ಇಂಡಿ: “ಸರ್ಕಾರದ ಕೆಲಸ ದೇವರ ಕೆಲಸ” ಇದು ಶಕ್ತಿ ಸೌಧ ವಿಧಾನ ಸೌಧದ ಮುಂದೆ ಹಾಕಿರುವ ಘೋಷ ವಾಕ್ಯ. ಆದರೆ, ಸರ್ಕಾರದ ಕೆಲಸ ದೇವರ ಕೆಲಸವಲ್ಲ ಎಂಬಂತೆ ವರ್ತಿಸುತ್ತಿರುವ ಇಂಡಿ ಪುರಸಭೆ ಕಾರ್ಯಾಲಯದ ಸಿಬ್ಬಂದಿ ದರ್ಬಾರು ನೋಡಿದರೆ ಹೇಳತೀರದು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಪುರಸಭೆ ಕಾರ್ಯಾಲಯ ಶನಿವಾರ 12 ಘಂಟೆ. ಆದರೂ ಇಲ್ಲಿ ಕಾಣುವ ಕುರ್ಚಿಗಳೆಲ್ಲ ಖಾಲಿ ಖಾಲಿ ಎನ್ನುವದು ವಿಪರ್ಯಾಸ ಸಂಗತಿ .ಇಲ್ಲಿನ ನೌಕರರು ಆಫೀಸ್ ಗೆ ಬಂದ್ರೆ ಬರ್ತಾರೆ. ಇಲ್ಲ ಅಂದ್ರೆ ಇಲ್ಲ. ಇವರಿಗೆ ಹೇಳೋರು ಕೇಳೋರು ಯಾರೂ ಇಲ್ಲ. ಯಾರ ಭಯವೂ ಇಲ್ಲ. ಹೀಗೆ ಕಳ್ಳಾಟವಾಡಿಕೊಂಡು ತಿಂಗಳಾಯಿತು.
ಅಂದರೆ ಕೈ ತುಂಬಾ ಸಂಬಳ ಜೇಬಿಗಿಳಿಸಿಕೊಳ್ಳತಾರೆ. ಇಂತಹ ಬೇಜವಾಬ್ದಾರಿ ಅಧಿಕಾರಿ ಇದ್ದರೆ ಅಧೋಗತಿ. ಇಲ್ಲಿ ಹೇಳೋರು ಇಲ್ಲ. ಕೇಳೋರು ಇಲ್ಲ. ಇಂತಹ ಪರಿಸ್ಥಿತಿ ಉದ್ಭವವಾಗಿದೆ.
ಸದ್ಯ ಇಲ್ಲಿನ ಜನರ ಹೇಳಿಕೆಯ ಪ್ರಕಾರ ಇಲ್ಲಿನ ಸಿಬ್ಬಂದಿಗಳು ಮನಸಿಗೆ ಬಂದಾಗ ಬರುತ್ತಾರೆ ಎಂದು ಮಾಧ್ಯಮದ ಎದುರು ಹೇಳಿರುತ್ತಾರೆ. ಇನ್ನಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಇವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡೋಣ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


