Subscribe to Updates
Get the latest creative news from FooBar about art, design and business.
- ದಳವಾಯಿಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ, BPS ನಿಂದ ಟ್ಯಾಂಕರ್ ನೀರು ಪೂರೈಕೆ
- ಪಾವಗಡ: ದೊಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ದಾಖಲಾತಿ ಆರಂಭ
- ರಾಜ್ಯಸಭೆ ಚುನಾವಣೆಗೂ ಸಚಿವ ಸಂಪುಟ ಪುನರಾಚನೆಗೂ ಯಾವುದೇ ಸಂಬಂಧವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಸಿರಾದಲ್ಲಿ ಮೇ 26 ರಂದು ಜೆಡಿಎಸ್ ಪಕ್ಷದ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ
- ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಈ ಸುದ್ದಿ ಓದಿ: 1.98 ಲಕ್ಷ ರೂಪಾಯಿ ಕಳೆದುಕೊಂಡ ತುಮಕೂರಿನ ವ್ಯಕ್ತಿ!
- ಚಿಲ್ಲರೆಗಳಿಗೆ ನಾನು ಹೆದರುವ ಮಗನೇ ಅಲ್ಲ ಕೀಳುಮಟ್ಟದ ರಾಜಕಾರಣ ನನಗೆ ಗೊತ್ತಿಲ್ಲ: ಶಾಸಕ ಎಸ್. ಆರ್.ಶ್ರೀನಿವಾಸ್ ತಿರುಗೇಟು
- ತುಮಕೂರು ಜಿಲ್ಲೆಯಲ್ಲಿ 0.3 ಮಿ.ಮೀ. ಮಳೆ
- ಕೆಎಸ್ ಆರ್ ಟಿಸಿ ಬಸ್ ದರ ಏರಿಕೆ ಖಚಿತ: ಸಾರಿಗೆ ಸಂಸ್ಥೆ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್
Author: admin
ರಾಷ್ಟ್ರಪತಿ ದ್ರೌಪದಿ ಮುರ್ಮು ನೆನ್ನೆ ಹಿರಿಯ ರಾಜಕಾರಣಿ ಎಲ್.ಕೆ. ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ ಪ್ರಶಸ್ತಿಯನ್ನು ನಿವಾಸದಲ್ಲೇ ಪ್ರದಾನ ಮಾಡಿದರು. ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ. ನರಸಿಂಹ ರಾವ್, ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೂ ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು. ಅನಾರೋಗ್ಯದ ಕಾರಣ ನಿನ್ನೆ ನಡೆದ ಸಮಾರಂಭದಲ್ಲಿ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಲು ಅಡ್ವಾಣಿ ಆಗಮಿಸಿರಲಿಲ್ಲ ಎಂದು ವರದಿಯಾಗಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಪಸ್ಥಿತರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಆಸ್ತಿ ವಿಚಾರದಲ್ಲಿ ನ್ಯಾಯ ಸಿಗಲಿಲ್ಲ ಎಂದು ಸಿಟ್ಟಾದ ಮಹಿಳೆಯೊಬ್ಬರು ಪೊಲೀಸ್ ಮೇಲೆ ಹಲ್ಲೆ ನಡೆಸಿರುವ ಆರೋಪವೊಂದು ಬೆಳಕಿಗೆ ಬಂದಿದೆ. ಮಧ್ಯಾಹ್ನ ಬೆಂಗಳೂರಿನ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಅಶ್ವಿನಿ ಎಂಬಾಕೆ ಎಎಸ್ಐ ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಹಲವು ದಿನಗಳಿಂದ ಗಂಗಮ್ಮನ ಗುಡಿ ಪೊಲೀಸ್ ಠಾಣೆಗೆ ಅಶ್ವಿನಿ ಬಂದು ಹೋಗುತ್ತಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಅಶ್ವಿನಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ತನ್ನ ಸಮಸ್ಯೆಗೆ ನ್ಯಾಯ ಸಿಗುತ್ತಿಲ್ಲವೆಂಬ ಸಿಟ್ಟಿಗೆ ಹಲ್ಲೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ. ಮಾನಸಿಕ ಅಸ್ವಸ್ಥತೆಯಾಗಿರುವ ಅಶ್ವಿನಿ ಕಳೆದ 15 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಠಾಣೆಗೆ ಬಂದ ಅಶ್ವಿನಿ ಎಎಸ್‌ಐ ನಾಗರಾಜು ಜತೆ ಮಾತುಕತೆ ನಡೆಸಿದ್ದಾಳೆ. ಈ ವೇಳೆ ಏಕಾಏಕಿ ಸಿಟ್ಟಾಗಿ ಕೈಗೆ ಸಿಕ್ಕ ವಸ್ತುವಿನಿಂದ ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾಳೆ. ಸದ್ಯ ಹಲ್ಲೆಗೊಳಗಾದ ಎಎಸ್ಐ ನಾಗರಾಜುಗೆ ಸ್ಥಳೀಯ ಆಸ್ಪತ್ರೆಗೆ ದಾಖಲು…
ಹುಟ್ಟುಹಬ್ಬ ಆಚರಣೆಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಕೊನೆಯುಸಿರೆಳೆದ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ನಡೆದಿದೆ. ಕಳೆದ ವಾರ ಪಂಜಾಬ್ ನಲ್ಲಿ 10 ವರ್ಷದ ಬಾಲಕಿ ಮಾನ್ವಿ ಹುಟ್ಟುಹಬ್ಬದಂದು ಕೇಕ್ ಸೇವಿಸಿ ಕೊನೆಯುಸಿರೆಳೆದಿದ್ದಳು, ಈ ಘಟನೆ ತಡವಾಗಿ ದೃಢಪಟ್ಟಿದೆ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಕೇಕ್ ಸೇವಿಸಿ ಆಕೆ ಉಸಿರು ಚೆಲ್ಲಿದ್ದಾಳೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ. ಕೇಕ್ ತಯಾರಿಸಿದ ಬೇಕರಿ ಮಾಲೀಕನ ಮೇಲೆ ಎಫ್‌ಐಆರ್ ದಾಖಲಾಗಿದೆ. ದೇಹದ ಪರೀಕ್ಷೆಯನ್ನು ಮಾಡಲಾಗಿದೆ. ಚಾಕಲೇಟ್ ಕೇಕ್‌ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾನ್ವಿಯ ಹುಟ್ಟುಹಬ್ಬದ ಆಚರಣೆಗೆ ಆನ್ ಲೈನ್ ನಲ್ಲಿ ಕೇಕ್ ಆರ್ಡರ್ ಮಾಡಲಾಗಿತ್ತು. ಮಾರ್ಚ್ 24 ರಂದು ರಾತ್ರಿ 7 ಗಂಟೆಯ ವೇಳೆ ಮಾನ್ವಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಳು. ಅಂದು ರಾತ್ರಿ 10 ಗಂಟೆಯ ವೇಳೆ ಮಾನ್ವಿಯ ಇಡೀ ಕುಟುಂಬವೇ ಅಸ್ವಸ್ಥಗೊಂಡಿತು. ಇಬ್ಬರು…
ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದ ನೇತಾರರಾಗಿದ್ದು, ಈ ವಿಚಾರವನ್ನು ಬಿಜೆಪಿ ನಾಯಕರು ಬಹಿರಂಗವಾಗಿ ಹೇಳುವ ಕಾಲ ಇದಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ, ಜಾತಿ ವಿಚಾರವನ್ನು ಬಿಜೆಪಿಯವರಾದ ನಾವೇ ಮುಚ್ಚಿಡುತ್ತಿದ್ದೇವೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಾವು ಸತ್ಯ ಸಂಗತಿಯನ್ನು ಧೈರ್ಯವಾಗಿ ಹೇಳಬೇಕು. ಆದರೆ ಸಿದ್ದರಾಮಯ್ಯ ಅವರಂತಹವರು ನಾವೇ ಹಿಂದುಳಿದ ವರ್ಗದ ಚಾಂಪಿಯನ್ ಎಂದು ಹೇಳುತ್ತಿದ್ದಾರೆ. ಆದರೆ ನಾವು ಹೇಳುತ್ತಿಲ್ಲ ಎಂದರು. ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದಿಂದ ಜೆಪಿ ನಗರದ ಆರ್.ವಿ.ಡೆಂಟಲ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಬೃಹತ್ ಸಾಮಾಜಿಕ ಸಮ್ಮೇಳನ ನಡೆಯಿತು. ವಿಪಕ್ಷ ನಾಯಕ ಆರ್.ಅಶೋಕ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಶಾಸಕರಾದ ಸಿ. ಕೆ. ರಾಮಮೂರ್ತಿ, ರವಿ ಸುಬ್ರಮಣ್ಯ, ಗೋಪಿನಾಥ್ ರೆಡ್ಡಿ, ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಹಿಂದುಳಿದ ಸಮುದಾಯದ…
ಮದ್ಯ ನೀತಿ ಭ್ರಷ್ಟಾಚಾರ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಫೋನ್ ಮಾಹಿತಿಗಾಗಿ ಜಾರಿ ನಿರ್ದೇಶನಾಲಯವು ಆಪಲ್ ಕಂಪನಿಯನ್ನು ಸಂಪರ್ಕಿಸಿದೆ. ಅರವಿಂದ್ ಕೇಜ್ರಿವಾಲ್ ಫೋನ್ ನ ಪಾಸ್ ವರ್ಡ್ ನೀಡಲು ನಿರಾಕರಿಸಿದ ನಂತರ, ಇಡಿ ಫೋನ್ ವಿವರಗಳಿಗಾಗಿ ಆಪಲ್ ಅನ್ನು ಸಂಪರ್ಕಿಸಿತು. ದೆಹಲಿ ಮುಖ್ಯಮಂತ್ರಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪವನ್ನು ಇಡಿ ಪುನರುಚ್ಚರಿಸಿದೆ. ಆದರೆ ಇಡಿ ಬಿಜೆಪಿಗೆ ಮಾಹಿತಿ ಸೋರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷವೂ ಆರೋಪಿಸಿದೆ. ಮದ್ಯ ನೀತಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕೇಜ್ರಿವಾಲ್ ವಿರುದ್ಧ ಯಾವುದೇ ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಇನ್ನೂ ಕಂಡುಕೊಂಡಿಲ್ಲ ಎಂದು ವರದಿಯಾಗಿದೆ. ಬಂಧನದ ನಂತರ ಕೇಜ್ರಿವಾಲ್ ತಮ್ಮ ಐಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದಾರೆ ಮತ್ತು ಅದನ್ನು ಆನ್ ಮಾಡಿಲ್ಲ ಅಥವಾ ಪಾಸ್‌ವರ್ಡ್ ಹಂಚಿಕೊಂಡಿಲ್ಲ ಎಂದು ಇಡಿ ಆರೋಪಿಸಿದೆ. ಬಂಧನದ ವೇಳೆ ಇಡಿ ಕೇಜ್ರಿವಾಲ್ ಅವರ ನಿವಾಸದಿಂದ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು 70,000 ರೂ. ವಶಪಡಿಸಿಕೊಂಡರು.…
ಶ್ರೀ ಶಿವಕುಮಾರ ಸ್ವಾಮೀಜಿ ಗುರುವಂದನ ಮಹೋತ್ಸವ: ವೇದಿಕೆಗೆ ರಾಜಕಾರಣಿಗಳಿಗೆ ಪ್ರವೇಶವಿಲ್ಲ: ಶ್ರೀ ಸಿದ್ದಲಿಂಗ ಸ್ವಾಮೀಜಿ
ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವವು ಏಪ್ರಿಲ್ ಒಂದರಂದು ಸಿದ್ದಗಂಗಾ ಮಠದ ಆವರಣದಲ್ಲಿ ನಡೆಯಲಿದ್ದು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವ ಹಿನ್ನೆಲೆಯಲ್ಲಿ ಯಾವುದೇ ರಾಜಕಾರಣಿಗಳಿಗೆ ವೇದಿಕೆ ಮೇಲೆ ಮಾತನಾಡಲು ಅವಕಾಶವಿರುವುದಿಲ್ಲ, ಬದಲಾಗಿ ಅವರು ಗದ್ದುಗೆ ದರ್ಶನ ಮಾಡಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಂತೆ ಭಾಗವಹಿಸಬಹುದು ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಇಂದು ಸಿದ್ದಗಂಗಾ ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಾರ್ಯಕ್ರಮವನ್ನು ಪತಂಜಲಿ ಯೋಗ ಪೀಠದ ರಾಮದೇವ್ ಜಿ ಉದ್ಘಾಟಿಸಲಿದ್ದಾರೆ. ಮೈಸೂರಿನ ಶ್ರೀ ಸುತ್ತೂರು ವೀರ ಸಿಂಹಾಸನ ಸಂಸ್ಥಾನ ಮಠದ ಅಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ವಹಿಸುವರು ಕಾರ್ಯಕ್ರಮದಲ್ಲಿ ಮುಂಡರಗಿ ಅನ್ನದಾನೇಶ್ವರ ಮಹಾ ಸಂಸ್ಥಾನದ ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಜಿ ಧಾರವಾಡದ ಮುರುಗಮಠ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮೀಜಿ. ಗದಗದ ಶ್ರೀ ವೀರೇಶ್ವರ ಪುಣ್ಯಶ್ರಮದ ಅಧ್ಯಕ್ಷರಾದ ಕಲ್ಲಯ್ಯ ಅಜ್ಜ ನವರು, ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿರುವ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ ಎಂದು…
ಪಾವಗಡ: ನನ್ನ ಮೇಲೆ ಸುಖಾ ಸುಮ್ಮನೆ ಮಾಡಿರುವ ಸುಳ್ಳು ಆರೋಪ ಮಾಡಲಾಗಿದೆ ಎಂದು ಪಾವಗಡ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಅಸಹನೆ ಹೊರಹಾಕಿದರು. ಪಾವಗಡ ಪಟ್ಟಣದಲ್ಲಿ ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚಿಗೆ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಶಂಕರಪ್ಪ ಅವರು ನನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡಿದ್ದಾರೆ. ವಸೂಲಿ ದಂಧೆಗಿಳಿದಿದ್ದೀನಿ ಇಲಾಖಾಧಿಕಾರಿಗಳಿಗೆ ಹಣ ಬೇಡಿಕೆಯಿಟ್ಟು ಬದುಕುತ್ತಿದ್ದೀನಿ ಎಂಬ ಹೇಳಿಕೆ ನೀಡಿದ್ದಾರೆ. ಇದು ತುಂಬಾ ಬೇಸರ ತಂದಿದೆ ಎಂದರು. ಇಂತಹ ಸತ್ಯವಲ್ಲದ ವಿಚಾರಗಳನ್ನು ಪ್ರಚಾರ ಮಾಡಿ ನನ್ನ ತೇಜೋವಧೆ ಮಾಡುತ್ತಿರುವುದು ಕೆಟ್ಟ ಸಂಸ್ಕೃತಿ. ಇದು ಇಂದಿಗೆ ಕೊನೆಯಾಗಬೇಕು ಇಲ್ಲವಾದರೆ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಅವರು ಎಚ್ಚರಿಸಿದರು. ಸಾಮಾಜಿಕವಾಗಿ ರೈತ ಜನಪರವಾಗಿ ಹೋರಾಟ ಮಾಡುತ್ತ ಬಂದವನು ನಾನು. ಅಂತಹ ಮಾಹಿತಿಯಿದ್ದರೆ ನೇರವಾಗಿ ಬಹಿರಂಗಪಡಿಸಲಿ, ಮೊದಲು ರೈತ ಸಂಘದ ನೀತಿ ನಿಯಮ ಸಿದ್ದಾಂತ ಅರಿತು ನಡಿ ಎಂದು ಗುಡುಗಿದರು. ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಿದ್ದರು. ವರದಿ: ನಂದೀಶ್…
ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೇರ್ ಸ್ಟ್ರೈಟ್ನಿಂಗ್ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದ ಮಹಿಳೆಯೊಬ್ಬರು ಕಿಡ್ನಿ ಹಾನಿಗೊಳಗಾಗಿದ್ದಾರೆ. ವರದಿಯ ಪ್ರಕಾರ, ಮಹಿಳೆಯು ಸುಮಾರು ಮೂರು ವರ್ಷಗಳ ಅವಧಿಯಲ್ಲಿ ತನ್ನ ಕೂದಲನ್ನು ಸ್ಟ್ರೈಟ್ನಿಂಗ್ ಗಾಗಿ ಆಗಾಗ್ಗೆ ಸಲೂನ್ ಗಳಿಗೆ ಭೇಟಿ ನೀಡುತ್ತಿದ್ದಳು, ಆ ಸಮಯದಲ್ಲಿ ಆಕೆಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು. ಅನಂತರ ಮಹಿಳೆಗೆ ಕಿಡ್ನಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಕೂದಲು ನೇರಗೊಳಿಸಲು ಬಳಸುವ ಕೆಲವು ಉತ್ಪನ್ನಗಳು ಆರ್ಗಾನ್ ಹಾನಿಯಂತಹ ಗಂಭೀರ ಸಮಸ್ಯೆಗಳ ಅಪಾಯವನ್ನು ಉಂಟುಮಾಡಬಹುದು ಎಂದು ಆರೋಗ್ಯ ತಜ್ಞರು ವೈದ್ಯಕೀಯ ವರದಿಯಲ್ಲಿ ತಿಳಿಸಿದ್ದಾರೆ. ಮಹಿಳೆಗೆ 26 ವರ್ಷ ವಯಸ್ಸಾಗಿದ್ದು, ಕೂದಲ ಚಿಕಿತ್ಸೆಗಾಗಿ ಆಕೆ ಜೂನ್ 2020 ಮತ್ತು ಜುಲೈ 2022 ರ ನಡುವೆ ಹಲವಾರು ಬಾರಿ ಸಲೂನ್ ಗೆ ಭೇಟಿ ನೀಡುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ. ಮಹಿಳೆಗೆ ಮೊದಲಿನ ಆರೋಗ್ಯ ಸಮಸ್ಯೆಗಳಿರಲಿಲ್ಲ, ಆದರೆ ಪ್ರತಿ ಬಾರಿ ಚಿಕಿತ್ಸೆ ಪಡೆದಾಗಲೂ ಆಕೆಗೆ ವಾಂತಿ, ಭೇದಿ, ಜ್ವರ…
ತುಮಕೂರು: ಒಕ್ಕಲಿಗ ಸಮುದಾಯ ಈ ಚುನಾವಣೆಯಲ್ಲಿ ನನ್ನೊಂದಿಗೆ ಇರಲಿದ್ದು, ನನ್ನ ಕೈ ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಿಶ್ವಾಸ ವ್ಯಕ್ತಡಿಸಿದ್ದಾರೆ. ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಪ್ರಮುಖನ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದ ಮೇಲೆಯೂ ಬಿಜೆಪಿಯೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ. ಕಾರ್ಯಕರ್ತರು ಸೋಮಣ್ಣ ಗೆಲುವಿಗೆ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು. ಕುಮಾರಸ್ವಾಮಿ ಅವರು ಮಗನನ್ನು ನಿಲ್ಲಿಸಿ ಏನೆಲ್ಲ ಆಟ ಆಡಿದರೂ ಎನ್ನುವುದು ನನಗೆ ಗೊತ್ತಿದೆ. ನಾನೇನು ಸೀಟು ಕೇಳಿದ್ದೇನೆಯೇ? ಮೈಸೂರಿನಲ್ಲಿ ಸೀಟು ಬೇಕು ಅಂತ ಸಿದ್ದರಾಮಯ್ಯ ಮೂಲಕ ನನ್ನನ್ನು ನಿಲ್ಲುವಂತೆ ಮಾಡಿ ಮುದ್ದಹನುಮೇಗೌಡರನ್ನು ಬಲಿ ಹಾಕಿದರು ಎಂದು ಸ್ಮರಿಸಿದರು. ಇದೊಂದು ಚುನಾವಣೆಯಲ್ಲಿ ಸೋಮಣ್ಣ ಅವರನ್ನು ಗೆಲ್ಲಿಸಬೇಕು. ಸಿದ್ದರಾಮಯ್ಯ ಮಾಡಿದ ಹಲವು ತಪ್ಪುಗಳಿಂದಾಗಿ ಪಕ್ಷವು ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ಹೋಗಲಿದೆ. ಕಾಲ ಸಮೀಪಿಸುತ್ತಿದೆ 7ನೇ ತಾರೀಖಿನವರೆಗೂ ನಾನು ಎಲ್ಲಾ ಕ್ಷೇತ್ರಗಳಿಗೂ ಹೋಗಿ ಪ್ರಚಾರ ಮಾಡಲಿದ್ದೇನೆ ಎಂದು ಹೇಳಿದರು. ವಿ.ಸೋಮಣ್ಣ ಮಾತನಾಡಿ, ನಾನು ಚುನಾವಣೆಗೆ ಸ್ಪರ್ಧಿಸಲು ದೇವೇಗೌಡರೇ ಮೂಲಕ…
ಪಾವಗಡ: ಪೆಟ್ಟಿಗೆ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಿಡಗಲ್ ಹೋಬಳಿ ಮಂಗಳವಾಡದ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ. ನಾಗರಾಜು ಎಂಬುವರಿಗೆ ಸೇರಿದ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಈ ವೇಳೆ ಪಕ್ಕದಲ್ಲಿದ್ದ ಐದಾರು ಅಂಗಡಿಗಳಿಗೂ ಬೆಂಕಿ ಹರಡಿದ್ದು, ಅಂಗಡಿಗಳು ಸುಟ್ಟು ಭಸ್ಮವಾಗಿದೆ. ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳಕ್ಕೆ ಪಾವಗಡ ತಾಲೂಕಿನ ಅರಸಿಕೆರೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಅರಸೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಂಕಿನ ನಂದಿಸುವ ಕಾರ್ಯಾಚರಣೆ ವೇಳೆ ಠಾಣಾಧಿಕಾರಿ ಎಸ್.ಆರ್.ಪಾಟೀಲ್, ಪ್ರಮುಖ ಅಗ್ನಿಶಾಮಕರಾದ ರಾಜಣ್ಣ, ಶಶಿಧರ್, ಸಿಬ್ಬಂದಿ ವೀರಣ್ಣ, ಲತೀಷ್, ವಿನೋದ್, ರವಿಚಂದ್ರನ್, ಸೇರಿದಂತೆ ಸ್ಥಳೀಯ ನಾಗರಿಕರು ಇದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…