Author: admin

ತುಮಕೂರು: ಲೋಕಸಭೆ ಚುನಾವಣೆ ಹೊಸ್ತಿನಲ್ಲಿ ತುಮಕೂರಿನಲ್ಲಿ ಪಕ್ಷಾಂತರ ಪರ್ವ ಭರ್ಜರಿಯಾಗಿ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಮುಖಂಡರು ಪಕ್ಷ ಬದಲಿಸುತ್ತಿದ್ದಾರೆ. ಲೋಕಸಭೆ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ರಣತಂತ್ರ ರಚಿಸಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಬಿಜೆಪಿಯ ವಿ. ಸೋಮಣ್ಣ ಅವರ ಗೆಲುವಿಗೆ ಮಾಜಿ ಪ್ರಧಾನಿ ದೇವೇಗೌಡ ತುಮಕೂರು ಪ್ರವಾಸ ಆರಂಭಿಸಿದ್ದಾರೆ. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಎಚ್. ನಿಂಗಪ್ಪ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನ ನೀಡಿದ್ದ ಎಚ್ ಡಿಡಿ ಅವರ ನಡೆ ಕಾಂಗ್ರೆಸ್ ಮುಖಂಡರ ಕಣ್ಣು ಕೆಂಪಾಗಿಸಿದೆ. ಇದೇ ವೇಳೆ ದಳಪತಿಗಳಿಗೆ ಶಾಕ್ ಕೊಡಲು ಮುಂದಾದ ಕೈ ಪಡೆಯು ಎಚ್ ಡಿಡಿ ಭೇಟಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡುತ್ತಿದೆ. ಜೆಡಿಎಸ್ ಮುಖಂಡನಿಗೆ ಗಾಳ ಹಾಕಿದ ಕೈ ನಾಯಕರು, ತುಮಕೂರು ‌ನಗರದ ಜೆಡಿಎಸ್ ಮುಖಂಡ ಗೋವಿಂದರಾಜುಗೆ ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿದ್ದಾರೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದ…

Read More

ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು, ಇಂದು ರೋಣ ವಿಧಾನಸಭಾ ಮತಕ್ಷೇತ್ರದ ಕಣಗಿನಹಾಳ ಗ್ರಾಮದಲ್ಲಿ  ಮತಯಾಚನೆಯನ್ನು ಮಾಡಿದರು. ಇನ್ನೂ ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಕಳಕಪ್ಪ ಬಂಡಿ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಗ್ರಾಮದ ಸಹಕಾರಿ ರಂಗದ ಪಿತಾಮಹ ಶ್ರೀ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿದರು.  ತದನಂತರ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296  

Read More

ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮೈಸೂರು ಒಡೆಯರ್‌ ಆಗಿರುವ ಯದುವೀರ್‌ ಈ ವೇಳೆ ಸುಮಾರು 5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಹೆಸರಲ್ಲಿ ಯಾವುದೇ ಕೃಷಿ ಭೂಮಿಯಾಗಲಿ, ಸೈಟ್‌ ಆಗಲಿ, ಮನೆ ಆಗಲಿ ಇಲ್ಲ ಎಂದು ತಮ್ಮ ಅಫಿಡವಿಟ್‌ ನಲ್ಲಿ ಘೋಷಿಸಿಕೊಂಡಿದ್ದಾರೆ. ಯದುವೀರ್‌ ಒಡೆಯರ್‌ ಅವರ ಕೈಯಲ್ಲಿ ಸದ್ಯ ಒಂದು ಲಕ್ಷ ರೂ. ನಗದನ್ನು ಹೊಂದಿದ್ದು, ವಿವಿಧ ಬ್ಯಾಂಕ್‌ ಅಕೌಂಟ್‌ ಗಳಲ್ಲಿ 1.36 ಕೋಟಿ ರೂ. ಅನ್ನು ಹೊಂದಿದ್ದಾರೆ. 3.25 ಕೋಟಿ ರೂ. ಮೌಲ್ಯದ 4 ಕೆಜಿ ಚಿನ್ನ, 14 ಲಕ್ಷ ರೂ. ಮೌಲ್ಯದ 20 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಒಟ್ಟು 4.99 ಕೋಟಿ ರೂ. ಚರಾಸ್ತಿಯನ್ನು ಯದುವೀರ್‌ ಈ ವೇಳೆ ಘೋಷಿಸಿಕೊಂಡಿದ್ದಾರೆ. ಇನ್ನು, ಅವರ ಪತ್ನಿ ತ್ರಿಷಿಕಾ ಬಳಿ 75 ಸಾವಿರ ರೂ. ನಗದು ಇದ್ದು, ಎಚ್‌ ಡಿಎಫ್‌ ಸಿ ಬ್ಯಾಂಕ್‌ನಲ್ಲಿ 1…

Read More

ಆರ್ಥಿಕ ವರ್ಷದ ಮೊದಲ ದಿನ ಎಲ್ ​​ಪಿಜಿ ದರವನ್ನು ಕಡಿಮೆ ಮಾಡಲಾಗಿದ್ದು, ಸರ್ಕಾರ ಗ್ಯಾಸ್​ ಬಳಕೆದಾರರಿಗೆ ಗುಡ್ ​ನ್ಯೂಸ್​ ನೀಡಿದೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 30.50 ರೂ. ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. ಇನ್ನು 5ಕೆಜಿ ಎಫ್​ ಟಿಎಲ್ (ಫ್ರೀ ಟ್ರೇಡ್​ ಎಲ್ ​ಪಿಜಿ)​ ಸಿಲಿಂಡರ್​ ಬೆಲೆ 7.50 ರೂಪಾಯಿ ಇಳಿಕೆಯಾಗಿದೆ. ಈ ಪರಿಷ್ಕೃತ ದರ ಇಂದು (ಏಪ್ರಿಲ್​ 01) ರಿಂದಲೇ ಅನ್ವಯವಾಗಲಿದೆ ಎನ್ನಲಾಗಿದೆ. ಈ ಹಿಂದೆ ಮಾರ್ಚ್‌ 1ರಿಂದ ಅಂದರೆ ಇಂದಿನಿಂದ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿತ್ತು ಮಾರ್ಚ್ ಮೊದಲ ದಿನವೇ. ತೈಲ ಕಂಪನಿಗಳು ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್ ‌ಗಳ ಬೆಲೆಯನ್ನು ಹೆಚ್ಚಿಸಿದ್ದವು. ಈ ಹಿಂದೆ ಜನವರಿ, ಫೆಬ್ರವರಿ ತಿಂಗಳಲ್ಲೂ ಬೆಲೆ ಏರಿಕೆಯಾಗಿತ್ತು. ಈಗ ಆರ್ಥಿಕ ವರ್ಷದ ಆರಂಭದಲ್ಲಿ ವಾಣಿಜ್ಯ ಸಿಲಿಂಡರ್ ಗಳಿಗೆ ಇಳಿಕೆ ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More

ಕೊರಟಗೆರೆ : ಪಟ್ಟಣದ  ಎಸ್ ಎಸ್ ಆರ್ ವೃತದಲ್ಲಿ ತ್ರಿವಿಧ ದಾಸೋಹಿ ನಡೆದಾಡುವ ದೇವರು ಕಾಯಕಯೋಗಿ ಡಾ.ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಬಿಜೆಪಿ ಮುಖಂಡ ಪವನ್ ಕುಮಾರ್  ಮಾತನಾಡಿ,  ಪ್ರತಿ ವರ್ಷದಂತೆ ಕೊರಟಗೆರೆಯಲ್ಲಿ ಸಮಸ್ತ ನಾಗರಿಕರ ಸಹಕಾರದಿಂದ ಸ್ವಾಮೀಜಿಯವರ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಹಾಗೆಯೇ ಇಂದು ಕೂಡ  ಡಾ.ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತೋತ್ಸವ ಕಾರ್ಯಕ್ರಮವನ್ನು ಸ್ವಾಮೀಜಿಯವರ ಭಾವಚಿತ್ರಕ್ಕೆ  ಪೂಜೆ ಸಲ್ಲಿಸಿ ಪುಷ್ಪಾರ್ಚನೆಯನ್ನು ಮಾಡಿ  ಹಬ್ಬದ ರೀತಿ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷರಾದ ದರ್ಶನ್ ಮಾತನಾಡಿ,  ನಮಗೆ ತಿಳಿದಿರುವ ಹಾಗೆ  ಡಾ.ಶಿವಕುಮಾರ್ ಸ್ವಾಮೀಜಿಯವರ ಕೊಡುಗೆ ಏನೆಂಬುದು  ನಮ್ಮ ರಾಜ್ಯಕ್ಕೆ ಅಲ್ಲ ಇಡೀ ದೇಶಕ್ಕೆ ತಿಳಿದಿದೆ. ಸ್ವಾಮೀಜಿಗಳು ಎಂದರೆ ಹೀಗಿರಬೇಕು. ಮಠದಲ್ಲಿ ವಾಸಿಸುವ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದರ ಜೊತೆಗೆ ಆ ಮಕ್ಕಳಿಗೆ ಊಟದ ವ್ಯವಸ್ಥೆ ಆ ಮಕ್ಕಳಿಗೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಇಂದು ಪ್ರಪಂಚದ ಮೂಲೆ…

Read More

ಮಾಜಿ ಸಿಎಂ ಯಡಿಯೂರಪ್ಪಹಾಗೂ ಅವರ ಮಕ್ಕಳ ವಿರುದ್ಧ ಸಿಡಿದೆದ್ದಿರುವ ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ, “ಈ ಲೋಕಸಭಾ ಚುನಾವಣೆ ಬಳಿಕ ವಿಜಯೇಂದ್ರ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಉಳಿಯಲ್ಲ” ಎಂದು ಭವಿಷ್ಯ ನುಡಿದಿದ್ದಾರೆ. ಸುದ್ದಿಘೋಷ್ಟಿ ನಡೆಸಿ ಮಾತನಾಡಿದ ಈಶ್ವರಪ್ಪ, ‘ಬಿಎಸ್‌ ವೈ ಪೂರ್ತಿ ಕುಟುಂಬ ಮೋಸದ ಕುಟುಂಬ, ಬರೀ ಮೋಸದ ರಾಜಕಾರಣ ಮಾಡುತ್ತಿದ್ದಾರೆ. ಒಂದು ನಗರಸಭಾ ಟಿಕೆಟ್‌ಗೆ 5 ಜನರಿಗೆ ಮಾತು ಕೊಟ್ಟು ಕಾರ್ಯಕರ್ತರಿಗೆ ಮೋಸ ಮಾಡುತ್ತಿದ್ದಾರೆ . ಈ ಚುನಾವಣೆ ಬಳಿಕ ವಿಜಯೇಂದ್ರ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇರುವುದಿಲ್ಲ. ಯಾಕೆಂದರೆ, ಕಳೆದ ಬಾರಿ 25 ಸೀಟು ಗೆದ್ದಿತ್ತು. ಆದರೆ ಈ ಬಾರಿ ಯಾರ್ಯಾರನ್ನೋ ಅಭ್ಯರ್ಥಿ ಮಾಡಿದ್ದಾರೆ, ಎಷ್ಟು ಗೆಲ್ಲುತ್ತೇವೆ ಗೊತ್ತಿಲ್ಲ. ರಾಘವೇಂದ್ರ ಈ ಬಾರಿ ಆಯ್ಕೆಯಾಗುವುದಿಲ್ಲ ಅಲ್ಲಿಗೆ ಕುಟುಂಬ ರಾಜಕಾರಣ ನಿಲ್ಲುತ್ತದೆ’ ಎಂದು ಹೇಳಿದರು. “ನನಗೆ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತ ಎಂಬ ಹೆಸರಿದೆ ಅದನ್ನು ಉಳಿಸಿಕೊಂಡು ಹೋಗ್ತೇನೆ ಎಂದರು. ಇನ್ನು ಮುಸ್ಲಿಂ ಮತಗಳನ್ನು ನಿರೀಕ್ಷೆ ಮಾಡ್ತೀರಾ ಎಂಬ ಪ್ರಶ್ನೆಗೆ ರಾಷ್ಟ್ರವಾದಿ…

Read More

ಬೆಂಗಳೂರು: ಬಾಂಬ್ ಹಾಕುವುದೇ ಬ್ರ್ಯಾಂಡ್ ಬೆಂಗಳೂರು ಮಾದರಿಯಾಗಿದೆ. ಬೆಂಗಳೂರನ್ನು ಬಾಂಬ್​ ನಿಂದ ರಕ್ಷಣೆ ಮಾಡಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ರಾಜ್ಯಸಭೆ ಚುನಾವಣೆಯಲ್ಲಿ ನಾಸೀರ್ ಹುಸೇನ್ ಗೆದ್ದಾಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿದವು. ಕಾಂಗ್ರೆಸ್ ​ ನಾಯಕರು ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಅಂದರು, ಆದರೆ ಈಗ ಬಾಂಬ್ ಬೆಂಗಳೂರು ಆಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಸಿಟಿ ರವಿ ಹರಿಹಾಯ್ದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೆದ್ದಾಗಲೂ ಕೂಡ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಲಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ನಾಸೀರ್ ಹುಸೇನ್ ಗೆಲುವನ್ನು ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿ ಸಂಭ್ರಮಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡುತ್ತಾ ಸಿಎಂ, ಡಿಸಿಎಂ, ಪರಮೇಶ್ವರ್, ದಿನೇಶ್ ಗುಂಡೂರಾವ್ ನಮ್ಮ ಕಿವಿಗೆ ಹೂ‌ವು ಮೂಡಿಸಲು ಪ್ರಯತ್ನ ಮಾಡಿದರು ಎಂದು ವಾಗ್ದಾಳಿ ಮಾಡಿದರು. ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಾಟೆಯಲ್ಲಿ ಪಾಲ್ಗೊಂಡವರನ್ನು ಅಮಾಯಕರು ಎಂದು ಕಾಂಗ್ರೆಸ್ ವಕಾಲತ್ತು…

Read More

ಬೆಂಗಳೂರು: ಹೆಚ್.​ಡಿ. ಕುಮಾರಸ್ವಾಮಿ ಅವರು ಕಮಲದ ಧ್ವಜ ಹಾಕಿದ್ದಾರೆ, ಬದುಕಿದ್ದು ಸತ್ತಂತೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ರಾಜ್ಯದ ಜನರಿಗೆ ನಾವು ಹೇಳಿದಂತೆ ಮಾತು ಉಳಿಸಿಕೊಂಡಿದ್ದೇವೆ. ಮಂಡ್ಯದ ಜನತೆ ಸ್ವಾಭಿಮಾನಕ್ಕೆ ಮತಕೊಡಿ ಎಂದು ಮನವಿ ಮಾಡಿದರು. ಮಂಡ್ಯ ರಾಜಕಾರಣ ನೋಡಿದರೆ ನಾಚಿಗೆ ಆಗುತ್ತೆ. ಪುಟ್ಟರಾಜು ಟಿಕೆಟ್ ​ಗಾಗಿ ಕಾದು ಕುಳಿತಿದ್ದ, ಇದೀಗ ಗೋವಿಂದ. ಕುಮಾರಸ್ವಾಮಿ ಕಮಲದ ಧ್ವಜ ಹಾಕಿಕೊಂಡಿದ್ದಾರೆ. ಬದುಕಿದ್ದು ಸತ್ತಂತೆ ಎಂದರು. ಕಳೆದ ಬಾರಿ ಮೈತ್ರಿಯಂತೆ ಕುಮಾರಸ್ವಾಮಿ ಅವರಿಗೆ ಸಹಾಯ ಮಾಡಲು ಬಂದಿದ್ದೆ. ಆದರೆ ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಆಗಿಲ್ಲ. ಆದರೆ ಈಗ ತಮ್ಮ ಅಧಿಕಾರ ತೆಗೆದವರ ಜೊತೆಯೇ ಕುಮಾರಸ್ವಾಮಿ ಹೋಗಿದ್ದಾರೆ” ಎಂದರು. “ಹೆಚ್​.ಡಿ. ಕುಮಾರಸ್ವಾಮಿ ಹಾಸನದಿಂದ ರಾಮನಗರಕ್ಕೆ ಬಂದಿದ್ದರು. ಇದೀಗ ಮಂಡ್ಯಕ್ಕೆ ಬಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು, ಮಾಡಲಿ. ಬೆಂಗಳೂರು ಗ್ರಾಮಾಂತರದಲ್ಲಿ ಭಾವನನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಎಲ್ಲಾ ಕಡೆ ನೀವೇ ನಿಂತರೆ ಕಾರ್ಯಕರ್ತರು ಏನು…

Read More

ಮೈಸೂರು: ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರ ಗೆಲ್ಲಲು ಪಣ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಳಿಗೆರೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, “ನಾನು ಸಿಎಂ ಸ್ಥಾನದಲ್ಲಿ ಇರಬೇಕೋ ಬೇಡವೋ? ನಾನು ಸಿಎಂ ಸ್ಥಾನದಲ್ಲಿರಬೇಕು ಅಂದರೇ ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆ‍ಲ್ಲಿಸಿ” ಎಂದು ಮನವಿ ಮಾಡಿದರು. “ವರುಣಾ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ನಿಮ್ಮಿಂದ ಎರಡು ಬಾರಿ ಮುಖ್ಯಮಂತ್ರಿಯಾದೆ. ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಡಿ. ನನಗಿಂತ ಹೆಚ್ಚು ಲೀಡ್ ಕೊಟ್ಟು ಸುನಿಲ್ ಬೋಸ್ ಗೆಲ್ಲಿಸಿ. ಆಗ ನನ್ನನ್ನು ಯಾರೂ ಮುಟ್ಟಲ್ಲ” ಎಂದು ಹೇಳಿದರು. “ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಹೆಣ್ಣುಮಕ್ಕಳ ಆರ್ಥಿಕ‌ ಸಾಮರ್ಥ್ಯ ಹೆಚ್ಚಿದೆ. ದುಡಿಯುವ ಅವಕಾಶವೂ ಹೆಚ್ಚಿದೆ. ಪುರುಷರ ಜೇಬಿಗೆ ಹಣ ಉಳಿತಾಯವಾಗಿದೆ. ಜನಸಾಮಾನ್ಯರ ಜೇಬಿಗೆ ಹಣ ಹಾಕಿ ನಮ್ಮ ಜನರ ಕೊಳ್ಳುವ ಶಕ್ತಿ ಹೆಚ್ಚಿಸಿದ್ದೇವೆ. ಇದನ್ನು ವಿರೋಧಿಸುವ ಬಿಜೆಪಿಯ ಕಾರ್ಯಕರ್ತರೂ, ಬೆಂಬಲಿಗರೂ ನಮ್ಮ ಗ್ಯಾರಂಟಿ ಯೋಜನೆಗಳ ಫಾಲಾನುಭವಿಗಳಾಗಿದ್ದಾರೆ” ಎಂದರು. ನಮ್ಮತುಮಕೂರಿನ…

Read More

ರಾಗಿ ಅಂಬಲಿ ಕುಡಿಯದೇ ಇದ್ರೆ ನಿಮಗೆ ದೊಡ್ಡ ನಷ್ಟ! ರಾಗಿ ಅಂಬಲಿ ಕುಡಿಯುವುದರಿಂದ ಹೊಟ್ಟೆಗೆ ತುಂಬಾ ಆರಾಮದಾಯಕ ಮತ್ತು ತಂಪಾಗಿರುತ್ತದೆ. ರಾಗಿ ಅಂಬಲಿಯಲ್ಲಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ನೀವು ರಾಗಿ ಅಂಬಲಿಯನ್ನು ಒಂದು ಲೋಟ ಕುಡಿದರೂ ನಾಲ್ಕು ಗಂಟೆಯಾದರೂ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಭಾವನೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಬೇಸಿಗೆಯಲ್ಲಿ ಮಾತ್ರವಲ್ಲದೆ ಪ್ರತಿನಿತ್ಯ ರಾಗಿ ಜಾವ ಕುಡಿದರೆ ಎಲುಬುಗಳು ಕೂಡ ಆರೋಗ್ಯಕರವಾಗಿರುತ್ತದೆ. ಮೀನು ಬೇಯಿಸಿದಾಗ ಹೀಗೆ ಮಾಡಿದರೆ ವಾಸನೆ ಬರುವುದಿಲ್ಲ..! ಮೀನನ್ನು ಬೇಯಿಸಿದ ನಂತರ, ಸಾಧ್ಯವಾದಷ್ಟು ಬೇಗ ಅಡಿಗೆ ಸ್ವಚ್ಛಗೊಳಿಸಿ. ಇದರಿಂದ ವಾಸನೆ ಕಡಿಮೆಯಾಗುತ್ತದೆ. ಸ್ಟೌ ಮತ್ತು ಕೌಂಟರ್ ಟಾಪ್ ಗಳನ್ನು ಸ್ವಚ್ಛಗೊಳಿಸುವುದರಿಂದ ವಾಸನೆ ದೂರವಾಗುತ್ತದೆ. ಇನ್ನು ಯಾವುದೇ ಸಲಹೆಗಳನ್ನು ಅನುಸರಿಸಲು ಬಯಸದವರು ಸ್ವಲ್ಪ ಸಮಯದವರೆಗೆ ಫ್ಯಾನ್ ಅನ್ನು ಆನ್ ಮಾಡಬಹುದು ಮತ್ತು ಏರ್ ಫ್ರೆಶ್ನರ್ ಗಳನ್ನು ಬಳಸಬಹುದು. ಮೀನು ಹುರಿಯುವಾಗ ಬೇರೆ ಬಾಣಲೆಯಲ್ಲಿ ನೀರನ್ನು ಕುದಿಸಿ. ಇದಕ್ಕೆ 2-3 ಸ್ಪೂನ್…

Read More