Author: admin

ಮೋದಿಯವರಿಂದ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯವನ್ನು, ನಿಮ್ಮ ತೆರಿಗೆ ಹಣಕ್ಕೆ ಆಗುತ್ತಿರುವ ದ್ರೋಹವನ್ನು ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿ ಪ್ರಶ್ನಿಸಿದವರು ಡಿ.ಕೆ. ಸುರೇಶ್ ಮಾತ್ರ. ಇವರು ಗೆದ್ದರೆ ನಮ್ಮ-ನಿಮ್ಮೆಲ್ಲರ ಧ್ವನಿಯಾಗಿ ಹೋರಾಟ ಮಾಡ್ತಾರೆ. ಇವರಿಗೆ ಆಶೀರ್ವದಿಸಿ ಪಾರ್ಲಿಮೆಂಟಿಗೆ ಕಳುಹಿಸಿ ಎಂದು ಸಿ.ಎಂ. ಸಿದ್ದರಾಮಯ್ಯ ಅವರು ಕರೆ ನೀಡಿದರು. ಬೆಂಗಳೂರು ಗ್ರಾ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಕೋಣನಕುಂಟೆ ಕ್ರಾಸ್‌ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಲೆ ಏರಿಕೆ ತಡೆಯುವುದಾಗಿ ಭಾರತೀಯರನ್ನು ನಂಬಿಸಿ ಅಧಿಕಾರಕ್ಕೆ ಬಂದ ಮೋದಿಯವರೇ ವಿಪರೀತ ಬೆಲೆ ಏರಿಕೆ ಮಾಡಿದ್ದರಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು. ನಾವು ಗ್ಯಾರಂಟಿಗಳ ಮೂಲಕ ಸ್ಪಂದಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬೆಲೆ ಏರಿಕೆ ಭಾರತೀಯರ ಶತ್ರು. ನಾನು ಪ್ರಧಾನಿಯಾದರೆ ಬೆಲೆ ಏರಿಕೆ ತಡೆಯುವುದಾಗಿ ಇಡಿ ಭಾರತೀಯರನ್ನು ಮೋದಿ ನಂಬಿಸಿದ್ದರು. ಆದರೆ ಇದೇ ಮೋದಿ ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಸೇರಿ ಎಲ್ಲದರ ಬೆಲೆಯನ್ನೂ ಗಗನಕ್ಕೆ ಏರಿಸಿದರು ಎಂದರು. ರಾಜ್ಯದಲ್ಲಿ ನಾವು ನುಡಿದಂತೆ…

Read More

ಭಾರತದ ಭವಿಷ್ಯಕ್ಕಾಗಿ ಮತ ಕೇಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹರಿಸಿದ ಮತಾಂಧರನ್ನು ಹಿಡಿಯದೆ ಹಾಗೇ ಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ರಾಮನವಮಿ ಹಬ್ಬದ ದಿನ ರಾಮಭಕ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಕಲಾವಿದರಾದ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿಯ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ. ಉಡುಪಿಯ ಹಾಸ್ಟೆಲ್ ಒಂದರಲ್ಲಿ ಹೆಣ್ಮಕ್ಕಳ ವಿಡಿಯೋ ಮಾಡಿದ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಂದಿಲ್ಲ ಎಂದರು. ಸಿದ್ದರಾಮಯ್ಯರ ಸರಕಾರ ದಿವಾಳಿಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ರಾಜ್ಯದ ಯಾವುದಾದರೂ ಮೂಲೆಯಲ್ಲಿ ಒಂದು ಕಿ.ಮೀ. ರಸ್ತೆ ಕಾಮಗಾರಿ ನಡೆಯುತ್ತಿದ್ದರೆ ತೋರಿಸಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ನೀರಾವರಿ ಯೋಜನೆಗಳೂ ಸಂಪೂರ್ಣ ಸ್ಥಗಿತವಾಗಿವೆ. ಗುಂಡಿಬಿದ್ದ ರಸ್ತೆಗಳ ಗುಂಡಿ ಮುಚ್ಚಲೂ ಇವರಿಂದ ಆಗುತ್ತಿಲ್ಲ. ಜನಹಿತವನ್ನು ಸಂಪೂರ್ಣ ಮರೆತು ಒಂದು ರೀತಿ ತುಘಲಕ್ ದರ್ಬಾ‌ರ್ ನಡೆಸುತ್ತಿರುವ ಈ ಸರಕಾರಕ್ಕೆ ಜನರೇ ಇವತ್ತು ಛೀಮಾರಿ ಹಾಕುತ್ತಿದ್ದಾರೆ ಎಂದು ತಿಳಿಸಿದರು. 28ಕ್ಕೆ…

Read More

ಮಹಿಳೆಯನ್ನು ಮತಾಂತರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದ ಹಿಂದೆ ಲವ್ ಜಿಹಾದ್ ಪ್ರಯತ್ನದ ಆರೋಪ ಸಹ ಕೇಳಿಬಂದಿದೆ. ಮತಾಂತರಕ್ಕೆ ಯತ್ನಿಸಿದ ಪ್ರಮುಖ ಅರೋಪಿ ರಫೀಕ್ ಬೇಪಾರಿ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ. ಇದಲ್ಲದೆ ಇವರಿಗೆ ಸಾಥ್ ನೀಡಿದ ಆರೋಪದ ಮೇಲೆ ಇನ್ನೂ ಐದು ಜನರ ವಿರುದ್ಧ ದೂರು ದಾಖಲಾಗಿದೆ. ಸಂತ್ರಸ್ತ ಮಹಿಳೆಯ ಖಾಸಗಿ ಫೊಟೋಗಳನ್ನು ತೆಗೆದುಕೊಂಡ ಆರೋಪಿಯು ನಾನು ಹೇಳಿದ ಹಾಗೆ ಕೇಳದಿದ್ದರೆ ಮತ್ತು ಮತಾಂತರಗೊಳ್ಳದಿದ್ದರೆ ಈ ಪೊಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವದಾಗಿ ಹೇಳಿದ್ದಾನೆ. ಮನೆಯಲ್ಲಿ ದಿನನಿತ್ಯ ಐದು ಬಾರಿ ನಮಾಜ್ ಮಾಡಬೇಕು. ಹಣೆಗೆ ಕುಂಕುಮ ಹಚ್ಚಬಾರದು. ಬುರ್ಖಾ ಹಾಕಿಕೊಳ್ಳಬೇಕು ಎಂದು ಬೆದ* ರಿಕೆ ಹಾಕಿದ್ದಾನೆ ಎನ್ನಲಾಗಿದೆ.. ಅಷ್ಟೇ ಅಲ್ಲದೆ ಎಷ್ಟು ಸಲ ಹೇಳಿದರೂ ಕೇಳದೆ ನನ್ನ ತಾಳಿಯನ್ನೂ ಕಿತ್ತುಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮುನವಳ್ಳಿಯಲ್ಲಿ ವರ್ಷದ ಹಿಂದೆ ಸಂತ್ರಸ್ತ ಮಹಿಳೆಯ ಜೊತೆಗೆ ಸಂಪರ್ಕ ಬೆಳೆಸಿಕೊಂಡಿದ್ದ ಆರೋಪಿಯು ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡು ಹಲವಾರು ರೀತಿಯ ಆಮಿಷಗಳನ್ನು…

Read More

ತುಮಕೂರು: ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ  ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಬ್ಬಿ ಪೊಲೀಸ್  ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಡಿ.ಕೆ.ಸುರೇಶ್ ವಿರುದ್ಧ ವೈಯಕ್ತಕವಾಗಿ ನಿಂದನೆ ಮಾಡಿದ ಆರೋಪದಲ್ಲಿ,  ಡಿ.ಕೆ ಸುರೇಶ್ ಕೊತ್ವಾಲ್ ರಾಮಚಂದ್ರನ ಗರಡಿಯಿಂದ ಬಂದವರು ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಅವರು ದೇಶ, ರಾಜ್ಯ ಉಳಿಸುತ್ತಾರಾ..? ಹಣದ ದಾಹಕ್ಕೆ ಏನು ಬೇಕಾದರು ಮಾಡುತ್ತಾರೆಂದು ಡಿ.ಕೆ.ಸುರೇಶ್ ವಿರುದ್ಧ  ಕುಮಾರಸ್ವಾಮಿ ಟೀಕಿಸಿದ್ದರು. ಏಪ್ರಿಲ್ 13ರಂದು ಗುಬ್ಬಿಯಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಮತ ಯಾಚನೆ ವೇಳೆ ನಡೆದ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಸಂಬಂಧ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ‌ಗೊಂಡಿದ್ದ ಎಸ್.ಎಫ್.ಟಿ ಮಹೇಶ್ ದೂರು ನೀಡಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಬೆಂಗಳೂರಿನ ಘನ 42ನೇ ಅಡಿಷನಲ್ ಸಿಎಂಎಂ ನ್ಯಾಯಾಲಯ ಆದೇಶ ನೀಡಿತ್ತು. ಇದೇ 19–04–24ರಂದು ಎಫ್.ಐ.ಆರ್ ದಾಖಲು ಆಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ತುಮಕೂರು: ತಮಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಮಾಧುಸ್ವಾಮಿಯವರು ಈ ಹಿಂದೆ ಪ್ರತಿನಿಧಿಸುತ್ತಿದ್ದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಸ್ಥಳೀಯ ಕೆಲ ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ನ ಶಾಸಕ ಸುರೇಶ್ ಬಾಬು ಅವರೊಂದಿಗೆ ಭರ್ಜರಿ ಪ್ರಚಾರ ನಡೆಸಿದರು. ಆದರೆ ಈ ಬಹಿರಂಗ ಪ್ರಚಾರದಲ್ಲಿ ಇನ್ನೂ ಕೂಡ ಬಿಜೆಪಿ ಅಭ್ಯರ್ಥಿಯ ಪರ ಕೆಲಸ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಮಾಧುಸ್ವಾಮಿ ನೀಡಿದ್ದಾರೆ. ಎನ್‌ ಡಿಎ ಮೈತ್ರಿ ಕೂಟದ ಅಭ್ಯರ್ಥಿ ವಿ. ಸೋಮಣ್ಣನವರು ಇಂದು  ಹುಳಿಯಾರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಖ್ಯಪ್ರಾಣ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಹುಳಿಯಾರು ಪಟ್ಟಣದಲ್ಲಿನ ತಮ್ಮ ಚುನಾವಣಾ ಪ್ರಚಾರ ಪ್ರಾರಂಭಿಸಿದರು. ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು, ಬಿಜೆಪಿಯ ಎಂ.ಡಿ.ಲಕ್ಷ್ಮೀನಾರಾಯಣ್, ರಾಮಚಂದ್ರಯ್ಯ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರುಗಳು ಪಾಲ್ಗೊಂಡಿದ್ದರು. ಸ್ಥಳೀಯ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರೊಂದಿಗೆ ಶಾಸಕ ಸುರೇಶ್…

Read More

ಕೊರಟಗೆರೆ: ರಾಜ್ಯದಲ್ಲಿ ದಿನೇ ದಿನೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದರು. ಕೊರಟಗೆರೆಯ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,   ಜೈ ಶ್ರೀ ರಾಮ್ ಎಂದು ಕೂಗಿದರೆ  ಧಮ್ಕಿ ಹಾಕ್ತಾರೆ, ಮೋದಿ ಅವರ ಹೆಸರನ್ನು ಕೂಗಿದರೆ ಸಾಕು ಅವರ ಮೇಲೆ ಹಲ್ಲೆ ಮಾಡುತ್ತಾರೆ,   ಕಾಲೇಜ್ ಕ್ಯಾಂಪಸ್ ಒಳಗೆ ನುಗ್ಗಿ ಹಾಡ ಹಗಲೇ ಹೆಣ್ಣು ಮಗಳನ್ನು  ಕೊಲೆ ಮಾಡುತ್ತಾರೆ, ವಿಧಾನಸೌಧದ ಒಳಗೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗ್ತಾರೆ, ಬೆಂಗಳೂರಿನಲ್ಲಿ ಎಲ್ಲಂದರೆ ಅಲ್ಲಿ   ಬಾಂಬ್ ಹಾಕ್ತಾರೆ..? ರಾಜ್ಯದಲ್ಲಿ ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು. ನೇಹಾ ಹೆಣ್ಣು ಮಗಳ ಕೊಲೆಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೈಯಕ್ತಿಕ ಕಾರಣದಿಂದ ಕೊಲೆ ನಡೆದಿದೆ ಎಂದು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು,  ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡುವುದಕ್ಕೂ ಮುಂಚೆ…

Read More

ಕೊರಟಗೆರೆ: ತಾಲೂಕಿನ ಬೋಡ ಬಂಡೆನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಚುನಾವಣೆಯ ಪರ್ವ ದೇಶದ ಗರ್ವ ಎಂಬ ಧ್ವಜವನ್ನು ಹಾರಿಸಿ ಮತದಾನದ ಮಹತ್ವವನ್ನು ಸಾರಲಾಯಿತು. ಮತದಾರರ ನಡೆ ಮತಗಟ್ಟೆಯ ಕಡೆ ಮತದಾನದ ಮಹತ್ವದ ಬಗ್ಗೆ ವಿಶೇಷ ಅರಿವು ಕಾರ್ಯಕ್ರಮದ ಅಂಗವಾಗಿ  ಗ್ರಾಮದ ಅಶ್ವಥ್ ಕಟ್ಟೆಯ ಬಳಿ  ಅಧಿಕಾರಿಗಳು ಹಾಗೂ ಗ್ರಾಮದ ಪ್ರಜ್ಞಾವಂತ  ಮತದಾರರು,  ಮತದಾನದ ಪ್ರತಿಜ್ಞೆ ಮಾಡುವ ಮೂಲಕ ಮತದಾನದ ಅರಿವು ಮೂಡಿಸಿದರು. ಸಂವಿಧಾನವು ನಮಗಾಗಿ ಕೊಟ್ಟ ಬಳುವಳಿ ಈ ಮಹತ್ವದ  ಮತದಾನ, ಆದ್ದರಿಂದ ಪ್ರತಿಯೊಬ್ಬರೂ ಕೂಡ ಮತದಾನ ಮಾಡಬೇಕು ಮತದಾನ ನಮ್ಮ ಹಕ್ಕು ನಾವು ಅದನ್ನ ಚಲಾಯಿಸಲೇಬೇಕು.  ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು  ಅವಕಾಶವಿದೆ.  18 ವರ್ಷ ಮೇಲ್ಪಟ್ಟ ಎಲ್ಲಾ ಯುವಕ ಯುವತಿಯರು ಹಿರಿಯರು ಸೇರಿ ನೂರಕ್ಕೆ ನೂರರಷ್ಟು ಮತದಾನವನ್ನು ಮಾಡಲೇಬೇಕು.  ತಪ್ಪದೇ ನಾವೆಲ್ಲರೂ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು  ಅದು ನಮ್ಮೆಲ್ಲರ ಕರ್ತವ್ಯ…

Read More

ಸರಗೂರು: ತಾಲ್ಲೂಕಿನ ಎಂ.ಸಿ. ತಳಲು ಗ್ರಾ.ಪಂ. ವ್ಯಾಪ್ತಿಯ ಚನ್ನಗುಂಡಿ ನಮ್ಮ ಮತಗಟ್ಟೆಯಲ್ಲೆ ನಾವು ಮತ ಹಾಕ್ತೀವಿ ಬೇರೆ ಊರಿಗೆ ಹೋಗುವುದಿಲ್ಲ. ನಮ್ಮೂರಲ್ಲೇ ನಮಗೆ ಮತಗಟ್ಟೆ ಕೊಡಿ ಇಲ್ಲದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು  ಹಾಡಿಯಲ್ಲಿರುವ ಆದಿವಾಸಿ ಜನರು ಎಚ್ಚರಿಕೆ ಹಿನ್ನೆಲೆಯಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಅಧಿಕಾರಿಗಳು  ಸಾರ್ವಜನಿಕರ ಮನವೊಲಿಸಿದರು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಚಿಕ್ಕಕ್ಯಾತ ಮಾತನಾಡಿ, ನಮ್ಮ ಹಾಡಿಯಲ್ಲಿ ಮೂಲಸೌಕರ್ಯಗಳು ಇಲ್ಲದೆ ಪರದಾಡುವಂತಾದಾಗಿದೆ. ಎರಡು ಮೂರು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡಿದ್ದೇವೆ. ಕಂದಾಯ ಇಲಾಖೆ ಅಧಿಕಾರಿಗಳು ಮನೆಗಳನ್ನು ಮಾಡಿಸಿಕೊಡುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಇಲ್ಲಿಯವರೆಗೂ ಯಾವುದೇ ಮನೆಗಳು ಇತರೆ ಸೌಲಭ್ಯಗಳನ್ನು ನಮ್ಮ ಹಾಡಿಗೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ತಾತ ಮುತ್ತಾತನ ಕಾಲದಿಂದಲೂ ನಾವು ಚನ್ನಗುಂಡಿಹಾಡಿ ಗ್ರಾಮದಲ್ಲಿ ಮತವನ್ನು ಹಾಕಿ ಬರುತ್ತಿದ್ದೇವೆ.  ನಮ್ಮೂರಲ್ಲಿ ಇದ್ದ ಮತಗಟ್ಟೆಯನ್ನು ತೆಗೆದು ಹಾಕಿ ಪಕ್ಕದ ಅರಳಹಳ್ಳಿ ಗ್ರಾಮಕ್ಕೆ ವರ್ಗಾಯಿಸಿದ್ದಾರೆ.  ಅರಳಹಳ್ಳಿ ಗ್ರಾಮಕ್ಕೆ ಹೋಗಿ ಮತ ಹಾಕಬೇಕು ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ವಯಸ್ಸಾದ ವೃದ್ಧರಿದ್ದಾರೆ.…

Read More

ಸರಗೂರು: ತಾಲ್ಲೂಕಿನ ಪಟ್ಟಣದ ಗ್ರಂಥಾಲಯದ ಮುಂಭಾಗದಲ್ಲಿ ರಾತ್ರಿ ಸುರಿ‌ದ ಮಳೆಯಿಂದಾಗಿ ಗ್ರಂಥಾಲಯದ ಸುತ್ತ ನೀರು ಆವರಿಸಿದ್ದು, ಸಾರ್ವಜನಿಕರು ಗ್ರಂಥಾಲಯಕ್ಕೆ ಹೋಗಲು ಪರದಾಡಿದ ಘಟನೆ ನಡೆದಿದೆ. ಪಟ್ಟಣದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲದ ಕಾರಣ ಶಾಲೆಯ ಒಂದು ಕಟ್ಟಡವನ್ನು ಗ್ರಂಥಾಲಯವಾಗಿ ಬಳಸಿಕೊಳ್ಳಲಾಗುತ್ತಿದೆ. ಮಳೆ ಬಂದರೆ  ಸಾಕು ಕಟ್ಟಡದ ಮೇಲ್ಛಾವಣಿ ಸೋರಿಕೆಯಾಗುತ್ತಿದೆ. ಇದರಿಂದಾಗಿ ಗ್ರಂಥಾಲಯದ ಪುಸ್ತಕಗಳ ರಕ್ಷಣೆ ಕೂಡ ಕಷ್ಟಕರವಾಗಿದ್ದು, ಜೊತೆಗೆ ಸಾರ್ವಜನಿಕರಿಗೆ ಗ್ರಂಥಾಲಯದಲ್ಲಿ ಕುಳಿತು ಓದಲು ಕಷ್ಟಕರವಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯತ್  ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ, ಗ್ರಂಥಾಲಯಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಹಲವು ಮಾಡಿ ಸಂಸದರು ಹಾಗೂ ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯದ ವರ್ತನೆಯಿಂದಾಗಿ ಗ್ರಂಥಾಲಯ ದುಸ್ಥಿತಿಗೆ ತಲುಪಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಮಳೆ ಬಂದಾಗ ಚರಂಡಿ ನೀರು ಗ್ರಂಥಾಲಯದ ಮುಂಭಾಗದಲ್ಲಿ ಶೇಖರಣೆಯಾಗುತ್ತಿದೆ.  ಗ್ರಂಥಾಲಯದ ಸಮೀಪದಲ್ಲೇ ಕೋಳಿ ಅಂಗಡಿ ಕೂಡ ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಗ್ರಂಥಾಲಯದೊಳಗೆ ಕುಳಿತುಕೊಳ್ಳುವಂತಾಗಿದೆ. ವಾರ್ಡ್…

Read More

ತುಮಕೂರು:  ಬೆಳಗ್ಗೆ ಎಳನೀರು ಮಾರಾಟ, ರಾತ್ರಿ ದ್ವಿಚಕ್ರವಾಹನಗಳ ಕಳ್ಳತನದ ಕಳ್ಳಾಟ ನಡೆಸಿರೋ ಘಟನೆ ತುಮಕೂರಲ್ಲಿ ನಡೆದಿದೆ. ತುಮಕೂರಿನಲ್ಲಿ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ,  4.6 ಲಕ್ಷ ರೂ ಮೌಲ್ಯದ ದ್ವಿಚಕ್ರವಾಹನಗಳನ್ನು ಪೊಲೀಸ್ ರು ವಶಕ್ಕೆ ಪಡಿಸಿಕೊಂಡಿದ್ದಾರೆ. ತುಮಕೂರು ತಾಲೂಕು ನಾಗವಲ್ಲಿಯ ಗಂಗರಾಜು  ಎಂಬವರ  ಹೋಂಡಾ ಶೈನ್ ಬೈಕ್ ಕದ್ದಿದ್ದ ಬೈಕ್ ಕಳ್ಳರು ಸಿಕ್ಕಿ ಬಿದ್ದಿದ್ದು, ಎನ್ ಆರ್ ಕಾಲೋನಿಯ ಸುದೀಪ್ (24 ), ರಾಮಮೂರ್ತಿ ಹಾಗೂ ಕಂಬತ್ತನಳ್ಳಿಯ ರಂಗನಾಥ್  ಎಂಬವ ಮೂವರನ್ನು ಹೆಬ್ಬೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ತುಮಕೂರು ಜಿಲ್ಲೆಯ ಹೆಬ್ಬೂರು ಪೊಲೀಸ್ ಠಾಣೆಯ 1, ಕ್ಯಾತಸಂದ್ರ ಪೊಲೀಸ್ ಠಾಣೆಯ 1, ಜಯನಗರ ಪೊಲೀಸ್ ಠಾಣೆಯ 1, ತಿಲಕ್ ಪಾರ್ಕ್ ಪೊಲೀಸ್ ಠಾಣೆಯ 1. ಹೊಸ ಬಡಾವಣೆ ಪೊಲೀಸ್ ಠಾಣೆಯ 1 ಹಾಗೂ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಸುದೀಪ್ ಮತ್ತು ರಂಗನಾಥ ವಿರುದ್ಧ ತುಮಕೂರು ನಗರ, ಗ್ರಾಮಾಂತರ …

Read More