆಜಿ ಬೆಳ್ಳಿ ಆಭರಣ ದೋಚಲಾಗಿತ್ತು. ಇದೀಗ ಮತ್ತೊಂದು ಕಳ್ಳತನ ಯತ್ನ ಪತ್ತೆಯಾಗಿದ್ದು ವ್ಯಾಪಾರಸ್ಥರು ಆತಂಕದಲ್ಲಿದ್ದಾರೆ.