Subscribe to Updates
Get the latest creative news from FooBar about art, design and business.
- ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ
- ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
- ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್ ಬುಕ್ ವಿತರಣೆ
- ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರವೇಶಾತಿಗೆ ಅರ್ಜಿ ಆಹ್ವಾನ
- ಗೋನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆ ಪ್ರಯೋಜನೆ ಪಡೆಯಲು ತೋಟಗಾರಿಕೆ ಇಲಾಖೆ ಮನವಿ
- 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
- ತುಮಕೂರು: ಗಾಂಜಾ ಸಾಗಣೆ: ಅಪರಾಧಿಗೆ 4 ವರ್ಷ ಕಠಿಣ ಶಿಕ್ಷೆ; ದಂಡ
Author: admin
ಚುನಾವಣಾ ಬಾಂಡ್ ಪ್ರಕರಣದಲ್ಲಿ ಮರುಪರಿಶೀಲನೆಯ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಕೋರಿದೆ. ಕಪ್ಪುಹಣವನ್ನು ರಾಜಕೀಯದಿಂದ ಹೊರಗಿಡಲು ಚುನಾವಣಾ ಬಾಂಡ್ ವ್ಯವಸ್ಥೆಯು ಸರಿಯಾದ ಪರಿಶ್ರಮದಿಂದ ಮುಂದುವರಿಯಲು ಅವಕಾಶ ನೀಡಬೇಕು ಎಂದು ವಾದಿಸಲಾಗುತ್ತದೆ. ಚುನಾವಣೆ ಪ್ರಕ್ರಿಯೆ ಮುಗಿದ ಕೂಡಲೇ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಫೆಬ್ರವರಿ 15, 2024 ರಂದು, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತು, ಚುನಾವಣಾ ಬಾಂಡ್‌ಗಳು, ವ್ಯಕ್ತಿಗಳು ಮತ್ತು ಕಂಪನಿಗಳು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡುವ ಕಾರ್ಯವಿಧಾನವಾಗಿದೆ, ಇದು ಅಸಂವಿಧಾನಿಕವಾಗಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕೇಂದ್ರ ಸರ್ಕಾರಕ್ಕೆ ಭಾರೀ ಹೊಡೆತ ನೀಡಿತ್ತು. ದೇಶದಲ್ಲಿ ಎಲೆಕ್ಟೋರಲ್ ಬಾಂಡ್ ಅನ್ನು ಪ್ರಾಮಿಸರಿ ನೋಟ್ ನಂತೆ ಬಳಸಲಾಗುತ್ತಿದೆ ಎಂಬ ಕೇಂದ್ರದ ವಾದಕ್ಕೆ ಸುಪ್ರೀಂ ಕೋರ್ಟ್ ಬೆಲೆ ನೀಡಲಿಲ್ಲ. ಚುನಾವಣಾ ಬಾಂಡ್ ವ್ಯವಹಾರದಲ್ಲಿ ಭಾಗಿಯಾಗಿರುವ ಪಕ್ಷಗಳ ಬಗ್ಗೆ ಯಾವುದೇ ಮಾಹಿತಿಯನ್ನು ಪಡೆಯದಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮರುಪರಿಶೀಲನಾ ಅರ್ಜಿಯ ಮೂಲಕ ನ್ಯಾಯಾಲಯ ಎತ್ತಿರುವ ಆಕ್ಷೇಪಣೆಗಳನ್ನು ಸ್ವೀಕರಿಸಿ ವ್ಯವಸ್ಥೆಯನ್ನು ಮರುಸಂಘಟಿಸಲು ಸಿದ್ಧ…
ತಮಿಳುನಾಡಿನ ನಟ ಮತ್ತು ತಮಿಳಗಂ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್ ವಿರುದ್ಧ ಕೇಸ್ ದಾಖಲಾಗಿದ್ದು, ನಿಯಮ ಉಲ್ಲಂಘಿಸಿ ಮತದಾನದ ದಿನ ಜನಸಂದಣಿಯೊಂದಿಗೆ ಮತಗಟ್ಟೆಗೆ ಆಗಮಿಸಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಜನರು ಗುಂಪುಗುಂಪಾಗಿ ಮತಗಟ್ಟೆಗೆ ಬಂದು ಜನರಿಗೆ ತೊಂದರೆ ಕೊಡುತ್ತಾರೆ ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಅವರು ಸ್ವೀಕರಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ವಿಜಯ್ ಅವರು ಚೆನ್ನೈನ ನೀಲಂಗರರೈ ಮತಗಟ್ಟೆಗೆ ಮತ ಹಾಕಲು ಬಂದಾಗ 200ಕ್ಕೂ ಹೆಚ್ಚು ಜನರನ್ನು ತನ್ನೊಂದಿಗೆ ಕರೆತಂದು ಸಾರ್ವಜನಿಕರಿಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವಿಜಯ್ ಮತ ಚಲಾಯಿಸಲು ಆಗಮಿಸಿದ ವೇಳೆ ವಿಜಯ್ ಅವರನ್ನು ನೋಡಲು ಅಭಿಮಾನಿಗಳು ಮತಗಟ್ಟೆಗೆ ನುಗ್ಗಿದರು. ನಂತರ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕಿವೀಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಆಸ್ತಮಾದ ಉಸಿರಾಟದ ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ವಿಟಮಿನ್ ಸಿ ಅಂಶ ಮತ್ತು ಇತರ ಪ್ರಯೋಜನಕಾರಿ ಸಂಯುಕ್ತಗಳ ಕಾರಣದಿಂದಾಗಿರಬಹುದು. ಡೆಂಗ್ಯೂ ಅಥವಾ ವೈರಲ್ ಜ್ವರದಲ್ಲಿ ಪ್ಲೇಟ್ಲಿಟ್ಗಳು ಕಡಿಮೆಯಾದಾಗ ಹೆಚ್ಚು ಕಿವಿ ಹಣ್ಣುಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಆದಾಗ್ಯೂ, ಈ ಕಿವಿಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಆದರೆ, ಇದು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ದವಾಗಿದೆ. ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ, ಪೊಟ್ಯಾಸಿಯಮ್ ಮತ್ತು ಫೋಲೇಟ್ ಸಮೃದ್ಧವಾಗಿದೆ. ಕಿವೀಸ್ ಆಹಾರದ ಫೈಬರ್ ಅನ್ನು ಸಹ ನೀಡುತ್ತದೆ. ಇದು ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಕಿವೀಸ್ ಸೇವನೆಯಿಂದ ಆಗುವ ಹಲವಾರು ಆರೋಗ್ಯ ಪ್ರಯೋಜನಗಳ ಬಗ್ಗೆ ಈಗ ತಿಳಿಯೋಣ. ಕಿವಿ ಹಣ್ಣು ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಚರ್ಮ ಮತ್ತು ಬಲವಾದ ಅಂಗಾಂಶಗಳಿಗೆ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಕಿವೀಸ್ ವಿಟಮಿನ್ ಸಿ, ವಿಟಮಿನ್…
ಖ್ಯಾತ ನಟಿ ಮಲೈಕಾ ಅರೋರಾ ಕಾರ್ಯಕ್ರಮ ಒಂದನ್ನು ನಡೆಸಿಕೊಟ್ಟಿದ್ದು, ಇದರಲ್ಲಿ ಮಲೈಕಾ ಜೊತೆ ಅವರ ಮಗ ಅರ್ಹಾನ್ ಕೂಡ ಇದ್ದರು. ಈ ವೇಳೆ ಮಲೈಕಾ ತನ್ನ ಮಗನಿಗೆ ವರ್ಜಿನಿಟಿ ಬಗ್ಗೆ ನೀನು ಯಾವಾಗ ಅದನ್ನು ಕಳಕೊಂಡೆ ಪ್ರಶ್ನೆ ಮಾಡಿದ್ದಾರೆ. ಪಾಡ್ ಕಾಸ್ಟ್ ನ(Podcast) ಟೀಸರ್ ರಿಲೀಸ್ ಆಗಿದೆ. ಅರ್ಹಾನ್ ಖಾನ್ ಹಾಗೂ ಮಲೈಕಾ ಅರೋರ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ವೈಯಕ್ತಿಕ ವಿಷಯಗಳ ಬಗ್ಗೆ ಕೂಡ ಅಮ್ಮ–ಮಗ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಮಾತಾಡಿದ್ದಾರೆ. ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಮಲೈಕಾ ತನ್ನ ಮಗ ಅರ್ಹಾನ್ ಗೆ ಮೊದಲ ಬಾರಿಗೆ ನೀನು ಯಾವಾಗ ಲೈಂಗಿಕತೆಯಲ್ಲಿ ತೊಡಗಿಕೊಂಡೆ ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ನೀನು ಯಾವಾಗ ವರ್ಜಿನಿಟಿ ಕಳೆದುಕೊಂಡೆ ಅಂತಾನು ಕೇಳಿ ಶಾಕ್ ಕೊಟ್ಟಿದ್ದಾರೆ. ತಾಯಿ ಮಲೈಕಾಳ ಪ್ರಶ್ನೆಗೆ ಅರ್ಹಾನ್ ಫುಲ್ ಸೈಲೆಂಟ್ ಆಗಿದ್ದಾನೆ. ಸರಿಯಾದ ಮತ್ತು ಪ್ರಾಮಾಣಿಕ ಉತ್ತರ ಕೊಡು ಎಂದು ಮಗನಿಗೆ ತಾಕೀತು ಮಾಡಿದ್ದಾರೆ. ಆದರೆ, ಅರ್ಹಾನ್…
ಶಿಕ್ಷಕರ ವರ್ಗಾವಣೆಗೆ ಶಿಕ್ಷಕರು ಮಾಹಿತಿ ಸಲ್ಲಿಸಲು ನಿಗದಿಪಡಿಸಿದ್ದ ದಿನಾಂಕ ಪರಿಷ್ಕರಿಸಲಾಗಿದ್ದು, ವಲಯವಾರು ಶಿಕ್ಷಕರ ವರ್ಗಾವಣೆಗೆ ಅರ್ಹರ ಅಂತಿಮ ಪಟ್ಟಿಯನ್ನು ಏ.24ರಂದು ಶಿಕ್ಷಣ ಇಲಾಖೆ ಪ್ರಕಟಿಸಲಿದೆ. ಇಲಾಖೆಯು ನೀತಿ ಸಂಹಿತೆ ಮೊದಲೇ ವರ್ಗಾವಣೆಗೆ ಅರ್ಜಿ ಆಹ್ವಾನಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಹಿಂದೆಯೇ ಶಿಕ್ಷಕರ ಮಾಹಿತಿಯನ್ನು ಅಪ್ ಲೋಡ್ ಮಾಡುವುದಕ್ಕೆ ಏ.18ರವರೆಗೆ ಅವಕಾಶ ನೀಡಿತ್ತು. ಇದನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಿದ್ದು, ಶಿಕ್ಷಕರ ತಾತ್ಕಾಲಿಕ ಕರಡು ಪಟ್ಟಿಯನ್ನು ಏ.20ರಂದು ಪ್ರಕಟಿಸಲಿದೆ. ಆಕ್ಷೇಪಣೆಗಳಿದ್ದಲ್ಲಿ ಶಿಕ್ಷಕರು ಏ.22ರೊಳಗೆ ಸಲ್ಲಿಸಬೇಕಿದೆ. ಏ.23ರಂದು ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಏ.24ರಂದು ವಲಯವಾರು ವರ್ಗಾವಣೆಗೆ ಅರ್ಹರಾದ ಶಿಕ್ಷಕರ ಅಂತಿಮ ಪಟ್ಟಿಯನ್ನು ಶಿಕ್ಷಣ ಇಲಾಖೆಯು ಪ್ರಕಟಿಸಲಿದೆ. ಶಾಲೆ ಆರಂಭವಾಗುವ ಮೊದಲು ಕೌನ್ಸೆಲಿಂಗ್ ಹೊರತಾಗಿ ಉಳಿಯುವ ಎಲ್ಲ ಕೆಲಸವನ್ನು ಮುಗಿಸಿ, ನೀತಿ ಸಂಹಿತೆ ಬಳಿಕ ಕೌನ್ಸೆಲಿಂಗ್ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶೇ.4ರಷ್ಟು (ಶೈಕ್ಷಣಿಕ ತಾಲೂಕಿನ ಒಳಗೆ) ವಲಯವಾರು, ಜಿಲ್ಲೆಯ ಒಳಗೆ ಶೇ.7ರಷ್ಟು ಕೋರಿಕೆ ವರ್ಗಾವಣೆ, ಶೇ.2ರಷ್ಟು ವಿಭಾಗವಾರು ವರ್ಗಾವಣೆ, ವಿಭಾಗದ ಹೊರಗೆ ಶೇ.2ರಷ್ಟು…
ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ. ಆತ ಆಕೆಯ ಹಿಂದೆ ಬಿದ್ದಿದ್ದ ಎಂದು ನೇಹಾಳ ತಾಯಿ ಗೀತಾ ಹಿರೇಮಠ ಹೇಳಿದ್ದಾರೆ. ಯಾರ ಕ್ಷಮೆ ಪಡೆದುಕೊಂಡು ಏನು ಮಾಡಲಿ. ನನ್ನ ಮಗಳು ವಾಪಸ್ಸು ಬರಲ್ಲವಲ್ಲ ಎಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ನನ್ನ ಮಗಳು ಬೋಲ್ಡ್ ಆಗಿದ್ದಳು. ಆದರೆ ನನ್ನ ಮಗಳು ಅಂಥವಳಲ್ಲ. ಒಂದೇ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದರು. ಮದುವೆ ಕುರಿತು ಮಾತನಾಡಿಲ್ಲ ಆತ. ಈಗಿನ ತಂತ್ರಜ್ಞಾನದಲ್ಲಿ ಫೋಟೋ ಹೇಗೆ ಬೇಕಾದರೂ ಎಡಿಟ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ನನ್ನ ಮಗಳಿಗೆ ಶಾಂತಿ ಸಿಗಬೇಕಾದರೆ ಆತ ಸಾಯಬೇಕು. ಆತನನ್ನು ಜೈಲಿನಲ್ಲಿಟ್ಟು ಏನು ಪ್ರಯೋಜನ? ಆತನನ್ನು ಜನರ ಕೈಗೆ ಕೊಡಿ. ಕಾಲೇಜಿಗೆ ಮೂರು ಗೇಟ್ ಇದೆ. ಯಾರು ಬರುತ್ತಾರೆ ಹೋಗುತ್ತಾರೆ? ಗೊತ್ತಿಲ್ಲ. ಈ ಘಟನೆ ನನ್ನ ಕಣ್ಣ ಮುಂದೆ ನಡೆಯಿತು. ಹತ್ತು ಹೆಜ್ಜೆ ದೂರ ಅಷ್ಟೇ ಇದ್ದೆ. ಕಲಿಯಲು ಕಳಿಸಿದರೆ ಹೆಣವಾಗಿ ಬರುತ್ತಾರೆ. ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲ ಎಂದು ನೇಹಾ ತಾಯಿ ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ…
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾಧಿಕಾರಿಗಳು ಎಲ್ಲೆಡೆ ತಪಾಸಣೆ ಹೆಚ್ಚಿಸಿದ್ದಾರೆ. ಈ ಮಧ್ಯೆ ಬೆಂಗಳೂರು ಚುನಾವಣಾಧಿಕಾರಿಗಳು ಬಾರ್ & ರೆಸ್ಟೋರೆಂಟ್ ಗಳಿಗೆ ನೋಟೀಸ್ ನೀಡಿ ಬಿಸಿ ಮುಟ್ಟಿಸಿದ್ದಾರೆ. ಅವಧಿ ಮೀರಿ ಬಾರ್ ಓಪನ್ ಮಾಡಿರುವ ಒಂದು ಸಾವಿರಕ್ಕೂ ಹೆಚ್ಚು ಬಾರ್ & ರೆಸ್ಟೋರೆಂಟ್‌ಗಳಿಗೆ ನೋಟಿಸ್ ನೀಡಿದ್ದಾರೆ. ದಾಖಲೆ ಇಲ್ಲದೇ ಮದ್ಯ ಮಾರಾಟ ಮಾಡ್ತಾ ಇದ್ದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಚುನಾವಣಾ ಹಿನ್ನೆಲೆ ಬಾರ್ & ರೆಸ್ಟೋರೆಂಟ್‌ಗಳಿಗೆ ಚುನಾವಣಾ ಆಯೋಗ ಕೆಲವೊಂದು ನಿಯಮ ಪಾಲನೆಗೆ ಸೂಚಿಸಿದೆ. ಅದನ್ನ ಜಿಲ್ಲಾ ಚುನಾವಣಾಧಿಕಾರಿಗಳು ಗಮನಿಸುತ್ತದ್ದಾರೆ ಎನ್ನಲಾಗಿದೆ. ಅದೇ ರೀತಿಯಲ್ಲಿ ಬೆಂಗಳೂರು ನಗರದಲ್ಲಿ ಬಾರ್ & ರೆಸ್ಟೋರೆಂಟ್‌ಗಳು, ಎಂಆರ್ ಪಿಗಳು ನಿಯಮ ಉಲ್ಲಂಘನೆ ಮಾಡುತ್ತಿವೆ. ಸಮಯ ಮುಗಿದಿದ್ದರೂ ಬಾರ್ ಓಪನ್ ಮಾಡಿ ವ್ಯಾಪಾರ ವ್ಯವಹಾರ ಮಾಡುತ್ತಿದ್ದಾರೆ. ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಹೀಗಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಒಂದು ಸಾವಿರಕ್ಕೆ ಹೆಚ್ಚು ಪ್ರಕರಣಗಳನ್ನ ದಾಖಲಿಸಿಕೊಂಡು ಬಾರ್ & ರೆಸ್ಟೋರೆಂಟ್‌ಗಳಿಗೆ ನೋಟಿಸ್ ನೀಡಲಾಗಿದೆಯಂತೆ. ಎಂಆರ್‌ಪಿ ಶಾಪ್‌ಗಳು ಕೂಡ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.…
ಹುಬ್ಬಳ್ಳಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಕುರಿತು ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಗಾರನಿಗೆ ತಕ್ಕ ಶಿಕ್ಷೆ ಆಗಬೇಕು ಆದರೆ, ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದಿದ್ದಾರೆ. ಪ್ರಕರಣ ಕುರಿತು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿರುವ ರಚಿತಾ ರಾಮ್, ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದಿದ್ದಾರೆ. ಜಾತಿ, ಧರ್ಮ ಯಾವುದೇ ಆಗಿರಲಿ. ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ (ನೇಹಾ) ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ ಎಂದು ನಟಿ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಕ್ಕೆ ನನ್ನ ಒಂದು ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಅಲ್ಲದೇ #wewantjustice ಎಂದು ಟ್ಯಾಗ್ ಹಾಕಿ ನೇಹಾಗೆ ರಚಿತಾ ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ.…
ಯಾವುದೇ ಸರ್ಕಾರಿ ಬಸ್ ಗಳಲ್ಲಿ ನಿಯಮದ ಪ್ರಕಾರ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವಂತಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ಈ ನಿಯಮವನ್ನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ. ಇನ್ನು ಬಿಎಂಟಿಸಿ ಬಸ್ ಗಳಲ್ಲಿ ಮಾರ್ಚ್ ತಿಂಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ 3,840 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ 17,900 ಟ್ರಿಪ್‌ಗಳನ್ನು ತಪಾಸಣೆ ಮಾಡಲಾಗಿದ್ದು, ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದ 3,840 ಮಂದಿ ಪತ್ತೆ ಸಿಕ್ಕಿಬಿದ್ದಿದ್ದರು. ಇನ್ನು ಇವರಿಂದ 7,65,090 ರೂಪಾಯಿ ದಂಡ ವಸೂಲಿ ಮಾಡಲಾಗಿದ್ದು, ಮತ್ತೊಂದೆಡೆ ಕರ್ತವ್ಯ ಲೋಪವೆಸಗಿದ ಹಿನ್ಬೆಲೆ ಬಿಎಂಟಿಸಿ ಸಂಸ್ಥೆಯು 1,101 ನಿರ್ವಾಹಕರ ವಿರುದ್ಧವೂ ಪ್ರಕರಣ ದಾಖಲಿಸಿದೆ ಎಂದು ತಿಳಿದುಬಂದಿದೆ. ಇನ್ನು ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣ ಮಾಡಿದ 530 ಪುರುಷ ಪ್ರಯಾಣಿಕರಿಗೆ 53,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ಹುಲಿ ದಾಳಿಯಿಂದ ಮರಿ ಆನೆ ಸಾವಿಗೀಡಾದ ಘಟನೆ ಬಂಡೀಪುರ ಅರಣ್ಯದಲ್ಲಿ ನಡೆದಿದೆ. ಇನ್ನು ತಾಯಿ ಆನೆಯು ಸಾವನ್ನಪ್ಪಿದ ಮರಿ ಆನೆಯ ಶವ ಬಿಟ್ಟು ಕದಲದೇ ಕಾದು ಕುಳಿತಿದ್ದು, ಈ ದೃಶ್ಯ ಮನಕಲಕುವಂತಿದೆ. ಈ ಘಟನೆ ಎಪ್ರಿಲ್ 20ರ ಮಧ್ಯಾಹ್ನದ ವೇಳೆಗೆ ನಡೆದಿದೆ. ಹೆತ್ತವರಿಗೆ ಹೆಗ್ಗಣವು ಮುದ್ದು ಎಂಬಂತೆ, ಪ್ರಾಣಿಗಳು ಕೂಡ ತಮ್ಮ ಮರಿಗಳ ರಕ್ಷಣೆ ಮಾಡುತ್ತವೆ. ಇನ್ನು ಇದೀಗ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿ ದಾಳಿಯಿಂದ ಮರಿ ಆನೆ ಸಾವನ್ನಪ್ಪಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ತಾಯಿ ಆನೆ ತನ್ನ ಮರಿಯ ಶವವನ್ನು ಬಿಟ್ಟು ಕದಲದೆ ಕಣ್ಣೀರಾಕುತ್ತಾ ಕುಳಿತಿರುವ ಮನಕಲಕುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಇದನ್ನು ಕಂಡ ಸಾವಿರಾರು ಪ್ರಯಾಣಿಕರು, ಅಲ್ಲಿ ನೆರೆದಿದ್ದ ಜನರು ಕೂಡ ಕಣ್ಣಿರಿಟ್ಟ ಘಟನೆ ನಡೆದಿದೆ. ಮತ್ತೊಂದೆಡೆ ರಸ್ತೆ ಪಕ್ಕದಲ್ಲೇ ಆನೆ ಮರಿ ಸಾವನ್ನಪ್ಪಿರುವ ಹಿನ್ನೆಲೆ ಬಂಡೀಪುರ ಅರಣ್ಯ ವ್ಯಾಪ್ತಿಯ ಮೈಸೂರು ಊಟಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು,…