ಬೀದರ್: ಜಿಲ್ಲೆಯ ಔರಾದ ಪಟ್ಟಣದ ಆರಾಧ್ಯದೈವ ಐತಿಹಾಸಿಕ ಸುಕ್ಷೇತ್ರ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವವು ಫೆಬ್ರವರಿ 25ರಿಂದ ಮಾರ್ಚ್ 3ವರೆಗೆ ನಡೆಯಲಿದೆ.
ಫೆಬ್ರವರಿ 25ರಂದು ಸಂಗೀತ ದರ್ಬಾರ್, 26ರಂದು ಅಗ್ನಿ ಪೂಜೆ (ಮಹಾಶಿವರಾತ್ರಿ), 27ರಂದು ರಥೋತ್ಸವ, 28ರಂದು ಜಂಗಿ ಕುಸ್ತಿ ನಡೆಯಲಿದೆ, ಮಾರ್ಚ್ 3ರಂದು ಪಶು ಪ್ರದರ್ಶನ ನಡೆಯಲಿದೆ.
ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಸುಶೀಲ ವಾಣಿ ಕನ್ನಡ ದಿನ ಪತ್ರಿಕೆ ಸಂಪಾದಕ ಶಶಿಕಾಂತ ಆತ್ತಾರಾಮ ಕಾಂಬಳೆ, ಸುದ್ದಿ ಮೂಲ ಕನ್ನಡ ದಿನ ಪತ್ರಿಕೆ ಪತ್ರಕರ್ತ ಸುನಿಲ್ ಜಿರೋಬೆ, ಕರ್ನಾಟಕ ರಾಜ್ಯದ ಮಾಜಿ ಹಜ್ ಕಮಿಟಿ ಸದಸ್ಯರಾದ ಎಮ್.ಡಿ.ನಯೂಮ್, ಪತ್ರಕರ್ತ ಅರವಿಂದ ಮಲ್ಲಿಗೆ, ಬೆಳಕುಣಿ ( ಚೌ) ಗ್ರಾಪಂ ಸದಸ್ಯ ದೇವಿದಾಸ ಮಾಳೆಗೆ ಸ್ವಾಗತಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4