Subscribe to Updates
Get the latest creative news from FooBar about art, design and business.
- ದಳವಾಯಿಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ, BPS ನಿಂದ ಟ್ಯಾಂಕರ್ ನೀರು ಪೂರೈಕೆ
- ಪಾವಗಡ: ದೊಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ದಾಖಲಾತಿ ಆರಂಭ
- ರಾಜ್ಯಸಭೆ ಚುನಾವಣೆಗೂ ಸಚಿವ ಸಂಪುಟ ಪುನರಾಚನೆಗೂ ಯಾವುದೇ ಸಂಬಂಧವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಸಿರಾದಲ್ಲಿ ಮೇ 26 ರಂದು ಜೆಡಿಎಸ್ ಪಕ್ಷದ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ
- ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಈ ಸುದ್ದಿ ಓದಿ: 1.98 ಲಕ್ಷ ರೂಪಾಯಿ ಕಳೆದುಕೊಂಡ ತುಮಕೂರಿನ ವ್ಯಕ್ತಿ!
- ಚಿಲ್ಲರೆಗಳಿಗೆ ನಾನು ಹೆದರುವ ಮಗನೇ ಅಲ್ಲ ಕೀಳುಮಟ್ಟದ ರಾಜಕಾರಣ ನನಗೆ ಗೊತ್ತಿಲ್ಲ: ಶಾಸಕ ಎಸ್. ಆರ್.ಶ್ರೀನಿವಾಸ್ ತಿರುಗೇಟು
- ತುಮಕೂರು ಜಿಲ್ಲೆಯಲ್ಲಿ 0.3 ಮಿ.ಮೀ. ಮಳೆ
- ಕೆಎಸ್ ಆರ್ ಟಿಸಿ ಬಸ್ ದರ ಏರಿಕೆ ಖಚಿತ: ಸಾರಿಗೆ ಸಂಸ್ಥೆ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್
Author: admin
ಪಾವಗಡ: ಸೋಮವಾರ ಪಾವಗಡ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಕರ್ನಾಟಕ ರತ್ನ, ನಡೆದಾಡುವ ದೇವರು, ಅಕ್ಷರ ದಾಸೋಹ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯರ 117ನೇ ಜನ್ಮೋತ್ಸವವನ್ನು, ಪಾವಗಡ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರ ಒಕ್ಕೂಟ ಮತ್ತು ಡಿ ಗ್ರೂಪ್ ನೌಕರರ ಸಹಯೋಗದಲ್ಲಿ ಆಚರಿಸಲಾಗಿದೆ. ಇದರ ಪ್ರಯುಕ್ತ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಅನ್ನ ದಾಸೋಹವನ್ನು ಏರ್ಪಡಿಸಲಾಗಿತ್ತು. ಆಸ್ಪತ್ರೆಯ ಆಡಳಿತ ವೈದ್ಯ ಅಧಿಕಾರಿ ಎ ಎಸ್ ಎಲ್ ಬಾಬು ಮಾತನಾಡಿ, “ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ತಮ್ಮದೇ ಆದ ರೀತಿಯಲ್ಲಿ ಚಾಪು ಮೂಡಿಸಿ, ಅನೇಕ ಸಾವಿರ ಮಕ್ಕಳಿಗೆ ಅನ್ನ ಮತ್ತು ಅಕ್ಷರವನ್ನು ನೀಡಿ ಸಾಕಿದ್ದಾರೆ. ಅಂತಹವರ ಜಯಂತಿ ಮಾಡುತ್ತಿರುವುದು ಪುಣ್ಯ” ಎಂದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ, ತಿರುಪತಯ್ಯ, ಅಂಬರೀಷ್ ಚಾಲಕರ ಒಕ್ಕೂಟದ ವೆಂಕಟೇಶ್, ಪೊನ್ನ ಸಮುದ್ರ ಈರಣ್ಣ, ಸಾಗರ್, ನಂದೀಶ್, ಭಾರತಿ, ಅಜಿತ್, ಆಸ್ಪತ್ರೆಯ ಕೃಷ್ಣಪ್ಪ, ಆರೋಗ್ಯ ನಿರೀಕ್ಷಕರಾದ ಚಂದ್ರಶೇಖರ್, ಸುರೇಶ್, ಕ್ಯಾಂಟೀನ್ ರವಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.…
ಬೇಸಿಗೆ ಕಾಲದಲ್ಲಿ ಈ ಆಹಾರಗಳನ್ನು ತಿನ್ನಬೇಡಿ: ಬೇಸಿಗೆಯಲ್ಲಿ ಕರಿದ ಪದಾರ್ಥಗಳು, ಪಿಜ್ಜಾ, ಬರ್ಗರ್ ಗಳನ್ನು ಜೀರ್ಣಿಸಿಕೊಳ್ಳಲು ದೇಹವು ಶ್ರಮಪಡಬೇಕಾಗುತ್ತದೆ. ಬೇಸಿಗೆಯಲ್ಲಿ ಕರಿದ ಆಹಾರವನ್ನು ತ್ಯಜಿಸುವುದು ಉತ್ತಮ. ಈ ಆಹಾರಗಳು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ಸಂಸ್ಕರಿಸಿದ ಆಹಾರದಲ್ಲಿ ಬಳಸುವ ಕೃತಕ ಸಿಹಿ ಮತ್ತು ರುಚಿಗಳು ದೇಹಕ್ಕೆ ಹಾನಿಕಾರಕವಾಗಿದೆ. ಶಾಖದ ಸಮಯದಲ್ಲಿ, ಮಾಂಸಾಹಾರವನ್ನು ಜೀರ್ಣಿಸಿಕೊಳ್ಳಲು ದೇಹವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಇದರಿಂದಾಗಿ ದೇಹವು ಅಧಿಕ ಬಿಸಿಯಾಗುವುದರಿಂದ ನಿರ್ಜಲೀಕರಣಗೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ಪಪ್ಪಾಯ ಹಣ್ಣು ತಿಂದ್ರೆ ಏನೆಲ್ಲಾ ಲಾಭಗಳಿವೆ ಗೊತ್ತೇ?: ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳು ಇವೆ. ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ತಿನ್ನುವಾಗ ಇದರ ಪ್ರಯೋಜನಗಳು ಹೆಚ್ಚು. ಹೌದು, ಹೊಳೆಯುವ ಚರ್ಮವನ್ನು ನೀಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಕಣ್ಣಿನ ಆರೋಗ್ಯಕ್ಕೆ ಉತ್ತಮ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆ ನಿವಾರ. ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ಹುಟ್ಟು ಎಂಬುವುದು ಇರುವುದಾದರೆ ಸಾವು ಕೂಡಾ ಇದೆ. ಯಾವುದೇ ವ್ಯಕ್ತಿಯ ಸಾವಿನ ಬಗ್ಗೆ ಹೇಳಲು ಸಾಧ್ಯವಿಲ್ಲ. ಬದಲಾಗುತ್ತಿರುವ ತಂತ್ರಜ್ಞಾನದಿಂದ, ಅಸಾಧ್ಯವೆಂದು ತೋರುತ್ತಿದ್ದ ಅನೇಕ ವಿಷಯಗಳು ಸಾಧ್ಯವಾಗಲು ಪ್ರಾರಂಭಿಸಿವೆ. ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದರೆ AI ಯುಗ ನಡೆಯುತ್ತಿದೆ. ಅದರ ನವೀಕರಣಗಳ ಜೊತೆಗೆ, ಮಾನವರ ಪ್ರಪಂಚವೂ ವೇಗವಾಗಿ ಬದಲಾಗುತ್ತಿದೆ. ಈಗ AI ಮೂಲಕ ಜನರ ಸಾವಿನ ದಿನಾಂಕ ಮತ್ತು ಸಮಯದ ಮುನ್ಸೂಚನೆಯನ್ನು ಕಂಡುಹಿಡಿಯಲಾಗುತ್ತಿದೆ. ಮನುಷ್ಯನಿಗೆ ತಾನು ಹೇಗೆ ಮತ್ತು ಯಾವಾಗ ಸಾಯುತ್ತೇನೆ ಎಂಬ ಕುತೂಹಲ ಇದ್ದೇ ಇರುತ್ತದೆ. ಜನರು ಸಹ ಅದರ ಉತ್ತರಕ್ಕಾಗಿ ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಆದರೆ ಅವರಿಗೆ ನಿಖರವಾದ ಉತ್ತರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನೀವು ಯಾವಾಗ ಸಾಯಬಹುದು ಎಂಬುದನ್ನು ಕಂಡುಹಿಡಿಯಲು ಯುರೋಪಿಯನ್ ದೇಶ ಡೆನ್ಮಾರ್ಕ್‌ನ ವಿಜ್ಞಾನಿಗಳು AI ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾಲಯವು ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ‘ಡೆತ್ ಕ್ಯಾಲ್ಕುಲೇಟರ್’ ಅನ್ನು ಸಿದ್ಧಪಡಿಸಿದೆ. ಈ ಸಾವಿನ ಮುನ್ಸೂಚಕದ ಬಗ್ಗೆ ಇದು ವ್ಯಕ್ತಿಯ ಜೀವನದ ಅವಧಿಯನ್ನು ಅತ್ಯಂತ ನಿಖರತೆಯಿಂದ…
ಶಿವಮೊಗ್ಗ: ನೀರಿನ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಹೆಣ್ಣು ಮಗು ಕೊನೆಯುಸಿರೆಳೆದಿದೆ. ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಆಸೀಫ್-ಅಂಜುಮ್ ದಂಪತಿಯ ಪುತ್ರಿ ಆನಮ್ ಫಾತಿಮಾ ಸಾವನ್ನಪ್ಪಿದ ಮಗುವಾಗಿದೆ. ಮಗಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕಾಬೂಲ್: ಆಗ್ನೇಯ ಅಫ್ಘಾನಿಸ್ತಾನದಲ್ಲಿ ನೆಲಬಾಂಬ್ ನಿಂದ ಉಂಟಾದ ಸ್ಫೋಟದಲ್ಲಿ ಒಂಬತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಕ್ಕಳು ಗುಂಪಾಗಿ ಆಟವಾಡುತ್ತಿದ್ದಾಗ ನೆಲಬಾಂಬ್ ಸ್ಪೋಟಗೊಂಡಿದೆ. ರಷ್ಯಾದ ಆಕ್ರಮಣದ ಸಂದರ್ಭದಲ್ಲಿ ಸ್ಫೋಟಗೊಳ್ಳದ ಉಳಿದಿದ್ದ ನೆಲಬಾಂಬ್ ಮಕ್ಕಳ ಕೈಗೆ ಸಿಕ್ಕಿದ್ದು, ಅವರು ಅದರಲ್ಲಿ ಆಟವಾಡುತ್ತಿದ್ದಾಗ ನೆಲಬಾಂಬ್ ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕೋಲಾರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಾರಾಯಣಸ್ವಾಮಿ(40), ಪವನ್(12), ನಿತಿನ್(10) ಮೃತರಾಗಿದ್ದಾರೆ. ಮಾಹಿತಿಯ ಪ್ರಕಾರ ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ. ಪತ್ನಿ ಲಕ್ಷ್ಮೀ ಬೇರೊಬ್ಬರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು, ಇದೇ ಕಾರಣದಿಂದಾಗಿ ತನ್ನ ಇಬ್ಬರು ಮಕ್ಕಳೊಂದಿಗೆ ಪತಿ ನಾರಾಯಣಸ್ವಾಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಜಾಮೀನು ಆದೇಶವನ್ನು ಹರಿದು ನ್ಯಾಯಾಧೀಶರನ್ನು ನಿಂದಿಸಿದ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ವಿರುದ್ಧದ ದೂರಿನ ವಿಚಾರಣೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. “ಕೋರ್ಟ್ ಆರೋಪಿಯೊಬ್ಬನಿಗೆ ನೀಡಿದ್ದ ಜಾಮೀನು ಆದೇಶವನ್ನು ಹರಿದು ಹಾಕಿ ಅದನ್ನು, ನೆಲದ ಮೇಲೆ ಎಸೆದು, ಜಾಮೀನು ನೀಡಿದ ಸೆಷನ್ಸ್ ನ್ಯಾಯಾಧೀಶರನ್ನು ಕೆಟ್ಟದಾಗಿ ನಿಂದಿಸಿದ್ದು, ಅವರ ಪೊಲೀಸ್ ಠಾಣೆಗೆ ತಾವೇ ನ್ಯಾಯಾಧೀಶರಂತೆ ವರ್ತಿಸಿದ್ದು, ಇಂತಹ ಪೊಲೀಸ್ ಅಧಿಕಾರಿಯನ್ನು ಕಾನೂನು ಪ್ರಕಾರ ವಿಚಾರಣೆಗೆ ಒಳಪಡಿಸಿ ಶಿಕ್ಷಿಸಬೇಕು. ನ್ಯಾಯಾಲಯ ಈ ಅಧಿಕಾರಿಯ ಬಗ್ಗೆ ಯಾವುದೇ ಸಹಾನುಭೂತಿಯನ್ನು ತೋರಿಸಲು ಸಾಧ್ಯವಿಲ್ಲ ಹೀಗಾಗಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಧೀಶ ನಟರಾಜ್ ಅವರು ಪೋಲಿಸ್ ಇನ್ಸ್ ಪೆಕ್ಟರ್ ಹರೀಶ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಹರೀಶ್ ನಿಂದ ಇಂತಹ ಕೃತ್ಯ ಎಸಗಿದ್ದಕ್ಕಾಗಿ ಇಲಾಖಾ ವಿಚಾರಣೆ ನಡೆಸುವ ಮೂಲಕ ಪೊಲೀಸ್ ಇಲಾಖೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿದೆ. ದೂರುದಾರರಿಗೆ ಜಾಮೀನು ಮಂಜೂರು ಮಾಡಿದ ಸೆಷನ್ಸ್ ನ್ಯಾಯಾಧೀಶರನ್ನು ನಿಂದಿಸಿದ್ದು ಮಾತ್ರವಲ್ಲದೆ,…
ಪಕ್ಕದ ಮನೆಯ ಯುವತಿ ನಿತ್ಯ ಮನೆ ಮುಂದಿನ ರಂಗೋಲಿಯನ್ನು ತುಳಿದು ಅಳಿಸಿ ಹಾಕಿ, ಕಿರುಕುಳ ನೀಡುತ್ತಿದ್ದಾಳೆ ಎಂದು ದಂಪತಿ ದೂರಿದ್ದಾರೆ. ನೆರೆ-ಹೊರೆಯವರ ಗಲಾಟೆ ಪ್ರಕರಣವು ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯ ಅಪಾರ್ಟಮೆಂಟ್‌ನಲ್ಲಿ ನಡೆದಿದೆ. ಪಕ್ಕದ ಮನೆಯಾಕೆ ರಂಗೋಲಿ ಅಳಿಸುವುದು, ಶೂ ರ್ಯಾಕ್ ಅನ್ನು ಕಾಲಿನಲ್ಲಿ ಒದ್ದು ಬೀಳಿಸುತ್ತಿದ್ದಾಳೆ. ಈ ರೀತಿ ಸಾಕಷ್ಟು ಬಾರಿ ಮಾನಸಿಕ ಕಿರಿಕುಳ ನೀಡುತ್ತಿದ್ದಾಳೆ ಎಂದು ಸರಿತಾ ಎಂಬಾಕೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಪೋಸ್ಟ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈಕೆಯಿಂದ ಮಾನಸಿಕವಾಗಿ ಕಿರುಕುಳವಾಗುತ್ತಿದೆ. ಪ್ರತಿ ದಿನ ಜಗಳವಾಡಲು ಆಗುವುದಿಲ್ಲ. ಪ್ರಶ್ನೆ ಮಾಡಿದರೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾಳೆ ಎಂದು ಸರಿತಾ ಶಿಂಧೆ ಪೋಸ್ಟ್ ಮಾಡಿದ್ದಾರೆ. ಇನ್ನೂ ನಾವು ದೂರು ಕೊಟ್ಟರೆ ಪೊಲೀಸರು ಎನ್‌ಸಿಆರ್ ಮಾಡುತ್ತಾರೆ. ಆದರೆ ನಮ್ಮ ಮೇಲೆ ಪ್ರತಿ ದೂರು ಕೊಟ್ಟರೆ ಎಫ್ಐಆರ್ ಮಾಡುತ್ತಾರೆ ಎಂದು ದಂಪತಿ ದೂರಿದ್ದಾರೆ ಎಂದು ವರದಿ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ಬಿಜೆಪಿ ಎಂಎಲ್ ಸಿ ಹಾಗೂ ಮಾಜಿ ಸಚಿವ ಸಿಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ನಿಶಾ ಅವರು ಕಾಂಗ್ರೆಸ್ ಸೇರಲು ತನ್ನ ತಂದೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುತ್ತಾರೆ ಎಂಬ ಗುಮಾನಿ ಹಬ್ಬಿತ್ತು. ಆದರೆ ಈಗ ಸ್ವತಃ ನಿಶಾ ಯೋಗೇಶ್ವರ ಅವರೇ ಕಾಂಗ್ರೆಸ್ ಸೇರುವುದಾಗಿ ಹೇಳಿಕೊಂಡಿದ್ದಾರೆ. ನಾನು ಕಾಂಗ್ರೆಸ್ ಸೇರುವುದರ ಬಗ್ಗೆ ತಂದೆಯವರಿಗೆ ಯಾವುದೇ ಆಕ್ಷೇಪವಿಲ್ಲ, ಅವರ ಸಂಪೂರ್ಣ ಬೆಂಬಲ ನನಗಿದೆ. ತಂದೆ ಚಿಕ್ಕವಯಸ್ಸಿನಿಂದಲೂ ನನಗೆ ಸಂಪೂರ್ಣ ಸ್ವತಂತ್ರ ನೀಡಿದ್ದಾರೆ ಎಂದು ನಿಶಾ ಅವರು ತಿಳಿಸಿದ್ದಾರೆ. ನಿಶಾ ಅವರ ನಿರ್ಧಾರವು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಡಿ.ಕೆ. ಸುರೇಶ್ ಗೆ ಹೆಚ್ಚಿನ ಮತಗಳನ್ನು ಪಡೆಯಲು ಸಹಾಯ ಮಾಡುತ್ತದೆ. ನಿಶಾ ಅವರು ಸುರೇಶ್ ಮತ್ತು ಕೆಪಿಸಿಸಿ ಮುಖ್ಯಸ್ಥ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಜೆಡಿಎಸ್…
ಇಂಗ್ಲೆಂಡ್ ನಲ್ಲಿ ಮಹಿಳೆಯೊಬ್ಬರಿಗೆ ಅವಳಿ ಮಕ್ಕಳು ಜನಿಸಿದೆ. ಇದರಲ್ಲೇನು ವಿಶೇಷ ಅಂತೀರಾ? ಹೌದು, ಇಲ್ಲೊಂದು ವಿಚಿತ್ರವಾದ ಘಟನೆ ನಡೆದಿದೆ. ಮೊದಲ ಮಗು ಜನಿಸಿದ 22 ದಿನಗಳ ನಂತರ ಎರಡನೇ ಮಗು ಜನಿಸಿತ್ತು. ಇದು ಬಹಳ ಅಪರೂಪದ ಪ್ರಕರಣ. ಏನಿದು ಘಟನೆ ? ಬನ್ನಿ ತಿಳಿಯೋಣ. ವರದಿ ಪ್ರಕಾರ, ಇಂಗ್ಲೆಂಡ್ ನಿವಾಸಿ ಕೇಲಿ ಡಾಯ್ಲ್ ಗರ್ಭಿಣಿಯಾಗಿದ್ದರು. ತಾನು ಅವಳಿ ಮಕ್ಕಳ ತಾಯಿಯಾಗಲಿದ್ದೇನೆ ಎಂದು ವೈದ್ಯರು ಹೇಳಿದಾಗ ಆಕೆ ಖುಷಿಯಿಂದ ಕುಣಿದಾಡಿದ್ದರು. ಎಲ್ಲಾ ಸ್ಕ್ಯಾನ್ ಗಳು ಸಾಮಾನ್ಯವಾಗಿದ್ದವು. ಆಗ ವೈದ್ಯರು, ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆ. 22ನೇ ವಾರದವರೆಗೂ ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಭಯಾನಕ ನೋವು ಕಾಣಿಸಿಕೊಂಡಿತು. ಹಾಸಿಗೆಯಿಂದ ಏಳುವುದು ಕಷ್ಟವಾಯಿತು, ಕೈಲಿಯನ್ನು ಆಸ್ಪತ್ರೆಗೆ ಕರೆದೊಯ್ದು ಐದು ದಿನಗಳ ಕಾಲ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆಕೆ ತನ್ನ ಮೊದಲ ಮಗು ಆರ್ಲೋಗೆ ಸ್ವಾಭಾವಿಕವಾಗಿ ಜನ್ಮ ನೀಡಿದಳು. ಆದರೆ ಮಗು ಕೇವಲ 1.1 ಪೌಂಡ್ ತೂಕವನ್ನು…